Headlines

ಸಿಖ್ಖರನ್ನು ಕೊಂದ ಗಾಂಧಿ ಕುಟುಂಬದ ಕುಡಿಯೊಂದಿಗೆ ನಾನು ಕೈಕುಲುಕುವುದಿಲ್ಲ; ರವನೀತ್ ಬಿಟ್ಟು ಪ್ರತಿಕ್ರಿಯೆ – Kannada News | Gandhi family is the murder of Sikhs I wont shake hands with Rahul Gandhi Ravneet Singh Bittu says

ನವದೆಹಲಿ, ಫೆಬ್ರವರಿ 4: ಇಂದು ಬೆಳಗ್ಗೆ ಸಂಸತ್ ಹೊರಗೆ ಪ್ರತಿಭಟನೆ ನಡೆಸುವಾಗ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು (Ravneet Singh Bittu) ಅವರನ್ನು ರಾಹುಲ್ ಗಾಂಧಿ “ದೇಶದ್ರೋಹಿ” ಎಂದು ಲೇವಡಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಚಿವ ರವನೀತ್ ಸಿಂಗ್ ಬಿಟ್ಟು, “ತನ್ನ ತಂದೆ ದೇಶಕ್ಕಾಗಿ ತನ್ನನ್ನು ತ್ಯಾಗ ಮಾಡಿದ್ದಕ್ಕಾಗಿ ತಾನು ಅತ್ಯಂತ ದೊಡ್ಡ ದೇಶಭಕ್ತನೆಂದು ರಾಹುಲ್ ಗಾಂಧಿ (Rahul Gandhi) ಭಾವಿಸಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ಮತ್ತು ಗಾಂಧಿ ಕುಟುಂಬ ಪಂಜಾಬ್‌ಗೆ ಬೆಂಕಿ ಹಚ್ಚಿತ್ತು. ಗೋಲ್ಡನ್ ಟೆಂಪಲ್‌ನಲ್ಲಿರುವ ನಮ್ಮ ಅತಿದೊಡ್ಡ ಗುರುದ್ವಾರದ ಮೇಲೆ ಗುಂಡು ಹಾರಿಸಲಾಯಿತು. ಅವರು ಸಾವಿರಾರು ಸಿಖ್ಖರು, ಪಂಜಾಬಿಗಳನ್ನು ಗುರಿಯಾಗಿಸಿಕೊಂಡು ಕೊಂದರು. ನಾನು ಕೂಡ ಆ ರೀತಿ ತಮ್ಮ ಪ್ರಾಣವನ್ನೇ ಕಳೆದುಕೊಂಡ ಕುಟುಂಬದಿಂದ ಬಂದಿದ್ದೇನೆ, ಇದು ನನ್ನ ನೋವು. ಒಬ್ಬ ಹುತಾತ್ಮನ ಮೊಮ್ಮಗ ನಾನು. ಕಾಂಗ್ರೆಸ್ ಪಕ್ಷದಲ್ಲಿ ನಾನು ಇರುವವರೆಗೂ ಅವರಿಗೆ ಎಲ್ಲ ಚೆನ್ನಾಗಿತ್ತು. ಈಗ ನಾನು ಬಿಜೆಪಿಯಲ್ಲಿದ್ದೇನೆ, ಹೀಗಾಗಿ ಅವರು ನನಗೆ ದೇಶದ್ರೋಹಿ ಎಂಬ ಪದಗಳನ್ನು ಬಳಸುತ್ತಿದ್ದಾರೆ. ಅವನು ತನ್ನ ಬಗ್ಗೆ ಏನು ಅಂದುಕೊಂಡಿದ್ದಾರೆ? ರಾಹುಲ್ ಗಾಂಧಿ ಚಕ್ರವರ್ತಿಯಂತೆ ನನ್ನ ಕಡೆಗೆ ಕೈ ಚಾಚಿದರು. ಅವರು ತನ್ನನ್ನು ಈ ದೇಶದ, ಈ ಪ್ರಪಂಚದ ಮಾಲೀಕ ಎಂದುಕೊಂಡಿದ್ದಾರೆ. ನಾನು ಗಾಂಧಿ ಕುಟುಂಬಕ್ಕೆ ಸೇರಿದವನಲ್ಲದಿರಬಹುದು, ಆದರೆ ನನ್ನ ತಲೆಯ ಮೇಲೆ ಪೇಟವಿದೆ. ಹಾಗಾಗಿ, ಅವರು ನನ್ನೊಂದಿಗೆ ಕೈಕುಲುಕಲು ಮುಂದಾದಾಗ, ನಾನು ‘ಆಪ್ ಲೋಗ್ ತೋ ದೇಶ್ ಕೆ ಗದ್ದರ್ ಹೋ, ದೇಶ್ ಕೆ ದುಷ್ಮನ್ ಹೋ (ನೀವು ದೇಶದ ಶತ್ರುಗಳು)’ ಎಂದು ಹೇಳಿದೆ. ಗಾಂಧಿ ಕುಟುಂಬದಿಂದ ಸಿಖ್ಖರ ಕೊಲೆಯಾಗಿದೆ. ನಾನು ಆ ಕುಟುಂಬದ ಮಗನೊಂದಿಗೆ ಕೈಕುಲುಕುವುದಿಲ್ಲ” ಎಂದು ರವನೀತ್ ಬಿಟ್ಟು ಪ್ರತಿಕ್ರಿಯೆ ನೀಡಿದ್ದಾರೆ.

ರಾಹುಲ್ ಗಾಂಧಿಯವರಿಗೆ ಹ್ಯಾಂಡ್‌ಶೇಕ್ ಏಕೆ ನೀಡಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು, 1984ರಲ್ಲಿ ಗೋಲ್ಡನ್ ಟೆಂಪಲ್ ಸಂಕೀರ್ಣದಿಂದ ಉಗ್ರರನ್ನು ಹೊರಹಾಕಲು ನಡೆಸಿದ ಮಿಲಿಟರಿ ದಾಳಿ ಆಪರೇಷನ್ ಬ್ಲೂ ಸ್ಟಾರ್ ಮತ್ತು ಸಿಖ್ ವಿರೋಧಿ ಗಲಭೆಗಳ ಬಗ್ಗೆ ಗಾಂಧಿ ಕುಟುಂಬವನ್ನು ಟೀಕಿಸಿದರು. ಸಿಖ್ಖರ ಕೊಲೆಗಾರ ಗಾಂಧಿ ಕುಟುಂಬದ ಕುಡಿಯೊಂದಿಗೆ ಸರ್ದಾರ್ ಎಂದಿಗೂ ಕೈಕುಲುಕುವುದಿಲ್ಲ ಎಂದು ರವನೀತ್ ಬಿಟ್ಟು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *