Headlines

ಸತತ ಸೋಲಿನ ಸುಳಿಯಲ್ಲಿರುವ ಅಕ್ಷಯ್ ಕುಮಾರ್ ಸಂಭಾವನೆಯಲ್ಲಿ ಭಾರೀ ಕಡಿತ – Kannada News | Akshay Kumar’s ‘Bhoot Bangla’: Priyadarshan Reunion, Pay Cut and Cast Salaries

ಅಕ್ಷಯ್ ಕುಮಾರ್ ಮತ್ತು ನಿರ್ದೇಶಕ ಪ್ರಿಯದರ್ಶನ್ ಸುಮಾರು 16 ವರ್ಷಗಳ ನಂತರ ‘ಭೂತ್ ಬಾಂಗ್ಲಾ’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇದಕ್ಕೂ ಮೊದಲು, ಇಬ್ಬರೂ ‘ಹೇರಾ ಫೇರಿ’, ‘ಭೂಲ್ ಭುಲೈಯಾ’, ‘ಗರಂ ಮಸಾಲಾ’, ‘ಭಾಗಂ ಭಾಗ್’, ‘ದೇ ದನಾ ದನ್’ ಚಿತ್ರಗಳಿಗೆ ಒಟ್ಟಿಗೆ ಕೆಲಸ ಮಾಡಿದ್ದರು. ಇತ್ತೀಚೆಗೆ ಅಕ್ಷಯ್ ಕುಮಾರ್ ಅವರು ಅಂದುಕೊಂಡ ರೀತಿಯಲ್ಲಿ ಸಿನಿಮಾ ಯಶಸ್ಸು ಕಾಣುತ್ತಿಲ್ಲ. ಹಾಗಾದರೆ, ಅವರ ಸಂಭಾವನೆ ಕಡಿಮೆ ಆಗಿದೆಯೇ? ಆ ಬಗ್ಗೆ ಇಲ್ಲಿದೆ ವಿವರ.

ಅಕ್ಷಯ್ ಕುಮಾರ್ ಅಭಿನಯದ ‘ಭೂತ್ ಬಾಂಗ್ಲಾ’ ಚಿತ್ರ ಬಿಡುಗಡೆಯಾಗಿದೆ. ಹಲವು ವರ್ಷಗಳ ನಂತರ, ಅವರು ನಿರ್ದೇಶಕ ಪ್ರಿಯದರ್ಶನ್ ಅವರೊಂದಿಗೆ ಕೆಲಸ ಮಾಡಿದ್ದಾರ. ಅಕ್ಷಯ್ ಕುಮಾರ್ ಜೊತೆಗೆ, ಈ ಚಿತ್ರದಲ್ಲಿ ಪರೇಶ್ ರಾವಲ್, ರಾಜ್‌ಪಾಲ್ ಯಾದವ್, ಟಬು, ವಾಮಿಕಾ ಗಬ್ಬಿ ಕೂಡ ನಟಿಸಿದ್ದಾರೆ. ‘ಭೂತ್ ಬಾಂಗ್ಲಾ’ ಚಿತ್ರದ ನಟರು ತಮ್ಮ ಪಾತ್ರಗಳಿಗೆ ಎಷ್ಟು ಸಂಭಾವನೆ ಪಡೆದರು ಎಂಬುದರ ವಿವರ ಇಲ್ಲಿದೆ.

ಕೆಲವು ವರದಿಯ ಪ್ರಕಾರ, ಅಕ್ಷಯ್ ಕುಮಾರ್ ಈ ಚಿತ್ರಕ್ಕಾಗಿ ತಮ್ಮ ಸಂಭಾವನೆಯಲ್ಲಿ ಶೇಕಡಾ 28.5 ರಷ್ಟು ಕಡಿತ ಮಾಡಿಕೊಂಡಿದ್ದಾರೆ. ‘ಜಾಲಿ ಎಲ್ಎಲ್ಬಿ 3’ ಚಿತ್ರಕ್ಕಾಗಿ ಅಕ್ಷಯ್ 70 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಈಗ ಅವರು ‘ಭೂತ್ ಬಾಂಗ್ಲಾ’ ಚಿತ್ರಕ್ಕಾಗಿ ಕೇವಲ 50 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ಇದರ ಹೊರತಾಗಿಯೂ, ಅವರು ಚಿತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟರಾಗಿದ್ದಾರೆ.

ಈ ಹಾರರ್ ಕಾಮಿಡಿ ಚಿತ್ರಕ್ಕೆ ನಟಿ ಟಬು ಉಳಿದ ಸಿನಿಮಾಗಿಂತ ಕಡಿಮೆ ಸಂಭಾವನೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ‘ಆರೋ ಮೇ ಕಹಾನ್ ದಮ್ ಥಾ’ ಚಿತ್ರದಲ್ಲಿನ ಪಾತ್ರಕ್ಕಾಗಿ ಟಬು 3 ಕೋಟಿ ರೂ. ಸಂಭಾವನೆ ಪಡೆದಿದ್ದರು. ಈಗ, ‘ಭೂತ್ ಬಾಂಗ್ಲಾ’ ಚಿತ್ರಕ್ಕಾಗಿ ಅವರು 2.5 ಕೋಟಿ ರೂ. ಸ್ವೀಕರಿಸಿದ್ದಾರೆ.

ಭೂತ್ ಬಂಗ್ಲಾ’ ಚಿತ್ರಕ್ಕಾಗಿ ನಟಿ ವಾಮಿಕಾ ಗಬ್ಬಿ 3 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ವಾಮಿಕಾ ಅವರ ಸಂಭಾವನೆ ಬಹಳಷ್ಟು ಹೆಚ್ಚಾಗಿದೆ. ಅವರು ಅನೇಕ ನಿರ್ದೇಶಕರ ಮೊದಲ ಆಯ್ಕೆಯಾಗುತ್ತಿದ್ದಾರೆ. ಹಿರಿಯ ನಟ ಪರೇಶ್ ರಾವಲ್ 2 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.

ಇದನ್ನೂ ಓದಿ: ‘ಭೂತ್ ಬಂಗ್ಲ’ ಅಡ್ವಾನ್ಸ್ ಬುಕ್ಕಿಂಗ್‌: ಅಕ್ಷಯ್ ಕುಮಾರ್ ಸಿನಿಮಾಗೆ 15 ಕೋಟಿ ರೂ. ಓಪನಿಂಗ್ ನಿರೀಕ್ಷೆ

ಈ ಚಿತ್ರಕ್ಕಾಗಿ ನಟ ರಾಜ್‌ಪಾಲ್ ಯಾದವ್ 1.5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಜಿಶು ಸೇನ್‌ಗುಪ್ತಾ 1 ಕೋಟಿ ರೂಪಾಯಿ ಸ್ವೀಕರಿಸಿದ್ದಾರೆ. ‘ಭೂತ್ ಬಾಂಗ್ಲಾ’ ಚಿತ್ರದ ಒಟ್ಟು ಬಜೆಟ್ 120 ಕೋಟಿ ರೂಪಾಯಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *