ಬೆಂಗಳೂರು, ಜೂನ್ 03: ನೂತನ ಸಿಎಂ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟಕ್ಕೆ ಡಾ. ಯತೀಂದ್ರ ಸಿದ್ದರಾಮಯ್ಯ ಸೇರ್ಪಡೆಯಾಗಿದ್ದಾರೆ. ರಾಜ್ಯಪಾಲರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದ್ದು, ಈ ವೇಳೆ ತದೇಕ ಚಿತ್ತದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರನನ್ನು ನೋಡಿದ್ದಾರೆ. ಜೊತೆಗೆ ಪಕ್ಕದಲ್ಲಿದ್ದ ಹೈಕೋರ್ಟ್ ಸಿಜೆಗೆ ತಮ್ಮ ಪುತ್ರ ಎಂದು ಪರಿಚಯಿಸಿದ್ದಾರೆ. ಪ್ರಮಾಣವಚನ ಬಳಿಕ ತಂದೆಯ ಕಾಲುಮುಟ್ಟಿ ನಮಸ್ಕರಿಸಿ ಯತೀಂದ್ರ ಕೂಡ ಆಶೀರ್ವಾದ ಪಡೆದಿದ್ದಾರೆ. ಪುತ್ರ ಭುಜ ಮುಟ್ಟಿ ಮಾಜಿ ಸಿಎಂ ಸಿದ್ದರಾಮಯ್ಯ ಹಾರೈಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.