ಸಾಯಿ ಪಲ್ಲವಿಗೆ ಸಿಕ್ಕಿದೆ ಅವರ ಕನಸಿನ ಪಾತ್ರ ಮತ್ತು ನಿರ್ದೇಶಕ

ಸಾಯಿ ಪಲ್ಲವಿಗೆ ಸಿಕ್ಕಿದೆ ಅವರ ಕನಸಿನ ಪಾತ್ರ ಮತ್ತು ನಿರ್ದೇಶಕ

ಸಾಯಿ ಪಲ್ಲವಿ (Sai Pallavi), ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿ. ತಮ್ಮ ಸಮಕಾಲೀನ ಇತರೆ ನಟಿಯರಿಗಿಂತಲೂ ಬಹಳ ಭಿನ್ನ ನಟಿ ಸಾಯಿ ಪಲ್ಲವಿ. ತಮ್ಮ ಸಿನಿಮಾಗಳ ಆಯ್ಕೆ, ವ್ಯಕ್ತಿತ್ವ ಇತರೆ ಕಾರಣಗಳಿಂದಾಗಿ ಸಾಯಿ ಪಲ್ಲವಿ ಭಾರಿ ದೊಡ್ಡ ಅಭಿಮಾನಿ ವರ್ಗವನ್ನು ಪಡೆದುಕೊಂಡಿದ್ದಾರೆ. ಇದೀಗ ಸಾಯಿ ಪಲ್ಲವಿ ಬಾಲಿವುಡ್​​ಗೆ ಸಹ ಹಾರಿದ್ದಾರೆ. ಅಲ್ಲಿ ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿದ್ದು, ಇದೀಗ ಮೂರನೇ ಸಿನಿಮಾ ನಟನೆಯ ಅವಕಾಶ ಪಡೆದುಕೊಂಡಿದ್ದು, ಇದು ಒಂದು ರೀತಿ ಅವರ ಡ್ರೀಮ್ ಪ್ರಾಜೆಕ್ಟ್ ಸಹ ಹೌದೆನ್ನಬಹುದು.

ಭಾರತೀಯ ಚಿತ್ರರಂಗದ ಖ್ಯಾತ ತಾರೆ ಮಧುಬಾಲ ಜೀವನ ಆಧರಿಸಿದ ಸಿನಿಮಾ ಬಾಲಿವುಡ್​​ನಲ್ಲಿ ನಿರ್ಮಾಣ ಆಗುತ್ತಿದ್ದು, ನಟಿ ಸಾಯಿ ಪಲ್ಲವಿ, ಮಧುಬಾಲ ಅವರ ಪಾತ್ರದಲ್ಲಿ ನಟಿಸಲಿದ್ದಾರೆ. ಯಾವುದೇ ನಟಿಗಾದರೂ ಮಧುಬಾಲ ಅಂಥಹಾ ಲಿಜೆಂಡರಿ ನಟಿಯ ಪಾತ್ರದಲ್ಲಿ ನಟಿಸುವುದು ಕನಸೇ ಸರಿ. ಇದೀಗ ಸಾಯಿ ಪಲ್ಲವಿಗೆ ಆ ಅವಕಾಶ ಅರಸಿ ಬಂದಿದೆ.

ಸಿನಿಮಾದ ಮತ್ತೊಂದು ವಿಶೇಷವೆಂದರೆ ಲಿಜೆಂಡರಿ ಮಧುಬಾಲ ಜೀವನ ಆಧರಿತ ಸಿನಿಮಾ ನಿರ್ದೇಶಿಸುತ್ತಿರುವುದು ಬಾಲಿವುಡ್​​ ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ. ಇವರ ನಿರ್ದೇಶನದ ಸಿನಿಮಾನಲ್ಲಿ ನಟಿಸಲು ಬಾಲಿವುಡ್​ನ ದೊಡ್ಡ ದೊಡ್ಡ ಸೂಪರ್ ಸ್ಟಾರ್ ನಟ-ನಟಿಯರೇ ತುದಿಗಾಲಲ್ಲಿ ಕಾಯುತ್ತಾರೆ ಅಂಥಹುದರಲ್ಲಿ ಸಂಜಯ್ ಲೀಲಾ ಬನ್ಸಾಲಿ ದೊಡ್ಡ ಪ್ರಾಜೆಕ್ಟ್​​ಗೆ ಮತ್ತು ಅಷ್ಟೇ ದೊಡ್ಡ ಪಾತ್ರಕ್ಕೆ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಿರುವುದು ಸಾಮಾನ್ಯ ವಿಷಯವಲ್ಲ. ಈ ಪಾತ್ರಕ್ಕೆ ಕಿಯಾರಾ ಅಡ್ವಾಣಿ ಮತ್ತು ಅನಿತ್ ಪಡ್ಡಾ ಹೆಸರು ಸಹ ಕೇಳಿ ಬಂದಿತ್ತಂತೆ. ಆದರೆ ಸಾಯಿ ಪಲ್ಲವಿಯೇ ಈ ಪಾತ್ರಕ್ಕೆ ಫೈನಲ್ ಆಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಸಾಯಿ ಪಲ್ಲವಿ ಕೈತಪ್ಪಿದ ಮಧುಬಾಲಾ ಬಯೋಪಿಕ್ ಅವಕಾಶ: ಕಾರಣ ಏನು?

ಮಧುಬಾಲ ಪಾತ್ರದಲ್ಲಿ ನಟಿಸುತ್ತಿರುವ ಸಾಯಿ ಪಲ್ಲವಿ, ಇದೇ ಸಮಯದಲ್ಲಿ ಕನ್ನಡದ ಖ್ಯಾತ ಗಾಯಕಿ ಎಂಎಸ್ ಸುಬ್ಬಲಕ್ಷ್ಮಿ ಅವರ ಜೀವನ ಆಧರಿಸಿದ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ. ಒಟ್ಟಿಗೆ ಇಬ್ಬರು ದಿಗ್ಗಜರು ಜೀವನ ಆಧರಿತ ಸಿನಿಮಾನಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಇವುಗಳ ಜೊತೆಗೆ ಸಾಯಿ ಪಲ್ಲವಿ ಈಗಾಗಲೇ ಆಮಿರ್ ಖಾನ್ ಪುತ್ರ ಜುನೈದ್ ಖಾನ್ ಜೊತೆಗೆ ‘ಏಕ್ ದಿನ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಅದರ ಜೊತೆಗೆ ರಣ್​​ಬೀರ್ ಕಪೂರ್-ಯಶ್ ನಟನೆಯ ‘ರಾಮಾಯಣ’ ಸಿನಿಮಾನಲ್ಲಿ ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *