ಸೀಸ್​ಫೈರ್ ಮಾತ್ರವಲ್ಲ, ಭಾರತದ ಷೇರು ಮಾರುಕಟ್ಟೆ ಗರಿಗೆದರಲು ಇಲ್ಲಿವೆ 7 ಕಾರಣಗಳು

ಸೀಸ್​ಫೈರ್ ಮಾತ್ರವಲ್ಲ, ಭಾರತದ ಷೇರು ಮಾರುಕಟ್ಟೆ ಗರಿಗೆದರಲು ಇಲ್ಲಿವೆ 7 ಕಾರಣಗಳು

ನವದೆಹಲಿ, ಏಪ್ರಿಲ್ 8: ಭಾರತದ ಷೇರು ಮಾರುಕಟ್ಟೆಯ (Stock market) ಪ್ರಮುಖ ಸೂಚ್ಯಂಕಗಳು ಇಂದು ಬುಧವಾರ ಸಿಕ್ಕಾಪಟ್ಟೆ ಹಿಗ್ಗಿವೆ. ನಿಫ್ಟಿ ಮತ್ತು ಸೆನ್ಸೆಕ್ಸ್ ಸೂಚ್ಯಂಕಗಳು ಹತ್ತಿರ ಹತ್ತಿರ ಶೇ. 4ರಷ್ಟು ಹೆಚ್ಚಿವೆ. ಬಿಎಸ್​ಇ ಸೆನ್ಸೆಕ್ಸ್ 2,946.32 ಅಂಕಗಳಷ್ಟು (ಶೇ. 3.95) ಅಧಿಕಗೊಂಡು 77,562.90 ಮಟ್ಟ ಮುಟ್ಟಿದೆ. ಎನ್​ಎಸ್​ಇ ನಿಫ್ಟಿ ಸೂಚ್ಯಂಕವು 873.70 ಅಂಕಗಳಷ್ಟು (ಶೇ 3.78) ಏರಿಕೆ ಕಂಡು 23,997.35 ಮಟ್ಟ ಮುಟ್ಟಿದೆ. ಮಾರುಕಟ್ಟೆಯಲ್ಲಿ ಇವತ್ತು ಹಿನ್ನಡೆ ಕಂಡ ಷೇರುಗಳ ಸಂಖ್ಯೆ 498 ಮಾತ್ರ. ಬರೋಬ್ಬರಿ 3,705 ಷೇರುಗಳು ಪಾಸಿಟಿವ್ ಆಗಿವೆ. ಐಟಿ ಮತ್ತು ಫಾರ್ಮಾ ಬಿಟ್ಟರೆ ಬೇರೆ 16 ಪ್ರಮುಖ ಸೆಕ್ಟರ್​ಗಳ ಸೂಚ್ಯಂಕಗಳು ಪಾಸಿಟಿವ್ ಇವೆ. ಇವತ್ತು ಭಾರತದ ಈಕ್ವಿಟಿ ಮಾರುಕಟ್ಟೆ ಗರಿಗೆದರಲು ಕೆಲ ಮುಖ್ಯಕಾರಣಗಳು ಇಂತಿವೆ:

ಅಮೆರಿಕ ಇರಾನ್ ಕದನ ವಿರಾಮ

ಅಮೆರಿಕ ಮತ್ತು ಇರಾನ್ ನಡುವೆ ಅತಿರೇಕಕ್ಕೆ ಹೋಗುವಂತಿದ್ದ ಯುದ್ಧಕ್ಕೆ ಅಲ್ಪ ವಿರಾಮ ಬಂದಿದೆ. ಎರಡೂ ದೇಶಗಳು ಎರಡು ವಾರಗಳಿಗೆ ಕದನ ವಿರಾಮ ಘೋಷಿಸಿವೆ. ಈ ಬೆಳವಣಿಗೆ ಜಾಗತಿಕವಾಗಿ ಒಟ್ಟಾರೆ ಪಾಸಿಟಿವ್ ವಾತಾವರಣ ನಿರ್ಮಿಸಿಕೊಟ್ಟಿದೆ.

ಕಚ್ಚಾ ತೈಲ ಬೆಲೆ ಇಳಿಕೆ

ಬ್ಯಾರಲ್​ಗೆ 110 ಡಾಲರ್ ದಾಟಿ ಹೋಗಿದ್ದ ಕಚ್ಛಾ ತೈಲ ಬೆಲೆ ಎರಡಂಕಿ ಡಾಲರ್ ಮೊತ್ತಕ್ಕೆ ಇಳಿದಿದೆ. ಕದನ ವಿರಾಮದ ಪರಿಣಾಮಗಳಲ್ಲಿ ಇದೂ ಒಂದು.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಹಡಗುಳಿಂದ ಟೋಲ್ ವಸೂಲಿಗೆ ಇರಾನ್ ಯೋಜನೆ; ಅಂತಾರಾಷ್ಟ್ರೀಯ ನಿಯಮಗಳು ಏನು ಹೇಳುತ್ತವೆ?

ಜಾಗತಿಕ ಮಾರುಕಟ್ಟೆಗಳಿಗೂ ಹಿಗ್ಗು

ವಿಶ್ವದ ಇತರ ಷೇರು ಮಾರುಕಟ್ಟೆಯಲ್ಲಾಗುವ ಬದಲಾವಣೆಗಳ ಪರಿಣಾಮ ಭಾರತದ ಈಕ್ವಿಟಿ ಕ್ಷೇತ್ರದ ಮೇಲೂ ಆಗುತ್ತದೆ. ಏಷ್ಯನ್ ಮಾರುಕಟ್ಟೆಗಳಾದ ಜಪಾನ್, ಚೀನಾ, ಸೌತ್ ಕೊರಿಯಾ, ಹಾಂಕಾಂಗ್​ನ ಈಕ್ವಿಟಿ ಸೂಚ್ಯಂಕಗಳು ಇಂದು ಉತ್ತಮ ಫಲ ಕೊಟ್ಟಿವೆ. ಈ ಪಾಸಿಟಿವ್ ವಾತಾವರಣವು ಭಾರತದ ಮಾರುಕಟ್ಟೆಯನ್ನೂ ಸವರಿಕೊಂಡು ಹೋಗಿದೆ.

ರುಪಾಯಿ ಮೌಲ್ಯ ಹೆಚ್ಚಳ

ಅಮೆರಿಕನ್ ಡಾಲರ್ ಎದುರು ಭಾರತೀಯ ರುಪಾಯಿ ಮೌಲ್ಯ 50 ಪೈಸೆಗಳಷ್ಟು ಹೆಚ್ಚಿದೆ. ಇದರಿಂದಲೂ ಈಕ್ವಿಟಿ ಮಾರುಕಟ್ಟೆಗೆ ಅನುಕೂಲವಾಗಿದೆ.

ಆರ್​​ಬಿಐ ರಿಪೋ ದರ

ಆರ್​ಬಿಐ ಎಂಪಿಸಿ ಸಭೆಯಲ್ಲಿ ರಿಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿಕೊಂಡು ಹೋಗಲು ನಿರ್ಧರಿಸಲಾಗಿದೆ. ಈ ಹಣಕಾಸು ವರ್ಷಕ್ಕೆ ಭಾರತ ಉತ್ತಮ ಎನಿಸುವ ಹಣದುಬ್ಬರ ಮತ್ತು ಜಿಡಿಪಿ ಸ್ಥಿತಿ ಹೊಂದಿರಬಹುದು ಎಂದು ಆರ್​ಬಿಐ ಅಂದಾಜಿಸಿದೆ. ಇದು ಮಾರುಕಟ್ಟೆಗೆ ಸಕಾರಾತ್ಮಕ ಎನಿಸಿರಬಹುದು.

ಇದನ್ನೂ ಓದಿ: ಯುಎಇಗೆ ಸಾಲ ವಾಪಸ್ ಕೊಟ್ಟರೆ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಏನಾಗಬಹುದು? ಇಲ್ಲಿದೆ ಇಂಟರೆಸ್ಟಿಂಗ್ ಲೆಕ್ಕಾಚಾರ

ಬ್ಯಾಂಕ್ ಷೇರುಗಳಿಗೆ ಡಿಮ್ಯಾಂಡ್

ಇವತ್ತು ಬ್ಯಾಂಕಿಂಗ್ ಕ್ಷೇತ್ರದ ಷೇರುಗಳಿಗೆ ಬಹಳ ಬೇಡಿಕೆ ಇತ್ತು. ಅದರಲ್ಲೂ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಷೇರುಗಳ ಬೆಲೆ ಶೇ. 9ರಷ್ಟು ಏರಿದೆ. ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ. 6ರಷ್ಟು ಹೆಚ್ಚಿದೆ.

ವಿಐಎಕ್ಸ್ ಇಳಿಕೆ

ಮಾರುಕಟ್ಟೆಯ ಪ್ರಕ್ಷುಬ್ದತೆಯ ಏರಿಳಿತವನ್ನು ಸೂಚಿಸುವ ಇಂಡಿಯಾ ವಿಐಎಕ್ಸ್ ಶೇ. 5ರಷ್ಟು ಕಡಿಮೆ ಆಗಿ 19.85ಕ್ಕೆ ಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *