Headlines

ಸಮಾಜ ದೂರ ತಳ್ಳಿದವರಿಗೆ ಇವರೇ ಆಸರೆ! ಎಚ್‌ಐವಿ ಪೀಡಿತ ಮಕ್ಕಳ ಕಣ್ಣೀರು ಒರೆಸುತ್ತಿರುವ ಮಂಗಳೂರಿನ ತಬುಸುಮ್ – Kannada News | Mangaluru’s Snehadipa: Tabassum’s Unwavering HIV Care Transforms Lives for 19 Years

ಮಂಗಳೂರು, ಏ.17: ಸಮಾಜದಲ್ಲಿ ಇಂದಿಗೂ ಎಚ್‌ಐವಿ ಪೀಡಿತರನ್ನು ನೋಡುವ ದೃಷ್ಟಿಕೋನ ಬದಲಾಗಿಲ್ಲ. ಇಂತಹ ಸಂದರ್ಭದಲ್ಲಿ ಎಚ್‌ಐವಿ ಪೀಡಿತ ಮಕ್ಕಳು ಮತ್ತು ವ್ಯಕ್ತಿಗಳಿಗೆ ಆಸರೆಯಾಗಿ ನಿಂತಿರುವ ಮಂಗಳೂರಿನ ಬೊಂದೆಲ್​​​​​ನ  ‘ಸ್ನೇಹದೀಪ’ ಸಂಸ್ಥೆಯ ಶ್ರೀಮತಿ ತಬುಸುಮ್ ಅವರು ತಮ್ಮ ಸುದೀರ್ಘ 19 ವರ್ಷಗಳ ಸೇವೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸೊಲ್ಮೆ ಎಂಬ ಯ್ಯೂಟಬ್​​ ಚಾನೆಲ್​​​ನಲ್ಲಿ ಹಂಚಿಕೊಂಡಿದ್ದಾರೆ. ಎಚ್‌ಐವಿ ಪೀಡಿತರನ್ನು ದೂರು ಇಡುವ ಮುನ್ನ ಈ ಕಥೆಯನ್ನು ಒಮ್ಮೆ ನೋಡಲೇಬೇಕು. ಈ ಮಹಿಳೆಯ ಸೇವೆಗೆ ಅನೇಕ ಪ್ರಶಸ್ತಿಗಳು ಹಾಗೂ ಮೆಚ್ಚುಗೆ ವ್ಯಕ್ತವಾಗಿದೆ. ಅದರೂ ಈ ಪರಿಶ್ರಮದ ಹಿಂದೆ ಅನೇಕ ನೋವಿನ ಕಥೆಗಳು ಇದೆ.

‘ಸ್ನೇಹದೀಪ’ ಸಂಸ್ಥೆಯನ್ನು ಎಚ್‌ಐವಿ ಸೋಂಕಿತ ಮಕ್ಕಳಿಗಾಗಿ ಪ್ರೀತಿ ಮತ್ತು ಕಾಳಜಿ ನೀಡುವ ಉದ್ದೇಶದಿಂದ ಈ ಸಂಸ್ಥೆಯನ್ನು ಆರಂಭಿಸಲಾಯಿತು. ಇಲ್ಲಿ ಮಕ್ಕಳಿಗೆ ಕೇವಲ ವಸತಿ ಮಾತ್ರವಲ್ಲದೆ, ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಗೂ ಆದ್ಯತೆ ನೀಡಲಾಗುತ್ತದೆ. ಆರಂಭದಲ್ಲಿ ಸೋಂಕಿತರ ಅಂತ್ಯಸಂಸ್ಕಾರ ಮಾಡುವಾಗ ಸಮಾಜದಿಂದ ಭಾರಿ ವಿರೋಧ ವ್ಯಕ್ತವಾಗುತ್ತಿತ್ತು. ಮುಸ್ಲಿಂ ಸಮುದಾಯದವರೇ ಆಗಲಿ ಅಥವಾ ಇತರೇ ಆಗಲಿ, ಎಚ್‌ಐವಿ ಪೀಡಿತರ ಮೃತದೇಹಗಳನ್ನು ಮುಟ್ಟಲು ಹಿಂಜರಿಯುತ್ತಿದ್ದ ಕಾಲವದು. ಅಂತಹ ಸಮಯದಲ್ಲಿ ತಬುಸುಮ್ ಮತ್ತು ಅವರ ತಂಡವೇ ಮುಂದೆ ನಿಂತು ಸುಮಾರು ಮೃತದೇಹಗಳ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ.

ಇದನ್ನೂ ಓದಿ: ಯಾಣದ ಕಪ್ಪು ಶಿಲೆಗಳಿಗೆ ಈಗ ‘ರಾಷ್ಟ್ರೀಯ ಪಾರಂಪರಿಕ’ ಕಿರೀಟ: ಜಿಎಸ್‌ಐನಿಂದ ಐತಿಹಾಸಿಕ ಘೋಷಣೆ!

ವಿಡಿಯೋ ಇಲ್ಲಿದೆ ನೋಡಿ:

ಸೋಂಕಿತ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಪೌಷ್ಟಿಕ ಆಹಾರದ ಅಗತ್ಯವಿದೆ. ಇಲ್ಲಿ ಪ್ರತಿದಿನ ತಾಜಾ ಉಪಹಾರ ಮತ್ತು ಸಮತೋಲಿತ ಊಟವನ್ನು ನೀಡಲಾಗುತ್ತದೆ. ಎಚ್‌ಐವಿ ಎನ್ನುವುದು ಕೇವಲ ಶಾರೀರಿಕ ಕಾಯಿಲೆಯಲ್ಲ, ಅದು ವ್ಯಕ್ತಿಯನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಆದ್ದರಿಂದ ಸಮಾಜ ಅವರನ್ನು ದೂರವಿಡದೆ, ಸಾಮಾನ್ಯರಂತೆ ಬದುಕಲು ಅವಕಾಶ ನೀಡಬೇಕು ಎಂಬುದು ಅವರ ಮುಖ್ಯ ಮನವಿಯಾಗಿದೆ. ಯಾವುದೇ ಪ್ರಚಾರದ ಹಂಬಲವಿಲ್ಲದೆ ಕೇವಲ ಸೇವೆಯನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿರುವ ಇವರಿಗೆ, ಗುಣಮುಖರಾಗುತ್ತಿರುವ ಮಕ್ಕಳನ್ನು ನೋಡುವುದೇ ದೊಡ್ಡ ಸಮಾಧಾನ ಎಂದು ಹೇಳಿದ್ದಾರೆ. ಇವರ ಈ ಸೇವೆ ಅವರ ಕುಟುಂಬ ಕೂಡ ಹೆಚ್ಚಿನ ಬೆಂಬಲ ನೀಡಿದೆ. ತಮ್ಮ ಈ ಸೇವೆಯಲ್ಲಿ ಹಲವು ಸಮಸ್ಯೆಗಳು ಹಾಗೂ ಸವಾಲು ಎದುರಾಗಿದೆ ಎಂದು ಕಣ್ಣೀರು ಕೂಡ ಹಾಕಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *