ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 27ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 27ರ ದಿನಭವಿಷ್ಯ

ಲಕ್ಷ್ಮೀದೇವಿಗೆ ಸಿಹಿಪದಾರ್ಥದ ನೈವೇದ್ಯವನ್ನು ಮಾಡಿ. ಅದು ಸಕ್ಕರೆ ಆಗಿರಲಿ, ದ್ರಾಕ್ಷಿಯೇ ಆಗಿರಲಿ. ಹೀಗೆ ಮಾಡುವುದರಿಂದ ಆದಾಯದಲ್ಲಿ ಸ್ಥಿರತೆ ಬರುತ್ತದೆ. ಅದರಲ್ಲೂ ಸ್ವಂತ ವ್ಯವಹಾರ, ವ್ಯಾಪಾರ ಮಾಡುವವರು, ಫ್ರೀಲ್ಯಾನ್ಸರ್ ಆಗಿ ಕಾರ್ಯ ನಿರ್ವಹಿಸುವರಿಗೆ ಅನಕೂಲ ಆಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಒಂದು ಕೆಲಸ ಮುಗಿಸುವುದಕ್ಕೆ ನಾಲ್ಕಾರು ಸಲ ಓಡಾಡಬೇಕು ಎಂಬ ಪರಿಸ್ಥಿತಿ ಎದುರಿಸುತ್ತೀರಿ. ನೀವು ಈ ದಿನ ಮನೆಗೆ ಬೇಕಾದಂಥ ದಿನಸಿ ಪದಾರ್ಥಗಳನ್ನು ಖರೀದಿ ಮಾಡುವಂತೆ ಇದ್ದಲ್ಲಿ ಗುಣಮಟ್ಟದ ಬಗ್ಗೆ ಹೆಚ್ಚು ನಿಗಾ ವಹಿಸಿ. ನಿಮ್ಮ ವೈಯಕ್ತಿಕ ನಿರ್ಧಾರಗಳಲ್ಲಿ ಇತರರು ವಿಪರೀತ ಮೂಗು ತೂರಿಸುತ್ತಿದ್ದಾರೆ, ಇದು ಒಂದು ಬಗೆಯಲ್ಲಿ ಮಾನಸಿಕ ಕಿರಿಕಿರಿ ಆಗುತ್ತಿದೆ ಎಂಬುದನ್ನು ಸಂಬಂಧಪಟ್ಟ ವ್ಯಕ್ತಿಗಳಿಗೆ ಯಾವ ಮುಲಾಜು ಸಹ ನೋಡದೆ ಹೇಳುತ್ತೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಬೆಳಗ್ಗೆ ಹಾಸಿಗೆಯಿಂದ ಎದ್ದ ಕ್ಷಣದಿಂದಲೇ ಒಂದು ಬಗೆಯ ಉತ್ಸಾಹ ನಿಮ್ಮಲ್ಲಿ ಇರುತ್ತದೆ. ಕುಟುಂಬ ಸದಸ್ಯರೊಬ್ಬರ ಆರೋಗ್ಯದ ಸ್ಥಿತಿ ಸ್ವಲ್ಪ ಮಟ್ಟಿಗೆ ಚಿಂತೆಗೆ ಕಾರಣ ಆಗಲಿದೆ. ಮಕ್ಕಳ ಒತ್ತಾಯದ ಮೇರೆಗೆ ನೀವು ತೆರಳುವಂಥ ಸ್ಥಳದಲ್ಲಿ ವಿಪರೀತ ಜನರು ಸೇರಿರುವುದು ನಿಮಗೆ ದಣಿವು, ಮುಜುಗರ ಉಂಟು ಮಾಡುತ್ತದೆ. ವಾಹನ ಪಾರ್ಕಿಂಗ್ ಬಗ್ಗೆ ಮುಂಚಿತವಾಗಿಯೇ ಪ್ಲಾನಿಂಗ್ ಮಾಡಿಕೊಳ್ಳುವುದು ಒಳ್ಳೆಯದು.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮಗೆ ಗೊತ್ತಿರುವ ವಿಷಯ- ವಿಚಾರವನ್ನು ಎಷ್ಟೇ ಹತ್ತಿರದ ಸ್ನೇಹಿತರಾದರೂ ಉಚಿತವಾಗಿ ಹಂಚಿಕೊಳ್ಳಬಾರದು ಎಂಬ ಬಗ್ಗೆ ಗಟ್ಟಿ ನಿರ್ಧಾರ ಮಾಡಲಿದ್ದೀರಿ. ಡೇರಿ ಉತ್ಪನ್ನಗಳ ಮಾರಾಟಗಾರರಿಗೆ ಆದಾಯ ಹಾಗೂ ಲಾಭದಲ್ಲಿ ಏರಿಕೆ ಆಗುವ ಸಾಧ್ಯತೆಗಳಿವೆ. ಸಣ್ಣ ಅಳತೆಯ ಫಾರ್ಮ್ ಹೌಸ್ ವೊಂದು ಖರೀದಿ ಮಾಡಬೇಕು ಎಂದು ಹುಡುಕಾಟ ನಡೆಸುತ್ತಾ ಇರುವವರಿಗೆ ಮನಸ್ಸಿಗೆ ಹಿಡಿಸುವ ಆಸ್ತಿಯೊಂದು ದೊರೆಯಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

Leave a Reply

Your email address will not be published. Required fields are marked *