Headlines

ಸೊಳ್ಳೆ ಓಡಿಸಲು ಬಳಸುವ ಅಗರಬತ್ತಿಗಳಿಂದ ಬರಬಹುದು ಗಂಭೀರ ಕಾಯಿಲೆ! ಸಮೀಕ್ಷೆಯಲ್ಲಿ ಆತಂಕಕಾರಿ ಮಾಹಿತಿ ಬಹಿರಂಗ – Kannada News | Is Your Mosquito Agarbatti Safe? How To Identify Legal Vs Illegal Brands

ಮನೆಗಳಲ್ಲಿ ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ಅನೇಕರು ಸೊಳ್ಳೆ ಅಗರಬತ್ತಿ (Mosquito Agarbatti), ಕಾಯಿಲ್ ಮತ್ತು ವಿವಿಧ ಮಸ್ಕಿಟೋ ರಿಪೆಲೆಂಟ್‌ಗಳನ್ನು ಬಳಸುತ್ತಾರೆ. ಇವು ಸೊಳ್ಳೆಗಳನ್ನು ದೂರವಿಡಲು ಸಹಾಯ ಮಾಡಿದರೂ, ಎಲ್ಲ ಉತ್ಪನ್ನಗಳು ಸಂಪೂರ್ಣ ಸುರಕ್ಷಿತವಾಗಿರುತ್ತವೆ ಎನ್ನುವುದು ತಪ್ಪು ಕಲ್ಪನೆ. ಅದರಲ್ಲಿಯೂ ಇತ್ತೀಚೆಗೆ ಬಿಡುಗಡೆಯಾದ ಎಚ್ಐಸಿಎ (Home Insect Control Association) ಎಂಬ ಸಮೀಕ್ಷೆ ಈ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದು ಇವು ಸೊಳ್ಳೆಗಳನ್ನು ಸಾಯಿಸುವುದರ ಜೊತೆಗೆ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ಸಿಐಆರ್ ನೋಂದಣಿ ಸಂಖ್ಯೆ ಇಲ್ಲದ ಸೊಳ್ಳೆ ನಿವಾರಕ ಉತ್ಪನ್ನಗಳನ್ನು ಖರೀದಿ ಮಾಡಬಾರದು ಎಂದು ಹೇಳಿದೆ. ಹಾಗಾದರೆ ಸಮೀಕ್ಷೆ ಹೇಗೆ ನಡೆಸಲಾಗಿತ್ತು, ಸೊಳ್ಳೆ ಅಗರಬತ್ತಿಗಳು ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಎಚ್ಐಸಿಎ ಸಮೀಕ್ಷೆಯಲ್ಲಿ ಬಹಿರಂಗವಾದ ವಿಷಯಗಳು;

ಈ ಸಮೀಕ್ಷೆಯನ್ನು ದೇಶದ 12 ನಗರಗಳಲ್ಲಿ ನಡೆಸಲಾಗಿದ್ದು ಇದರಲ್ಲಿ 1,264 ಕುಟುಂಬಗಳು ಮತ್ತು 405 ವೈದ್ಯರು ಒಳಗೊಂಡಿದ್ದರು. ಸಮೀಕ್ಷೆಯ ಪ್ರಕಾರ, 70 ಶೇಕಡಾ ವೈದ್ಯರು ಅನಧಿಕೃತ ಸೊಳ್ಳೆ ಅಗರಬತ್ತಿಗಳ ಹೊಗೆ ಉಸಿರಾಟದ ಸಮಸ್ಯೆಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಅದೇ ರೀತಿ 67 ಶೇಕಡಾ ವೈದ್ಯರು, ಕೆಲವು ಸೊಳ್ಳೆ ಅಗರಬತ್ತಿಗಳ ಹೊಗೆ ಸಿಗರೇಟ್ ಹೊಗೆಯಷ್ಟೇ ಹಾನಿಕಾರಕವಾಗಿರಬಹುದು ಎಂದು ತಿಳಿಸಿದ್ದಾರೆ. ವಿಶೇಷವಾಗಿ ಸಿಐಆರ್ (Central Insecticides Registration) ನೋಂದಣಿ ಸಂಖ್ಯೆ ಇಲ್ಲದ ಉತ್ಪನ್ನಗಳನ್ನು ಬಳಸಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಸೊಳ್ಳೆ ಅಗರಬತ್ತಿಯ ಹೊಗೆ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ?

ನಿರಂತರವಾಗಿ ಸೊಳ್ಳೆ ಅಗರಬತ್ತಿ ಅಥವಾ ಕಾಯಿಲ್ ಬಳಕೆ ಮಾಡಿದರೆ ಉಸಿರಾಟದ ತೊಂದರೆ, ಕೆಮ್ಮು, ಗಂಟಲು ಕೆರೆತ ಮತ್ತು ಎದೆ ಉರಿ ಕಾಣಿಸಬಹುದು. ಕೆಲವರಿಗೆ ಕಣ್ಣಿನಲ್ಲಿ ಉರಿ, ತಲೆನೋವು ಮತ್ತು ಅಲರ್ಜಿ ಸಮಸ್ಯೆಯೂ ಕಾಣಿಸಬಹುದು. ಆಸ್ತಮಾ, ಸಿಓಪಿಡಿ ಮತ್ತು ಅಲರ್ಜಿ ಸಮಸ್ಯೆ ಇರುವವರಿಗೆ ಈ ಹೊಗೆ ಹೆಚ್ಚು ಅಪಾಯಕಾರಿಯಾಗಿದೆ. ಮಕ್ಕಳ ಮತ್ತು ವೃದ್ಧರ ಶ್ವಾಸಕೋಶಗಳು ಸಂವೇದನಾಶೀಲವಾಗಿರುವುದರಿಂದ ಅವರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: ಡೆಂಗ್ಯೂ ಜ್ವರದ ಬಗ್ಗೆ ನಿರ್ಲಕ್ಷ್ಯ ಬೇಡ, ಸಣ್ಣ ಅಸಡ್ಡೆಯೂ ಜೀವಕ್ಕೆ ಮಾರಕ

ಸುರಕ್ಷಿತವಾಗಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು?

ಸೊಳ್ಳೆ ನಿವಾರಕ ಉತ್ಪನ್ನಗಳನ್ನು ಖರೀದಿಸುವಾಗ ಪ್ಯಾಕ್ ಮೇಲೆ ಸಿಐಆರ್ ನೋಂದಣಿ ಸಂಖ್ಯೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಲೇಬಲ್ ಇಲ್ಲದ ಅಥವಾ ಸ್ಥಳೀಯ ಅನಧಿಕೃತ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸುವುದು ಉತ್ತಮ. ಕೊಠಡಿಯಲ್ಲಿ ಗಾಳಿ ಸರಿಯಾಗಿ ಓಡಾಡುವಂತೆ ನೋಡಿಕೊಳ್ಳಬೇಕು. ಮಕ್ಕಳ ಹಾಗೂ ವೃದ್ಧರ ಕೋಣೆಗೆ ನಿರಂತರವಾಗಿ ಹೊಗೆ ಹೋಗುವುದನ್ನು ತಪ್ಪಿಸಬೇಕು. ಮಸ್ಕಿಟೋ ನೆಟ್, ಕಿಟಕಿಗಳಿಗೆ ಜಾಲಿ ಹಾಕುವುದು ಮುಂತಾದ ಸುರಕ್ಷಿತ ಪರ್ಯಾಯಗಳನ್ನು ಬಳಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *