Headlines

ಹನ್ನೆರಡು ವರ್ಷಗಳಿಗೆ ಒಮ್ಮೆ ಬರುವ ಯೋಗವಿದು: ಈ ನಾಲ್ಕು ರಾಶಿಯವರು ಲಕ್ಕಿ – Kannada News | Rare Guru Shukra Conjunction in Pushya Nakshatra: Horoscope Predictions for All 12 Zodiac Signs

ಪ್ರಾತಿನಿಧಿಕ ಚಿತ್ರImage Credit source: Getty images

ಕರ್ಕಾಟಕ ರಾಶಿಯ ಪುಷ್ಯ ನಕ್ಷತ್ರದಲ್ಲಿ ದೇವಗುರು ಬೃಹಸ್ಪತಿ ಮತ್ತು ದೈತ್ಯಗುರು ಶುಕ್ರರ ಸಂಯೋಗವು ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಅಪರೂಪದ ಹಾಗೂ ಶುಭದಾಯಕ ವಿದ್ಯಮಾನವಾಗಿದೆ. ಪುಷ್ಯ ನಕ್ಷತ್ರದ ಅಧಿಪತಿ ಶನಿಯಾಗಿದ್ದು, ಕರ್ಕಾಟಕವು ಚಂದ್ರನ ಮನೆಯಾಗಿದೆ. ಇಲ್ಲಿ ಜ್ಞಾನಕಾರಕ ಗುರು ಮತ್ತು ಭೋಗಕಾರಕ ಶುಕ್ರರ ಮಿಲನವು ದ್ವಾದಶ ರಾಶಿಗಳ ಮೇಲೆ ಗಂಭೀರ ಪ್ರಭಾವ ಬೀರುತ್ತದೆ. ಈ ಯೋಗವು ಜೂನ್ ೦೮ರಿಂದ ೧೭ರವರೆಗೆ ಇರುವ ಅತ್ಯಪರೂಪದ ಯೋಗವಾಗಿದೆ‌.

​ಉತ್ತಮ ಲಾಭ ರಾಶಿಗಳು

ಕರ್ಕಾಟಕ ರಾಶಿ: ಈ ಸಂಯೋಗವು ನಿಮ್ಮದೇ ರಾಶಿಯ ಮೊದಲ ಮನೆಯಲ್ಲಿ ನಡೆಯುವುದರಿಂದ ಅತ್ಯಂತ ಶ್ರೇಷ್ಠ ಫಲಗಳು ಲಭಿಸಲಿವೆ. ಸಮಾಜದಲ್ಲಿ ಗೌರವ, ಕೀರ್ತಿ ಹೆಚ್ಚಾಗಲಿದೆ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದ್ದು, ನವವಿವಾಹಿತರಿಗೆ ಸಂತಾನ ಯೋಗವಿದೆ. ಬುದ್ಧಿಮತ್ತೆ ಮತ್ತು ಆಕರ್ಷಣೆ ಹೆಚ್ಚುತ್ತದೆ.

ಇದನ್ನೂ ಓದಿ: ಕೇತುವಿನ ಮೇಲಿದೆ ಕುಜನ ದೃಷ್ಟಿ: ಯಾರಿಗೆ ಒಲಿಯಲಿದೆ ಪೂರ್ಣ ರಾಜಯೋಗ? ಯಾರಿಗೆ ಧನಲಾಭ?

ವೃಷಭ ರಾಶಿ: ತೃತೀಯ ಭಾವದಲ್ಲಿ ನಡೆಯುವ ಈ ಸಂಯೋಗದಿಂದ ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಸಹೋದರ-ಸಹೋದರಿಯರಿಂದ ಬೆಂಬಲ ಸಿಗಲಿದೆ. ಕಲೆ, ಸಾಹಿತ್ಯ ಮತ್ತು ಮಾಧ್ಯಮ ರಂಗದಲ್ಲಿ ಇರುವವರಿಗೆ ಅಭೂತಪೂರ್ವ ಯಶಸ್ಸು ಸಿಗಲಿದೆ.

​ಕನ್ಯಾ ರಾಶಿ: ನಿಮ್ಮ ಲಾಭ ಸ್ಥಾನದಲ್ಲಿ ಗುರು‌ ಮತ್ತು ಶುಕ್ರರ ಮಿಲನವಾಗುವುದರಿಂದ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಹಳೆಯ ಹೂಡಿಕೆಗಳಿಂದ ಉತ್ತಮ ಲಾಭ ಸಿಗಲಿದೆ. ದೀರ್ಘಕಾಲದ ಆಸೆಗಳು ಈಡೇರಲಿದ್ದು, ಮಿತ್ರರಿಂದ ಸಹಕಾರ ದೊರೆಯಲಿದೆ.

ವೃಶ್ಚಿಕ ರಾಶಿ: ಭಾಗ್ಯ ಸ್ಥಾನದಲ್ಲಿ ಈ ಯುತಿ ಏರ್ಪಡುವುದರಿಂದ ಅದೃಷ್ಟದ ಸಂಪೂರ್ಣ ಬೆಂಬಲ ನಿಮಗಿರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದ್ದು, ತೀರ್ಥಯಾತ್ರೆ ಮಾಡುವ ಯೋಗವಿದೆ. ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಸಮಯ.

​ಮಧ್ಯಮ ಫಲ ಪಡೆಯುವ ರಾಶಿಗಳು

ಮೇಷ, ಸಿಂಹ, ತುಲಾ ಮತ್ತು ಧನು ರಾಶಿ: ಈ ರಾಶಿಗಳವರಿಗೆ ಮಿಶ್ರ ಫಲಗಳು ದೊರೆಯಲಿವೆ. ಉದ್ಯೋಗದಲ್ಲಿ ಪ್ರಗತಿ ಕಂಡುಬಂದರೂ, ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಾಗಲಿವೆ. ಸುಖ-ಸಂತೋಷದ ಸಾಧನಗಳಿಗಾಗಿ ವೆಚ್ಚಗಳು ಅಧಿಕವಾಗಬಹುದು. ಆರೋಗ್ಯದ ಕಡೆಗೆ ಸ್ವಲ್ಪ ಗಮನ ಹರಿಸುವುದು ಉತ್ತಮ.

​ಜಾಗರೂಕರಾಗಿರಬೇಕಾದ ರಾಶಿಗಳು

ಮಿಥುನ, ಕನ್ಯಾ, ಮಕರ ಮತ್ತು ಕುಂಭ ರಾಶಿ: ಈ ರಾಶಿಗಳವರಿಗೆ ಧನ ನಷ್ಟ ಅಥವಾ ಅನಗತ್ಯ ಖರ್ಚುಗಳು ಎದುರಾಗಬಹುದು. ಶತ್ರುಗಳ ಕಾಟ ಮತ್ತು ಆರೋಗ್ಯದ ಏರುಪೇರುಗಳ ಬಗ್ಗೆ ಎಚ್ಚರವಿರಲಿ. ಸಾಲ ಕೊಡುವಾಗ ಅಥವಾ ತೆಗೆದುಕೊಳ್ಳುವಾಗ ಯೋಚಿಸಿ ನಿರ್ಧಾರ ಕೈಗೊಳ್ಳಿ.

ಇದನ್ನೂ ಓದಿ: ಉದ್ಯೋಗ ಭವಿಷ್ಯ: ಜೂನ್ 14ರಿಂದ 20ರವರೆಗೆ ಈ ರಾಶಿಯವರಿಗೆ ಸಿಗಲಿದೆ ಪ್ರಮೋಷನ್; ನಿಮ್ಮ ರಾಶಿಯ ಉದ್ಯೋಗ ಯೋಗ ಹೇಗಿದೆ?

​ಗುರು ಮತ್ತು ಶುಕ್ರರು ಪರಸ್ಪರ ಶತ್ರು ಗ್ರಹಗಳಾಗಿದ್ದರೂ, ಪುಷ್ಯ ನಕ್ಷತ್ರದ ಶುಭತ್ವ ಮತ್ತು ಕರ್ಕಾಟಕದ ಉಚ್ಛ ಸ್ಥಾನದಿಂದಾಗಿ ಈ ಸಂಯೋಗವು ಒಟ್ಟಾರೆಯಾಗಿ ಸಮಾಜದಲ್ಲಿ ಧಾರ್ಮಿಕತೆ, ಕಲಾತ್ಮಕತೆ ಮತ್ತು ಆರ್ಥಿಕ ಸುಧಾರಣೆಗೆ ಕಾರಣವಾಗುತ್ತದೆ.

ಲೋಹಿತ್ ಹೆಬ್ಬಾರ್ 

Source link

Leave a Reply

Your email address will not be published. Required fields are marked *