ಸಲ್ಮಾನ್ ಖಾನ್ ಧರಿಸಿರುವ ವಾಚಿನ ವಿಶೇಷತೆ ಏನು? ಬೆಲೆ ಎಷ್ಟು ಗೊತ್ತೆ? – Kannada News | Salman Khan’s saphire watch worth Rs 41 lakhs with Indian flag colours

ಸಲ್ಮಾನ್ ಖಾನ್ (Salman Khan), ಬಾಲಿವುಡ್​​ನ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರು. ಕೇವಲ ನಟರಷ್ಟೆ ಅಲ್ಲದೆ, ಸಿನಿಮಾ ನಿರ್ಮಾಣ ಮತ್ತು ಉದ್ಯಮಗಳಲ್ಲಿಯೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವರ್ಷಕ್ಕೆ ಸಾವಿರಾರು ಕೋಟಿ ಟರ್ನೋವರ್ ಉಳ್ಳ ಉದ್ಯಮಿ ಆಗಿರುವ ಸಲ್ಮಾನ್ ಖಾನ್, ಐಶಾರಾಮಿ ಜೀವನ ನಡೆಸುತ್ತಾರೆ. ಲಕ್ಷುರಿ ಕಾರುಗಳು, ಉಡುಗೆಗಳು, ಜೊತೆಗೆ ಅವರು ಧರಿಸುವ ವಾಚುಗಳ ಬೆಲೆಯೂ ಸಹ ಕೋಟಿಗಳಲ್ಲಿ ಇರುತ್ತದೆ. ಹಲವು ದುಬಾರಿ ವಾಚುಗಳ ಸಂಗ್ರಹ ಹೊಂದಿರುವ ಸಲ್ಮಾನ್ ಖಾನ್, ಇತ್ತೀಚೆಗೆ ಧರಿಸಿದ್ದ ವಾಚ್ ಒಂದು ನೆಟ್ಟಿಗರ ಗಮನ ಸೆಳೆದಿದೆ. ಏಕೆಂದರೆ ಇದು ಬಲು ಅಪರೂಪದ ವಾಚಾಗಿದೆ.

ಹಲವಾರು ಪ್ರತಿಷ್ಠಿತ ಬ್ರ್ಯಾಂಡುಗಳ ವಾಚುಗಳನ್ನು ಹೊಂದಿರುವ ಸಲ್ಮಾನ್ ಖಾನ್, ಇದೀಗ ‘ಜಾಕೋಬ್ ಆಂಡ್ ಕೋ’ ಜೊತೆ ಕೈಜೋಡಿಸಿ ವಿಶೇಷ ಆವೃತ್ತಿಯ ಕೈಗಡಿಯಾರವನ್ನು ಬಿಡುಗಡೆ ಮಾಡಿದ್ದಾರೆ. ಸಲ್ಮಾನ್ ಖಾನ್ ಅವರ ಅನ್‌ಬಾಕ್ಸಿಂಗ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಾಚು ಸಲ್ಮಾನ್ ಖಾನ್ ಎಡಿಷನ್ ಆಗಿದ್ದು, ವಾಚು ಎರಡು ಟೈಮ್​ ಜೋನ್​​ ಅನ್ನು ಸಹ ಹೊಂದಿದೆ ಎಂದು ಜಾಕೋಬ್ ಆಂಡ್ ಕೋ ಹೇಳಿದೆ.

ಸಲ್ಮಾನ್ ಖಾನ್ ಬಿಡುಗಡೆ ಮಾಡಿರುವ ವಾಚು ಐಷಾರಾಮಿ ಕರಕುಶಲತೆ ಮತ್ತು ವೈಯಕ್ತಿಕ ಕಥೆಯ ಸಮ್ಮಿಶ್ರಣವನ್ನು ಪ್ರತಿಬಿಂಬಿಸುತ್ತದೆ. ಇದು ಬ್ರ್ಯಾಂಡ್‌ನ ಜಾಗತಿಕ ವಿನ್ಯಾಸವನ್ನು ಹೊಂದಿದ್ದರೂ, ಭಾರತ ಹಾಗೂ ಸಲ್ಮಾನ್ ಖಾನ್ ಅವರ ಗುರುತನ್ನು ಸೂಕ್ಷ್ಮವಾಗಿ ನೆನಪಿಸುತ್ತದೆ. ವಾಟರ್ ರೆಸಿಸ್ಟೆನ್ಸ್ ಸಾಮರ್ಥ್ಯವಿರುವ ಈ ವಾಚ್ ಸ್ಟೇನ್‌ಲೆಸ್ ಸ್ಟೀಲ್ ಮತ್ತು ನೀಲ ಸ್ಫಟಿಕ (ಸಫೈರ್ ಕ್ರಿಸ್ಟಲ್) ಮಾಡಲ್ಪಟ್ಟಿದೆ. ಭಾರತೀಯ ರಾಷ್ಟ್ರೀಯ ಧ್ವಜದಿಂದ ಪ್ರೇರಿತವಾದ ಅಂಶಗಳನ್ನು ಒಳಗೊಂಡಿರುವ ಈ ವಾಚಿನ ಡಯಲ್ ಒಳಗೆ ವಿಶ್ವ ನಕ್ಷೆ ಸಹ ಇದೆ. ನೀಲಿ ಬಣ್ಣದ ಲೆದರ್ ಕೈಪಟ್ಟಿಯನ್ನು ಈ ವಾಚು ಹೊಂದಿದೆ.

ಇದನ್ನೂ ಓದಿ:‘ಮನೆಗೆ ವಾಪಸ್ ಹೋಗಿ’: ಮೋದಿ ಟ್ವೀಟ್ ಬಳಿಕ ವಿದ್ಯಾರ್ಥಿಗಳಿಗೆ ಸಲ್ಮಾನ್ ಖಾನ್ ಮನವಿ

‘ಜಾಕೋಬ್ ಆಂಡ್ ಕೋ’ ಹೇಳಿರುವಂತೆ, ಈ ವಿಶಿಷ್ಟವಾದ ವಾಚ್ ಸಲ್ಮಾನ್ ಖಾನ್ ಅವರ ಕುಟುಂಬ ಮತ್ತು ಅವರ ತಂದೆಯ ಪ್ರಭಾವದಿಂದ ಪ್ರೇರಿತವಾಗಿದೆ. ಕೇವಲ ಕರಕುಶಲತೆಯಷ್ಟೇ ಅಲ್ಲದೆ, ಈ ವಾಚ್ ಜೀವನದ ಸಾಧನೆ, ಶ್ರೇಷ್ಠತೆಯ ಬದ್ಧತೆ ಮತ್ತು ಅತ್ಯಂತ ಮುಖ್ಯವಾದ ಸಂಗತಿಗಳಿಗೆ ಗೌರವ ಸಲ್ಲಿಸುವ ಸಮರ್ಪಣಾ ಭಾವವನ್ನು ಪ್ರತಿನಿಧಿಸುತ್ತದೆ. ಕೇಸರಿ ಮತ್ತು ಹಸಿರು ಬಣ್ಣದ ಛಾಯೆಗಳು ಭಾರತದ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸಿದರೆ, 6 ಗಂಟೆಯ ಗುರುತಿನ ಬಳಿ ಕೆತ್ತಲಾದ ನಟನ ಹೆಸರು ಮತ್ತು ‘S.K.’ ಆರಂಭಿಕ ಅಕ್ಷರಗಳು ಸಲ್ಮಾನ್ ಖಾನ್ ಅವರ ಜಾಗತಿಕ ಪ್ರಭಾವ ಮತ್ತು ಸ್ಟೈಲ್ ಐಕಾನ್ ಸ್ಥಾನಮಾನವನ್ನು ಸೂಚಿಸುತ್ತವೆಯಂತೆ. ಈ ವಾಚಿನ ಬೆಲೆ ಸುಮಾರು 41 ಲಕ್ಷ ರೂಪಾಯಿಗಳು ಎನ್ನಲಾಗಿದೆ.

ಈ ವಾಚ್‌ನ ಆಕರ್ಷಕ ವಿಷಯವೆಂದರೆ ಇದು ಸ್ವತಂತ್ರವಾಗಿ ಹೊಂದಿಸಬಹುದಾದ ಡ್ಯುಯಲ್ ಟೈಮ್ ಜೋನ್ (ಎರಡು ಕಾಲ ವಲಯ) ವೈಶಿಷ್ಟ್ಯವನ್ನು ಹೊಂದಿದೆ, ಇದು ಗಂಟೆ ಮತ್ತು ನಿಮಿಷಗಳ ಸೆಟ್ಟಿಂಗ್‌ಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ನೀಡುತ್ತದೆ. ಈ ವಿಶಿಷ್ಟ ವೈಶಿಷ್ಟ್ಯವು ವಿವಿಧ ಕಾಲ ವಲಯಗಳ ನಡುವೆ ಸಂಚರಿಸುವವರಿಗೆ ಉಪಯೋಗವಾಗುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *