
ಬುಲ್ಲಿ ಸಿನಿಮಾದ ಕಾರ್ಯಕ್ರಮದಲ್ಲಿ ನಟ ಭುವನ್ ಪೊನ್ನಣ್ಣ ಅವರು ತಮ್ಮ ಪತ್ನಿ ಹರ್ಷಿಕಾ ಪೂಣಚ್ಚ ಅವರ ಸಿನಿಮಾ ನಿರ್ಮಾಣಕ್ಕೆ ನೀಡಿದ ಅಪಾರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು. ಹರ್ಷಿಕಾ ಅವರು ಎಂಟು ತಿಂಗಳ ಗರ್ಭಿಣಿಯಾಗಿದ್ದರೂ, ಚಿತ್ರತಂಡಕ್ಕೆ ಶ್ರಮಿಸಿದ್ದಾರೆ ಎಂದು ಭುವನ್ ತಿಳಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಹಾಸ್ಯಭರಿತವಾಗಿ ಮಧ್ಯಪ್ರವೇಶಿಸಿ, ಭುವನ್ರನ್ನು ತಮಾಷೆ ಮಾಡಿದರು. ‘ನೀವಿಬ್ಬರೂ ಮದುವೆ ಆಗಿದ್ದೀರಾ ಅಥವಾ ಇಟ್ಟುಕೊಂಡಿದ್ದೀರಾ’ ಎಂದು ಭುವನ್ ಅವರನ್ನು ಓಂ ಪ್ರಕಾಶ್ ಪ್ರಶ್ನೆ ಮಾಡಿದರು. ಪತಿ-ಪತ್ನಿ ಆಗಿದ್ದರೂ ಇಬ್ಬರ ಮಧ್ಯೆ ಥ್ಯಾಂಕ್ಸ್ ಏಕೆ ಎಂಬುದು ಓಂ ಪ್ರಕಾಶ್ ಪ್ರಶ್ನೆ. ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಮತ್ತು ಊರ್ವಶಿ ಮೊದಲಾದವರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.