ನಟಿ ಸಾಯಿ ಪಲ್ಲವಿ ಅವರು ದಕ್ಷಿಣ ಭಾರತದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರಿಗೆ ಈಗ ಹಿಂದಿಯಿಂದಲೂ ಆಫರ್ಗಳು ಬರೋಕೆ ಆರಂಭ ಆಗಿವೆ. ಹಿಂದಿಯಲ್ಲಿ ಅವರು ನಟಿಸಿರುವ ‘ಏಕ್ ದಿನ್’ ಸಿನಿಮಾ ರಿಲೀಸ್ಗೆ ರೆಡಿ ಆಗಿದೆ. ಈ ಚಿತ್ರದ ವಿಶೇಷ ಪ್ರದರ್ಶನ ಆಯೋಜನೆ ಮಾಡಲಾಗಿತ್ತು. ಈ ವೇಳೆ ನಡೆದ ಘಟನೆ ಒಂದು ಚರ್ಚೆಗೆ ಕಾರಣ ಆಗಿದೆ. ಸಾಯಿ ಪಲ್ಲವಿ ಹೆಗಲಮೇಲೆ ಕೈ ಹಾಕಲು ಆಮಿರ್ ಖಾನ್ (Aamir Khan) ಮಗ ಜುನೈದ್ ಖಾನ್ ಮುಂದಾಗಿದ್ದರು. ಆ ಬಳಿಕ ಅವರು ನಡೆದುಕೊಂಡ ರೀತಿ ಎಲ್ಲರ ಗಮನ ಸೆಳೆದಿದೆ.
ಸಾಯಿ ಪಲ್ಲವಿ ಹಾಗೂ ಜುನೈದ್ ಖಾನ್ ಅವರ ‘ಏಕ್ ದಿನ್’ ಸಿನಿಮಾಗೆ ಸುನೀಲ್ ಪಾಂಡೆ ನಿರ್ದೇಶನ ಮಾಡಿದ್ದಾರೆ. ಇದು ಥಾಯಿ ಭಾಷೆಯ ‘ಒನ್ ಡೇ’ ಸಿನಿಮಾದ ರಿಮೇಕ್ ಆಗಿದೆ. ಮನ್ಸೂರ್ ಖಾನ್, ಆಮಿರ್ ಖಾನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮೇ 1ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ವಿಶೇಷ ಶೋ ನೋಡಿದ ಬಳಿಕ ಆಮಿರ್ ಖಾನ್ ಅತ್ತಿದ್ದಾರೆ.
He tried to put his hands on her, but realized she is Sai Pallavi, not like other actresses. pic.twitter.com/qRLXjP7x2P
— Nand@n (@nandantwts) April 26, 2026
ವಿಶೇಷ ಶೋ ಬಳಿಕ ಸುದ್ದಿಗೋಷ್ಠಿ ಒಂದನ್ನು ಆಯೋಜನೆ ಮಾಡಲಾಯಿತು. ಆಗ ಜುನೈದ್ ಖಾನ್ ಅವರು ಸಾಯಿ ಪಲ್ಲವಿ ಹೆಗಲಮೇಲೆ ಕೈ ಹಾಕಲು ಮುಂದಾಗಿದ್ದಾರೆ. ಆ ಬಳಿಕ ಅವರಿಗೆ ಏನನ್ನಿಸಿತೋ ಏನೋ, ಹೆಗಲಮೇಲೆ ಕೈ ಹಾಕದೆ ಹಿಂದಕ್ಕೆ ತೆಗೆದುಕೊಂಡಿದ್ದಾರೆ.ಈ ವಿಡಿಯೋ ವೈರಲ್ ಆಗಿದೆ. ಅನೇಕರು ಇದಕ್ಕೆ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ‘ಬಹುಶಃ ಜುನೈದ್ಗೆ ಇವರು ಉಳಿದ ಹೀರೋಯಿನ್ಗಳಂತೆ ಅಲ್ಲ ಎಂಬುದು ಆ ಬಳಿಕ ಅರಿವಾಗಿರಬಹುದು’ ಹೀಗಾಗಿ, ಕೈ ಹಿಂದಕ್ಕೆ ತೆಗೆದುಕೊಂಡಿದ್ದಾರೆ’ ಎಂದು ಅನೇಕರು ಹೇಳಿದ್ದಾರೆ.
ಇದನ್ನೂ ಓದಿ: ಆಮಿರ್ ಖಾನ್ ನನ್ನ ತಂದೆ ಅಂತ ಹೇಳಿಕೊಳ್ಳಲಿಲ್ಲ ಪುತ್ರ ಜುನೈದ್ ಖಾನ್; ಕಾರಣ ಏನು?
ಇನ್ನು ಕೆಲವರು ಜುನೈದ್ ಪರ ಬ್ಯಾಟ್ ಬೀಸಿದ್ದಾರೆ. ‘ಜುನೈದ್ ಅವರಿಗೆ ಸಾರ್ವಜನಿಕವಾಗಿ ಹೇಗಿರಬೇಕು, ಯಾವುದು ನಟಿಯರಿಗೆ ಹಿತ ನೀಡುತ್ತದೆ, ಯಾವುದು ಅಹಿತ ಎನಿಸುತ್ತದೆ ಎಂಬುದು ಗೊತ್ತಿದೆ’ ಎಂದು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.