ಹುಬ್ಬಳ್ಳಿ, ಮೇ 20: ಹರಿಹರ ಪೀಠದ ವಿವಾದ ಬಗೆಹರಿಸುವ ಕೆಲಸ ಮಾಡಿದ್ದೇವೆ. ಟ್ರಸ್ಟ್ ಲೆಕ್ಕಪತ್ರ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಸಮಾಜಕ್ಕೆ ಧಕ್ಕೆ ಬರುವ ಘಟನೆಗಳು ನಡೆದಿವೆ, ಅವುಗಳನ್ನು ಎರಡು ಕಡೆಯವರನ್ನು ಸೇರಿಸಿ ನಿವಾರಣೆ ಮಾಡುವ ಕೆಲಸ ಮಾಡಿದ್ದೇವೆ. ಇಂದು ಶೇಕಡಾ 90ರಷ್ಟು ಸಮಸ್ಯೆ ಬಗೆಹರಿದಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಪಂಚಮಸಾಲಿ ಪೀಠಗಳ ವಿವಾದಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಅವರು, ಸಮಾಜದ ಗೊಂದಲ ನಿವಾರಣೆಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಎರಡೂ ಕಡೆಯವರ ಮನಸ್ತಾಪ ನಿವಾರಿಸುವ ಕೆಲಸ ನಡೆಯುತ್ತಿದೆ. ಹರಿಹರ ಪೀಠದ ಜೊತೆಗೆ ಕೂಡಲಸಂಗಮ ಪೀಠ ವಿವಾದವನ್ನೂ ಬಗೆಹರಿಸಲಾಗುವುದು. ಯಾವುದೇ ಹೊಸ ಪೀಠ ಸ್ಥಾಪನೆ ಅಥವಾ ಮರುಸ್ಥಾಪನೆಯ ಉದ್ದೇಶವಿಲ್ಲ. ಇರುವ ಮಠಗಳನ್ನು ಸುಧಾರಿಸುವುದೇ ನಮ್ಮ ಉದ್ದೇಶ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.