ಸಾಮಾಜಿಕ ಜಾಲತಾಣಗಳಲ್ಲಿ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುವ ಸೋನು ಶ್ರೀನಿವಾಸ್ ಗೌಡ, ಈಗ ಬೆಳ್ಳಿಪರದೆಗೆ ಹೆಜ್ಜೆ ಇಟ್ಟಿದ್ದಾರೆ. ಈ ಹಿಂದೆ ಅವರ ಖಾಸಗಿ ವಿಡಿಯೋ ವೈರಲ್ ಆಗಿ ದೊಡ್ಡ ಮಟ್ಟದ ವಿವಾದ ಸೃಷ್ಟಿಸಿತ್ತು. ಆ ಬಳಿಕ ಬಿಗ್ ಬಾಸ್ ಒಟಿಟಿ ಶೋಗೆ ಸ್ಪರ್ಧಿಯಾಗಿ ಬಂದ ಅವರು, ತಮ್ಮ ಮೇಲಿದ್ದ ನೆಗೆಟಿವ್ ಅಭಿಪ್ರಾಯಗಳನ್ನು ಬದಲಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅವರು ಬಿಗ್ ಬಾಸ್‌ಗೆ ಬಂದಾಗ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು, ಆದರೆ ಶೋ ಹೋಸ್ಟ್ ಕಿಚ್ಚ ಸುದೀಪ್ ಅವರು ‘ತಪ್ಪನ್ನು ತಿದ್ದಿಕೊಳ್ಳಲು ಪ್ರತಿಯೊಬ್ಬರಿಗೂ ಒಂದು ಚಾನ್ಸ್ ಕೊಡುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ಸೋನು ಪರವಾಗಿ ನಿಂತಿದ್ದರು. ಈಗ ಸೋನು ಅವರು ತಮ್ಮ ಗಳಿಕೆ ಬಗ್ಗೆ ಮಾತನಾಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಿಂದ ಎಷ್ಟು ಹಣ ಬರುತ್ತೆ ಗೊತ್ತಾ?
ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಸೋನು ಶ್ರೀನಿವಾಸ್ ಗೌಡ, ಇನ್‌ಸ್ಟಾಗ್ರಾಮ್ ಸಬ್‌ಸ್ಕ್ರಿಪ್ಷನ್‌ನಿಂದ ತಮಗೆ ಎಷ್ಟು ಆದಾಯ ಬರಬಹುದು ಎಂಬ ಲೆಕ್ಕಾಚಾರವನ್ನು ಬಿಚ್ಚಿಟ್ಟಿದ್ದಾರೆ.
ಸೋನು ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸದ್ಯಕ್ಕೆ ಇರುವುದು ಕೇವಲ 289 ಪೇಡ್ ಸಬ್‌ಸ್ಕ್ರೈಬರ್ಸ್ ಮಾತ್ರ. ಒಂದು ವೇಳೆ 300 ಜನ ಸಬ್‌ಸ್ಕ್ರೈಬರ್ಸ್ ಇದ್ದಾರೆ ಎಂದು ಅಂದುಕೊಂಡರೂ, ಒಬ್ಬರಿಂದ ಸಿಗುವ 390 ರೂಪಾಯಿಯಲ್ಲಿ ದೊಡ್ಡ ಮೊತ್ತವನ್ನು ಇನ್‌ಸ್ಟಾಗ್ರಾಮ್ ಇಟ್ಟುಕೊಳ್ಳುತ್ತದೆ ಎಂದಿದ್ದಾರೆ ಸೋನು.
‘ಇನ್‌ಸ್ಟಾಗ್ರಾಮ್ 100 ರೂಪಾಯಿ ತೆಗೆದುಕೊಂಡು ಉಳಿದ ಹಣ ನನಗೆ ನೀಡುತ್ತದೆ. ಈ ಲೆಕ್ಕಾಚಾರದ ಪ್ರಕಾರ ನನಗೆ ಇನ್‌ಸ್ಟಾಗ್ರಾಮ್‌ನಿಂದ ತಿಂಗಳಿಗೆ 30 ಸಾವಿರ ರೂಪಾಯಿ ಕೂಡ ಕೈ ಸೇರುವುದಿಲ್ಲ’ ಎಂದಿದ್ದಾರೆ ಅವರು.
ತಮ್ಮ ಒಟ್ಟು ತಿಂಗಳ ಆದಾಯ ಎಷ್ಟು ಎಂಬುದನ್ನು ನೇರವಾಗಿ ಬಹಿರಂಗಪಡಿಸದ ಸೋನು, ‘ಎಲ್ಲವನ್ನೂ ಮೊದಲೇ ಹೇಳಿದರೆ ಎಲ್ಲರ ಕಣ್ಣು ಬೀಳುತ್ತದೆ’ ಎಂದು ನಗುತ್ತಲೇ ಉತ್ತರಿಸಿದ್ದಾರೆ. ಆದರೆ ಸದ್ಯಕ್ಕೆ ಆರಾಮಾಗಿ ಜೀವನ ನಡೆಸಲು ಯಾವುದೇ ತೊಂದರೆಯಿಲ್ಲ ಎಂದಿದ್ದಾರೆ.
ಹೊಸ ಕಾರು ಖರೀದಿಸಿದ ಸೋನುಗೆ ತಪ್ಪಿಲ್ಲ ಸಾಲದ ಗೋಳು
ಕ್ಯಾಬ್‌ಗಳಲ್ಲಿ ಓಡಾಡಿ ಸುಸ್ತಾಗಿದ್ದ ಸೋನು ಶ್ರೀನಿವಾಸ್ ಗೌಡ ಇತ್ತೀಚೆಗೆ ತಮ್ಮದೇ ಆದ ಹೊಸ ಕಿಯಾ ಕಾರನ್ನು ಖರೀದಿಸಿದ್ದಾರೆ. ಆದರೆ ಈ ಕಾರು ಖರೀದಿಯ ಹಿಂದೆ ದೊಡ್ಡ ಸಾಲದ ಗೋಳಿದೆ ಎಂಬುದನ್ನು ಅವರೇ ಒಪ್ಪಿಕೊಂಡಿದ್ದಾರೆ. ಸೋನು ಖರೀದಿಸಿರುವ ಹೊಸ ಕಾರಿನ ಆನ್ ರೋಡ್ ಬೆಲೆ ಬರೋಬ್ಬರಿ 30 ಲಕ್ಷ ರೂಪಾಯಿ.
ಈ ಐಷಾರಾಮಿ ಕಾರನ್ನು ಮನೆಗೆ ತರಲು ಸೋನು ಶ್ರೀನಿವಾಸ್ ಗೌಡ ಅವರು ಪಾವತಿಸಿರುವುದು ಕೇವಲ 5 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾತ್ರ. ಇನ್ನುಳಿದ ಬರೋಬ್ಬರಿ 25 ಲಕ್ಷ ರೂಪಾಯಿ ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಸಾಲದ ಗೋಳು ಹೇಳಿಕೊಂಡ ಮಾಜಿ ಬಿಗ್ಬಾಸ್ ಸ್ಪರ್ಧಿ ಸೋನು ಗೌಡ
‘ಪೇಡ್ ಸಬ್‌ಸ್ಕ್ರೈಬರ್ಸ್ ಇದ್ದಾರೆ ಎಂದಾಕ್ಷಣ ಸೋನು ಶ್ರೀನಿವಾಸ್ ಗೌಡ ಒಮ್ಮೆಗೆ ದುಡ್ಡು ಕೊಟ್ಟು ಕಾರು ತಗೊಂಡಿದ್ದಾರೆ ಅಂದುಕೊಂಡರೆ ತಪ್ಪು, ನಾನು ಇಎಂಐ ಮೂಲಕವೇ ಕಾರು ಖರೀದಿಸಿದ್ದು. ಆರು ವರ್ಷಗಳ ಕಾಲ ಕಾರಿನ ಇಎಂಐ ಕಟ್ಟಬೇಕಿದೆ’ ಎಂದು ತಮ್ಮ ಸಾಲದ ಹೊರೆಯನ್ನು ತೋಡಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.