Headlines

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಇಳಿಮುಖ: ರಾಜ್ಯ ಸರ್ಕಾರದ ವಿರುದ್ಧ ಪ್ರಲ್ಹಾದ ಜೋಶಿ ಕಿಡಿ – Kannada News | 2.12 Lakh Students Left Govt Schools: Prahlad Joshi Slams Karnataka Govt Over Shocking UDISE+ Report

ಕೇಂದ್ರ ಸಚಿವ ಪ್ರಲ್ಹಾದ ಜೋಶಿImage Credit source: PTI

ಬೆಂಗಳೂರು, ಜುಲೈ 10: ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಆಸರೆಯಾಗಿದ್ದ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ತರುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಾತ್ಮಕ ದಿವಾಳಿತನ ಪ್ರದರ್ಶಿಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ದಿನದಿಂದಲೂ ಅಧಿಕಾರ, ಕುರ್ಚಿ ಕಿತ್ತಾಟದಲ್ಲೇ ಕಾಲ ಕಳೆದಿದೆ. ಪರಿಣಾಮ ಆಡಳಿತಯಂತ್ರ ಸಂಪೂರ್ಣ ಸ್ತಬ್ಧಗೊಂಡಂತಿದ್ದು, ಶಿಕ್ಷಣ ಕ್ಷೇತ್ರದ ಮೇಲೂ ನೇರ ದುಷ್ಪರಿಣಾಮ ಬೀರಿದೆ ಎಂದವರು ದೂರಿದ್ದಾರೆ.

UDISE+ ವರದಿಯಿಂದ ಅಂಕಿ-ಅಂಶ ಬಹಿರಂಗ

ರಾಜ್ಯದ ಸಹಸ್ರಾರು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಭಾರೀ ಕುಸಿತ ಕಂಡಿರುವ ಬಗ್ಗೆ UDISE+ ವರದಿಯೇ ಬಹಿರಂಗಪಡಿಸಿದೆ. ಕಳೆದ ಮೂರು ವರ್ಷದಲ್ಲಿ 2.12 ಲಕ್ಷ ಮಕ್ಕಳು ಸರ್ಕಾರಿ ಶಾಲೆ ತೊರೆದಿರುವುದು ಕಾಂಗ್ರೆಸ್‌ ಸರ್ಕಾರದ ನಿಷ್ಕ್ರಿಯತೆಗೆ ಕೈಗನ್ನಡಿ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಬದಲು ಮುಚ್ಚುವಂಥ ಸ್ಥಿತಿಗೆ ತಂದಿರುವುದೇ ಈ ಸರ್ಕಾರದ ಮಹತ್ಸಾಧನೆ ಎಂದು ಜೋಶಿ ಟೀಕಿಸಿದ್ದಾರೆ.

ಇದನ್ನೂ ಓದಿ: ಪ್ರಹ್ಲಾದ್​​ ಜೋಶಿ ಭೇಟಿಯಾದ ಕೆ.ಹೆಚ್​. ಮುನಿಯಪ್ಪ; ಎಂಎಸ್​​ಪಿ ಅನುದಾನದ ಬಾಕಿ ಮೊತ್ತ ಬಿಡುಗಡೆಗೆ ಕೇಂದ್ರ ಸಚಿವರಿಗೆ ಮನವಿ

ವಿದ್ಯಾರ್ಥಿಗಳ ಸಂಖ್ಯೆ ಯಾವಾಗೆಷ್ಟು ಕುಸಿತ?

ಶೈಕ್ಷಣಿಕ ವರ್ಷ ದಾಖಲಾತಿ ಸಂಖ್ಯೆ
2023-24 11926303
2024-25 11780251
2025-26 11714214

2023-24ರಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ 1,19,26,303 ಇದ್ದರೆ, 2024-25ರಲ್ಲಿ ಅದು 1,17,80,251ಕ್ಕೆ ಇಳಿದು 1,46,052 ವಿದ್ಯಾರ್ಥಿಗಳ ಕುಸಿತ ದಾಖಲಾಗಿದೆ. 2025-26ರಲ್ಲಿ ಮತ್ತಷ್ಟು 66,037 ವಿದ್ಯಾರ್ಥಿಗಳು ಕಡಿಮೆಯಾಗಿದ್ದು, ಒಟ್ಟು ದಾಖಲಾತಿ 1,17,14,214ಕ್ಕೆ ತಲುಪಿದೆ. ಶಾಲೆಗಳ ಸಬಲೀಕರಣ ಮಾಡಬೇಕಾದ ಸರ್ಕಾರ, ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕೇಂದ್ರ ಸಚಿವರು ಆರೋಪಿಸಿದ್ದಾರೆ.

‘ಡ್ರಗ್ಸ್ ಹಬ್ ಆಗುತ್ತಿರುವ ಕರ್ನಾಟಕ’

ಒಂದೆಡೆ ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳಿಲ್ಲದೆ ಸೊರಗುತ್ತಿದ್ದರೆ, ಮತ್ತೊಂದೆಡೆ ಕರ್ನಾಟಕ ʼಡ್ರಗ್ಸ್ ಹಬ್’ ಆಗಿ ಮಾರ್ಪಡುತ್ತಿರುವುದು ತೀವ್ರ ಆತಂಕಕಾರಿ ಬೆಳವಣಿಗೆಯಾಗಿದೆ. ಅಮಾಯಕ ಯುವ ಪೀಳಿಗೆ ಇಂದು ದಾರಿ ತಪ್ಪುತ್ತಿದ್ದು, ಡ್ರಗ್ಸ್ ಜಾಲ ಹಾಗೂ ಸಮಾಜವಿರೋಧಿ ಚಟುವಟಿಕೆಯತ್ತ ಮುಖ ಮಾಡುತ್ತಿದ್ದಾರೆ. ಸಮಾಜದ, ವಿದ್ಯಾರ್ಥಿಗಳ ಹಿತ ಕಾಪಾಡಬೇಕಿದ್ದ ಸರ್ಕಾರ ಅದನ್ನೆಲ್ಲ ಮರೆತು ಒಳಜಗಳ, ಕುರ್ಚಿ ಕಿತ್ತಾಟ ಮತ್ತು ಅಧಿಕಾರದ ಅಮಲಿನಲ್ಲಿ ಮುಳುಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *