ಬೆಂಗಳೂರು, (ಜೂನ್ 29): ಸರ್ಕಾರಿ ಆಸ್ಪತ್ರೆಯ ವೈದ್ಯರ Governmnet Hospital Doctor) ಕಳ್ಳಾಟ ಹೆಚ್ಚಾಗಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಡಾಕ್ಟರ್ಗಳು ಆಸ್ಪತ್ರೆಯಲ್ಲೇ ಇರಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ಕರ್ನಾಟಕ ಆರೋಗ್ಯ ಇಲಾಖೆ (Karnataka Health Deparment), ವೈದ್ಯರು ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಆರೋಗ್ಯ ಇಲಾಖೆ ಹೊಸ ರೂಲ್ಸ್ ಜಾರಿಗೆ ಮುಂದಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲವು ವೈದ್ಯರು ಆಸ್ಪತ್ರೆಗೆ ಬಂದು ಅಟೆಂಡೆನ್ಸ್ (facial attendance) ಪಂಚ್ ಮಾಡಿ ಹೋಗುತ್ತಾರೆ, ಹೀಗೆ ಕಳ್ಳಾಟವಾಡುವ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಇನ್ಮುಂದೆ ಬೀಳಲಿದೆ ಬ್ರೇಕ್. ಹೌದು…ಮೊಬೈಲ್ ನಲ್ಲಿ ಫೇಸಿಯಲ್ ಅಟೆಂಡೆನ್ಸ್ ಸ್ಕ್ರೀನಿಂಗ್ ಆ್ಯಪ್ ಮೂಲಕ ವೈದ್ಯರ ಟ್ರ್ಯಾಕಿಂಗ್ ಮಾಡಲು ಪ್ಲ್ಯಾನ್ ಮಾಡಿದೆ.
ಸರ್ಕಾರಿ ವೈದ್ಯರಿಗೆ ಬಂತು ಫೇಸಿಯಲ್ ಅಟೆಂಡೆನ್ಸ್
ಇತ್ತೀಚೆಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದು ನೆಟ್ಟಗಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ. ವೈದ್ಯರು ಸರಿಯಾದ ಟೈಮ್ ಗೆ ಬರೋದಿಲ್ಲ. ಇನ್ನು ಕೆಲವು ವೈದ್ಯರು ಹಾಗೂ ಸಿಬ್ಬಂದಿ ಆಸ್ಪತ್ರೆಗೆ ಬಂದು ಬಯೋಮೇಟ್ರಿಕ್ ಪಂಚ್ ಮಾಡಿ ಬೇರೆ ಆಸ್ಪತ್ರೆಗೆ ಹೋಗುವುದು. ಡ್ಯೂಟಿ ಬಿಟ್ಟು ಬೇರೆ ಪರ್ಸನಲ್ ಕೆಲಸದಲ್ಲಿ ಭಾಗಿಯಾಗುವ ಆರೋಪ ಕೇಳಿ ಬಂದಿದೆ. ಹೀಗಾಗಿ ಆರೋಗ್ಯ ಇಲಾಖೆ, ಫೇಸಿಯಲ್ ಅಟೆಂಡೆನ್ಸ್ ಎನ್ನುವ ಸರ್ಜಿಕಲ್ ಸ್ಟ್ರೈಕ್ ಗೆ ಮುಂದಾಗಿದೆ. ಆರೋಗ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಆರೋಗ್ಯ ಸೌಧ ಸಿಬ್ಬಂದಿ, ಆರೋಗ್ಯ ಕೇಂದ್ರಗಳು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಫೇಸಿಯಲ್ ಅಟೆಂಡೆನ್ಸ್ ಜಾರಿಗೆ ಮುಂದಾಗಿದೆ.
ಇದನ್ನೂ ಓದಿ: ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಬಸ್ ಪಾಸ್ ಶುಲ್ಕ ಮರುಪಾವತಿಗೆ ಅವಕಾಶ; ಅರ್ಜಿ ಸಲ್ಲಿಸುವುದು ಹೇಗೆ?
ಹಾಜರತಿಗೆ ಲಿಂಕ್ ಆಗಲಿದೆ ಸಿಬ್ಬಂದಿ ವೇತನ!
ಮೊಬೈಲ್ ನಲ್ಲಿ ಫೇಸಿಯಲ್ ಅಟೆಂಡೆನ್ಸ್ ಸ್ಕ್ರೀನಿಂಗ್ ಆ್ಯಪ್ ಮೂಲಕ ಟ್ರ್ಯಾಕಿಂಗ್ ಮಾಡಲು ಮುಂದಾಗಿದೆ. ವೈದ್ಯರು ಡ್ಯೂಟಿ ಟೈಮ್ ನಲ್ಲಿ ನಿಗಧಿತ ಆಸ್ಪತ್ರೆ ವ್ಯಾಪ್ತಿಯಿಂದ ಹೊರ ಹೋದ್ರೆ ಮಾಹಿತಿ ಸಿಗಲಿದೆ. ಜೊತೆಗೆ ತಡವಾಗಿ ಕರ್ತವ್ಯಕ್ಕೆ ಬಂದ್ರೆ ಕೂಡಾ ಮಾಹಿತಿ ಸಿಗಲಿದ್ದು, ಇತಂಹ ವೈದ್ಯರ ವಿರುದ್ಧ ಕಾನೂನು ಶಿಸ್ತು ಕ್ರಮದ ಅಸ್ತ್ರ ಪ್ರಯೋಗಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಜೊತೆಗೆ ಸಿಬ್ಬಂದಿ ಹಾಜರಾತಿ ವೇತನಕ್ಕೆ ಲಿಂಕ್ ಆಗಲಿದ್ದು ಕೆಲಸಕ್ಕೆ ತಕ್ಕ ವೇತನ ನೀಡುವ ವ್ಯವಸ್ಥೆ ಜಾರಿಗೆ ತರಲು ತೀರ್ಮಾನಿಸಲಾಗಿದೆ.
ಒಟ್ನಲ್ಲಿ ಸಿಎಂ ಡಿಕೆ ಶಿವಕುಮಾರ್ ಸಿಎಂ ಆಗ್ತೀದ್ದಂತೆ ರಾಜ್ಯದ ಎಲ್ಲ ಸರ್ಕಾರಿ ಸಿಬ್ಬಂದಿಗೆ ಸರಿಯಾದ ಟೈಮ್ ಗೆ ಕಚೇರಿಗೆ ಬರುವಂತೆ ಎಚ್ಚರಿಕೆ ನೀಡಿದ್ದು, ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಸಿಬ್ಬಂದಿಗೂ GPS ಬೇಸ್ಡ್ ಫೇಶಿಯಲ್ ಅಟೆಂಡೆನ್ ಪರಿಚಯಿಸಲು ಮುಂದಾಗಿದೆ. ಆದ್ರೆ, ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಎಂದು ಕಾದು ನೋಡಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.