ಬೆಂಗಳೂರು, ಜುಲೈ 24: ಆರ್.ಟಿ. ನಗರದ ದೇವಗೌಡ ರಸ್ತೆಯಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣ ಪ್ರಯಾಣಿಕರಿಗೆ ಸೇವೆ ನೀಡುವ ಬದಲು ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ. ಬಸ್ ಸ್ಟ್ಯಾಂಡ್ ಶೌಚಾಲಯ, ಗೋದಾಮಾಗಿ ಮಾರ್ಪಟ್ಟಿದ್ದು, ರಾತ್ರಿ ಕುಡುಕರ ಅಡ್ಡೆಯಾಗಿದೆ. ನಿರ್ವಹಣೆ ಇಲ್ಲದ ಕಾರಣ ನಿಲ್ದಾಣದ ಆಸನಗಳು, ಚಾವಣಿಗಳು ಸಂಪೂರ್ಣವಾಗಿ ಮುರಿದು ಬಿದ್ದಿವೆ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿದ್ದು, ದುರದೃಷ್ಟವಶಾತ್ ಈ ಬಸ್ ನಿಲ್ದಾಣ ಸಾರಿಗೆ ಸಚಿವರ ಕ್ಷೇತ್ರದಲ್ಲೇ ಇದ್ದರೂ ಇದರ ದುಸ್ಥಿತಿ ಅವರ ಗಮನಕ್ಕೆ ಬಂದಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.