ನವದೆಹಲಿ, ಏಪ್ರಿಲ್ 30: ಕಳೆದ ವರ್ಷ ಜೂನ್ನಲ್ಲಿ ಲಂಡನ್ನಲ್ಲಿ ನಿಧನರಾದ ಉದ್ಯಮಿ ಸಂಜಯ್ ಕಪೂರ್ ಅವರ ಆಸ್ತಿಗಳನ್ನು ಫ್ರೀಜ್ ಮಾಡಲಾಗಿದೆ. ಅವರು 30,000 ಕೋಟಿ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ. ಅವರ ಮೂರನೇ ಪತ್ನಿ ಪ್ರಿಯಾ ಸಚ್ದೇವ ಕಪೂರ್ ಮತ್ತು ನಟಿ ಕರಿಷ್ಮಾ ಕಪೂರ್ (Karishma Kapoor) ಅವರ ಎರಡನೇ ಮದುವೆಯಿಂದ ಪಡೆದ ಮಕ್ಕಳಾದ ಕಿಯಾನ್ ಕಪೂರ್ ಮತ್ತು ಸಮೈರಾ ಕಪೂರ್ ನಡುವಿನ ಗಲಾಟೆ ತಾರಕಕ್ಕೇರಿತ್ತು. ಇದೀಗ ಕುಟುಂಬ ವಿವಾದದ ನಡುವೆ ಅವರ ಆಸ್ತಿಗಳನ್ನು ಸಂರಕ್ಷಿಸಲು ದೆಹಲಿ ಹೈಕೋರ್ಟ್ ಆದೇಶಿಸಿದೆ. ಇದರಿಂದ ಕರಿಷ್ಮಾ ಕಪೂರ್ ಮಕ್ಕಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಕಿಯಾನ್ ಮತ್ತು ಸಮೈರಾ ಇಬ್ಬರೂ ಪ್ರಿಯಾ ಕಪೂರ್ ಅವರು ಸಂಜಯ್ ಕಪೂರ್ ಅವರ ವಿಲ್ ಅನ್ನು ನಕಲಿ ಮಾಡಿದ್ದಾರೆ ಮತ್ತು ಆಸ್ತಿಗಳ ಅಪೂರ್ಣ ಪಟ್ಟಿಯನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಿಯಾ ಕಪೂರ್ ನ್ಯಾಯಾಲಯಕ್ಕೆ ಸಲ್ಲಿಸಿದ ಪಟ್ಟಿಯಲ್ಲಿ ಸಂಜಯ್ ಕಪೂರ್ ಒಡೆತನದ ಹಲವಾರು ಸ್ಥಿರ ಆಸ್ತಿಗಳು ಮತ್ತು ಹೆಚ್ಚಿನ ಮೌಲ್ಯದ ವರ್ಣಚಿತ್ರಗಳನ್ನು ಸೇರಿಸಲಾಗಿಲ್ಲ ಎಂದು ಮಕ್ಕಳು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸಂಜಯ್ ಕಪೂರ್ ಸತ್ತ ಮೇಲೆ ಆಸ್ತಿ ವಿವಾದ; ನಮಗೂ ಪಾಲು ಕೊಡಿ ಎಂದು ಕೋರ್ಟ್ಗೆ ಹೋದ ಕರೀಶ್ಮಾ ಮಕ್ಕಳು
ಪ್ರಿಯಾ ಕಪೂರ್ ಯಾವುದೇ ಆಸ್ತಿಗಳನ್ನು ಮಾರಾಟ ಮಾಡದಂತೆ ಅಥವಾ ವರ್ಗಾಯಿಸದಂತೆ ದೆಹಲಿ ಹೈಕೋರ್ಟ್ ನಿರ್ಬಂಧಿಸಿದೆ. ಈ ಪ್ರಕರಣವು ಇತ್ಯರ್ಥವಾಗುವವರೆಗೆ ಎಲ್ಲಾ ಆಸ್ತಿಗಳನ್ನು ಸಂರಕ್ಷಿಸುವಂತೆ ಆದೇಶಿಸಿದೆ. ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್ ಅವರ ತಾಯಿ ವಿಲ್ನ ಸತ್ಯಾಸತ್ಯತೆ ಮತ್ತು ಸಿಂಧುತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ ಎಂದು ಹೇಳಿರುವ ಕೋರ್ಟ್ ಈ ಆದೇಶ ನೀಡಿದೆ.
ಇದನ್ನೂ ಓದಿ: ‘ದೇವರು ಅಷ್ಟೊಂದು ಐಶ್ವರ್ಯ ಕೊಟ್ಟಿದಾನಲ್ಲ’; ಸಂಜಯ್ ಕಪೂರ್ ಆಸ್ತಿ ವಿವಾದದಲ್ಲಿ ಕೋರ್ಟ್ ಅಭಿಪ್ರಾಯ
ಸಂಜಯ್ ಕಪೂರ್ ಅವರ ವಿದೇಶಿ ಬ್ಯಾಂಕ್ ಖಾತೆಗಳು ಮತ್ತು ಕ್ರಿಪ್ಟೋಕರೆನ್ಸಿ ಹೋಲ್ಡಿಂಗ್ಗಳ ಕಾರ್ಯಾಚರಣೆಯನ್ನು ನ್ಯಾಯಾಲಯವು ತಕ್ಷಣ ನಿಲ್ಲಿಸಿದೆ. ಇದರೊಂದಿಗೆ, ಬ್ಯಾಂಕ್ ಖಾತೆ ವಿವರಗಳು ಮತ್ತು ಖಾತೆಯ ಹೇಳಿಕೆಗಳನ್ನು ನ್ಯಾಯಾಲಯದ ಮುಂದೆ ಸಲ್ಲಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ