Headlines

ಹರಾಜಿನಲ್ಲಿ 14 ಪಾಕಿಸ್ತಾನಿಯರು: ಐಪಿಎಲ್ ಫ್ರಾಂಚೈಸಿ ಮೇಲೆ ಎಲ್ಲರ ಕಣ್ಣು! – Kannada News | 14 Pakistan players in The Hundred auction list

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್​ನ 6ನೇ ಸೀಸನ್​ನ ಹರಾಜಿಗಾಗಿ ವೇದಿಕೆ ಸಿದ್ಧವಾಗಿದೆ. ಮಾರ್ಚ್ 11 ಮತ್ತು 12 ರಂದು ನಡೆಯಲಿರುವ ಈ ಹರಾಜಿಗಾಗಿ ಒಟ್ಟು 14 ಪಾಕಿಸ್ತಾನ್ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆರಂಭದಲ್ಲಿ 63 ಪಾಕ್ ಆಟಗಾರರು ಹೆಸರು ನೋಂದಣಿ ಮಾಡಿಕೊಂಡಿದ್ದರು. ಆದರೆ ಶಾರ್ಟ್ ಲಿಸ್ಟ್ ಮಾಡಲಾದ ಪಟ್ಟಿಯಲ್ಲಿ ಕೇವಲ 14 ಆಟಗಾರರು ಮಾತ್ರ ಸ್ಥಾನ ಪಡೆದಿದ್ದಾರೆ.

ಇತ್ತ ಹರಾಜಿನಲ್ಲಿ ಪಾಕ್ ಆಟಗಾರರು ಕಾಣಿಸಿಕೊಂಡ ಬೆನ್ನಲ್ಲೇ ಎಲ್ಲರ ಕಣ್ಣು ಐಪಿಎಲ್ ಫ್ರಾಂಚೈಸಿಗಳ ಮೇಲೆ ನೆಟ್ಟಿದೆ. ಏಕೆಂದರೆ ಇಂಡಿಯನ್ ಪ್ರೀಮಿಯರ್ ಲೀಗ್​ನ 4 ಫ್ರಾಂಚೈಸಿಗಳು ಈ ಬಾರಿಯ ಟೂರ್ನಿಯ ಮೂಲಕ ದಿ ಹಂಡ್ರೆಡ್ ಲೀಗ್​ಗೆ ಕಾಲಿಡುತ್ತಿದೆ. ಹೀಗಾಗಿಯೇ ಐಪಿಎಲ್ ಫ್ರಾಂಚೈಸಿಗಳು ಪಾಕ್ ಆಟಗಾರರಿಗಾಗಿ ಬಿಡ್ಡಿಂಗ್ ಮಾಡಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಮಡಿದೆ.

ದಿ ಹಂಡ್ರೆಡ್ ಲೀಗ್​ನಲ್ಲಿರುವ ಐಪಿಎಲ್ ಫ್ರಾಂಚೈಸಿಗಳು:

  • ಎಂಐ ಲಂಡನ್ (ಮುಂಬೈ ಇಂಡಿಯನ್ಸ್)
  • ಸನ್​ರೈಸರ್ಸ್ ಲೀಡ್ಸ್ (ಸನ್​ರೈಸರ್ಸ್ ಹೈದರಾಬಾದ್)
  • ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ (ಲಕ್ನೋ ಸೂಪರ್ ಜೈಂಟ್ಸ್​)
  • ಸದರ್ನ್ ಬ್ರೇವ್ (ಡೆಲ್ಲಿ ಕ್ಯಾಪಿಟಲ್ಸ್​)

ಈ ನಾಲ್ಕು ಫ್ರಾಂಚೈಸಿಗಳು ಪಾಕಿಸ್ತಾನ್ ಆಟಗಾರರಿಗಾಗಿ ಬಿಡ್ಡಿಂಗ್ ನಡೆಸಲಿದೆಯಾ ಎಂಬುದೇ ಈಗ ಕುತೂಹಲ. ಏಕೆಂದರೆ ಈ ಹಿಂದೆ ಐಪಿಎಲ್ ಫ್ರಾಂಚೈಸಿಗಳು ಪಾಕ್ ಆಟಗಾರರಿಗೆ ಬಿಡ್ ನಡೆಸಲ್ಲ ಎಂಬ ಸುದ್ದಿಗಳು ಹರಿದಾಡಿದ್ದವು. ಇದಾಗ್ಯೂ ಆಟಗಾರರ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡಬಾರದೆಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಎಲ್ಲಾ ಫ್ರಾಂಚೈಸಿಗಳಿಗೆ ಸೂಚನೆ ನೀಡಿದೆ. ಹೀಗಾಗಿ 4 ಫ್ರಾಂಚೈಸಿಗಳ ಮುಂದಿನ ನಡೆಯೇನು ಎಂಬುದು ಮಾರ್ಚ್ 11 ಮತ್ತು 12 ರಂದು ಬಹಿರಂಗವಾಗಲಿದೆ.

ದಿ ಹಂಡ್ರೆಡ್ ಲೀಗ್​ನಲ್ಲಿರುವ ಪಾಕ್ ಆಟಗಾರರು:

  • ಹ್ಯಾರಿಸ್ ರೌಫ್- ವೇಗದ ಬೌಲರ್ (ಮೂಲ ಬೆಲೆ £100,000)
  • ಶಾಹೀನ್ ಶಾ ಅಫ್ರಿದಿ-  ವೇಗದ ಬೌಲರ್ (ಮೂಲ ಬೆಲೆ £100,000)
  • ಶಾದಾಬ್ ಖಾನ್- ಆಲ್ ರೌಂಡರ್ (ಮೂಲ ಬೆಲೆ £100,000)
  • ನಸೀಮ್ ಶಾ-  ವೇಗದ ಬೌಲರ್ (ಮೂಲ ಬೆಲೆ £100,000)
  • ಮೊಹಮ್ಮದ್ ನವಾಝ್- ಆಲ್-ರೌಂಡರ್ (ಮೂಲ ಬೆಲೆ £100,000)
  • ಸೈಮ್ ಅಯ್ಯೂಬ್- ಆಲ್ ರೌಂಡರ್ (ಮೂಲ ಬೆಲೆ £100,000)
  • ಉಸ್ಮಾನ್ ತಾರಿಕ್-  ಸ್ಪಿನ್ನರ್ (ಮೂಲ ಬೆಲೆ £100,000)
  • ಅಬ್ರಾರ್ ಅಹ್ಮದ್- ಸ್ಪಿನ್ನರ್ (ಮೂಲ ಬೆಲೆ £75,000)
  • ಮೊಹಮ್ಮದ್ ಅಮೀರ್- ವೇಗದ ಬೌಲರ್ (ಮೂಲ ಬೆಲೆ £75,000)
  • ಝಮಾನ್ ಖಾನ್- ವೇಗದ ಬೌಲರ್ (ಮೂಲ ಬೆಲೆ £75,000)
  • ಇಮಾದ್ ವಾಸಿಂ- ಆಲ್ ರೌಂಡರ್ (ಮೂಲ ಬೆಲೆ £50,000)
  • ಉಸಾಮಾ ಮೀರ್- ಸ್ಪಿನ್ನರ್ (ಮೂಲ ಬೆಲೆ £50,000)
  • ಅಕಿಫ್ ಜಾವೇದ್- ವೇಗದ ಬೌಲರ್ (ಮೂಲ ಬೆಲೆ £31,000)
  • ಸಲ್ಮಾನ್ ಮಿರ್ಝ- ವೇಗದ ಬೌಲರ್ (ಮೂಲ ಬೆಲೆ £31,000)

ಇದನ್ನೂ ಓದಿ: IND vs ENG: ‘ನಾಣ್ಯ’ದಲ್ಲೇ ನಿರ್ಧಾರವಾಗಲಿದೆ ಪಂದ್ಯದ ಅರ್ಧ ಫಲಿತಾಂಶ

ಬಾಬರ್-ರಿಝ್ವಾನ್ ಇಲ್ಲ:

ದಿ ಹಂಡ್ರೆಡ್ ಲೀಗ್​ಗೆ ಹೆಸರು ನೀಡಿರುವ ಪಾಕಿಸ್ತಾನ್ ಆಟಗಾರರಲ್ಲಿ ಬಾಬರ್ ಆಝಂ ಹಾಗೂ ಮೊಹಮ್ಮದ್ ರಿಝ್ವಾನ್ ಹೆಸರು ಕಾಣಿಸಿಕೊಂಡಿಲ್ಲ. ಈ ಇಬ್ಬರು ಆಟಗಾರರು ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗಾಗಿ ಸಿದ್ಧತೆಗಳನ್ನು ಆರಂಭಿಸುವ ಸಲುವಾಗಿ ದಿ ಹಂಡ್ರೆಡ್ ಲೀಗ್​ನಿಂದ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ.

Published On – 12:05 pm, Tue, 3 March 26

Source link

Leave a Reply

Your email address will not be published. Required fields are marked *