Headlines

ಸ್ಪೂನ್‌ ಬಿಟ್ಟು ಕೈಯಲ್ಲಿ ಊಟ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ಲಭಿಸುತ್ತವೆ ನೋಡಿ – Kannada News | Know how good it is to eat food with your hands?

ನಮ್ಮಲ್ಲಿ ಅನಾದಿ ಕಾಲದಿಂದಲೂ ಕೈಯಲ್ಲಿಯೇ ಆಹಾರ (food) ಸೇವಿಸುವ ಪದ್ಧತಿಯಿದೆ. ಆದರೆ ವಿದೇಶಿ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ನಮ್ಮಲ್ಲಿ ಇಂದು ಅನೇಕರು ಕೈ ಬದಲು ಸ್ಪೂನ್‌, ಫೋರ್ಕ್‌ ಬಳಕೆ ಮಾಡುತ್ತಾರೆ. ಇನ್ನೂ ತಮಾಷೆಯ ವಿಷಯ ಏನಪ್ಪಾ ಅಂದ್ರೆ ಕೆಲವರು ಯಾರು ಏನೆನ್ನುತ್ತಾರೆ ಅನ್ನೋ ಕಾರಣಕ್ಕೆ ಕೈಯಲ್ಲಿ ಊಟ ಸವಿಯಲು ನಾಚಿಕೆ ಪಟ್ಟು, ಸ್ಟೈಲ್‌ ಆಗಿ ಸ್ಫೂನ್‌ ಬಳಸಿ ಊಟ ಸೇವಿಸುತ್ತಾರೆ.  ಆದ್ರೆ ಏನು ಗೊತ್ತಾ ಸ್ಪೂನ್‌ಗಿಂತ ಕೈಯಲ್ಲಿ ಆಹಾರ ಸೇವಿಸೋದು ಬೆಸ್ಟ್‌ ಅಂತೆ. ಏಕೆಂದರೆ ಇದು ಆಹಾರವನ್ನು ಆನಂದಿಸಲು ಅನುವು ಮಾಡಿಕೊಡುವುದಲ್ಲದೆ, ಆರೋಗ್ಯಕ್ಕೂ ಸಖತ್‌ ಪ್ರಯೋಜನಕಾರಿ. ಹಾಗಿದ್ದರೆ ಕೈಗಳಿಂದ ಆಹಾರವನ್ನು ಸೇವಿಸುವ ಅಭ್ಯಾಸದಿಂದ ದೊರಕುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.

ಕೈಗಳಿಂದ ಆಹಾರ ಸೇವಿಸುವುದರಿಂದ ದೊರೆಯುವ ಪ್ರಯೋಜನಗಳೇನು?

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಆಯುರ್ವೇದದ ಪ್ರಕಾರ, ನಿಮ್ಮ ಬೆರಳುಗಳಿಂದ ಆಹಾರವನ್ನು ಸ್ಪರ್ಶಿಸುವುದರಿಂದ ದೇಹದ ಐದು ಅಂಶಗಳು (ಅಗ್ನಿ, ನೀರು, ಗಾಳಿ, ಭೂಮಿ ಮತ್ತು ಆಕಾಶ) ಸಮತೋಲನಗೊಳ್ಳುತ್ತವೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಅಲ್ಲದೆ ಕೈಗಳಿಂದ ಊಟ ಮಾಡುವ ಈ ಅಭ್ಯಾಸವು ನಿಧಾನವಾಗಿ ತಿನ್ನುವುದನ್ನು ಮತ್ತು ಉತ್ತಮವಾಗಿ ಅಗಿಯುವುದನ್ನು ಉತ್ತೇಜಿಸುತ್ತದೆ, ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತೂಕ ನಿಯಂತ್ರಣ: ಬೆರಳುಗಳಿಂದ ಆಹಾರವನ್ನು ಸ್ಪರ್ಶಿಸುವುದರಿಂದ ಮೆದುಳಿಗೆ ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುವ ಸಂಕೇತಗಳು ರವಾನೆಯಾಗುತ್ತವೆ. ನಿಮ್ಮ ಕೈಗಳಿಂದ ತಿನ್ನುವುದರಿಂದ ಆಹಾರದ ಪ್ರಮಾಣ ಮತ್ತು ತಾಪಮಾನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಪ್ಪಿಸಲು, ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ.

ದೈಹಿಕ ಮತ್ತು ಮಾನಸಿಕ ಸಮತೋಲನ: ಆಯುರ್ವೇದದಲ್ಲಿ, ಕೈಗಳಿಂದ ತಿನ್ನುವುದು ಮಾನಸಿಕ ಮತ್ತು ದೈಹಿಕ ಸಮತೋಲನಕ್ಕೆ ಮುಖ್ಯವೆಂದು ಪರಿಗಣಿಸಲಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ ಏಕೆಂದರೆ ಬೆರಳುಗಳ ಸ್ಪರ್ಶವು ಮೆದುಳಿಗೆ ಸಂಕೇತ ನೀಡುತ್ತದೆ, ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಇದು ಆಹಾರದ ಸರಿಯಾದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಮೆದುಳು ಮತ್ತು ಆಹಾರದ ಸಂಪರ್ಕ:  ಕೈಯಲ್ಲಿ ಊಟ ಮಾಡುವುದರಿಂದ ಆಹಾರದ ರುಚಿ ಹೆಚ್ಚುವುದಲ್ಲದೆ,  ಕೈಗಳಿಂದ ತಿನ್ನುವುದರಿಂದ ಮೆದುಳಿಗೆ ಆಹಾರದ ವಿನ್ಯಾಸ, ತಾಪಮಾನ ಮತ್ತು ನೋಟವನ್ನು ಚೆನ್ನಾಗಿ ಗುರುತಿಸಲು ಅನುವು ಮಾಡಿಕೊಡುತ್ತದೆ. ಈ ಪ್ರಕ್ರಿಯೆಯು ಆಹಾರದ ಬಗ್ಗೆ ನಮ್ಮ ಅರಿವನ್ನು ಹೆಚ್ಚಿಸುತ್ತದೆ, ಇದು ಮೆದುಳಿನ ಜೀರ್ಣಕಾರಿ ಸಂಕೇತಗಳನ್ನು ಸಕ್ರಿಯಗೊಳಿಸುತ್ತದೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ದೂರ ಪ್ರಯಾಣ ಮಾಡುವಾಗ ವಾಂತಿ ಬರದಂತೆ ತಡೆಯಲು ಸಲಹೆಯನ್ನು ಪಾಲಿಸುವುದು ಉತ್ತಮ

ರಕ್ತ ಪರಿಚಲನೆ ಸುಧಾರಿಸುತ್ತದೆ: ಕೈಯಿಂದ ಊಟ ಮಾಡುವುದರಿಂದ ಕೈಗಳ ಸ್ನಾಯುಗಳಿಗೆ ವ್ಯಾಯಾಮವಾಗುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದಲ್ಲದೆ, ಕೈಗಳ ಸರಾಗ ಚಲನೆಯು ರಕ್ತದ ಹರಿವನ್ನು ಹೆಚ್ಚು ಸರಾಗಗೊಳಿಸುತ್ತದೆ. ಅಲ್ಲದೆ ಕೈಗಳಿಂದ ಆಹಾರ ಸೇವಿಸುವಾಗ ಎಲ್ಲಾ ಬೆರಳುಗಳು ಮುದ್ರೆಯಾಕಾರ ಪಡೆಯುತ್ತದೆ. ಇದನ್ನು ರಮಣ ವಾಯು ಮುದ್ರೆ ಎಂದು ಕರೆಯುತ್ತಾರೆ. ಈ ಮುದ್ರೆ ದೇಹದಲ್ಲಿ ಕಾಣಿಸಿಕೊಳ್ಳುವ ಹಲವು ಕಾಯಿಲೆಗಳಿಗೆ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ.

ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ: ನಾವು ನಮ್ಮ ಕೈಗಳಿಂದ ಊಟ ಮಾಡಿದಾಗ, ನಮ್ಮ ಬಾಯಿ ಮತ್ತು ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಈ ಬ್ಯಾಕ್ಟೀರಿಯಾಗಳು ಸೋಂಕುಗಳ ವಿರುದ್ಧ ಹೋರಾಡಲು ಮತ್ತು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ, ನಮ್ಮನ್ನು ಆರೋಗ್ಯವಾಗಿಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *