ಮಹಿಳೆಯರ ಜೊತೆ ಆರೋಪಿ ಚಂದ್ರೇಗೌಡImage Credit source: Tv9 Kannada
ಬೆಂಗಳೂರು, ಮೇ 1: ಹಲವು ಮಹಿಳೆಯರಿಗೆ ಬ್ಲ್ಯಾಕ್ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ರಾಮನಗರ ಮಕ್ಕಳ ಆಯೋಗ ಸಮಿತಿ ಸದಸ್ಯನನ್ನು ಬೆಂಗಳೂರಿನ ಆರ್.ಆರ್.ನಗರ ಪೊಲೀಸರು ಬಂಧಿಸಿದ್ದಾರೆ. ಚಂದ್ರೇಗೌಡ ಬಂಧಿತನಾಗಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅವುಗಳನ್ನು ಈತ ವಿಡಿಯೋಮಾಡಿಟ್ಟುಕೊಳ್ಳುತ್ತಿದ್ದ. ಫೋಟೋ, ವಿಡಿಯೋ ಇಟ್ಟುಕೊಂಡು ಪೀಡಿಸುತ್ತಿದ್ದ. ಪೊಲೀಸ್ ಅಧಿಕಾರಿ, ವಕೀಲ, ಮಾಧ್ಯಮ ಪ್ರತಿನಿಧಿ ಎಂದು ಬಿಂಬಿಸಿ, ನಕಲಿ ಐಡಿ ಮಾಡಿಕೊಂಡು ಹಲವರಿಗೆ ಬೆದರಿಕೆ ಕೂಡ ಹಾಕಿದ್ದ ಎನ್ನಲಾಗಿದೆ.
20ಕ್ಕೂ ಹೆಚ್ಚು ಮಹಿಳೆಯರ ವಿಡಿಯೋ, ಫೋಟೋ ಪತ್ತೆ
ಇನ್ನು ಆರೋಪಿ ಮೊಬೈಲ್ ಪರಿಶೀಲಿಸಿದಾಗ 20ಕ್ಕೂ ಹೆಚ್ಚು ಮಹಿಳೆಯರ ವಿಡಿಯೋ, ಫೋಟೋ ಪತ್ತೆಯಾಗಿವೆ. ಗಂಡನಿಂದ ದೂರವಾಗಿದ್ದ ಮಹಿಳೆ ಪರಿಚಯ ಮಾಡಿಕೊಂಡಿದ್ದ ಆರೋಪಿ, ಆಕೆಗೆ ನಾನು ಲೆಕ್ಚರ್ ಎಂದು ಪರಿಚಯ ಮಾಡಿಕೊಂಡಿದ್ದ. ನನಗೆ ಡಿವೋರ್ಸ್ ಆಗಿದ್ದು, ನಿನ್ನನ್ನು ಮದುವೆ ಆಗುತ್ತೇನೆಂದು ನಂಬಿಸಿ ಆಕೆಯ ಜೊತೆ ಲೈಂಗಿಕ ಸಂಪರ್ಕ ನಡೆಸಿದ್ದ. ಖಾಸಗಿ ಕ್ಷಣವನ್ನು ವಿಡಿಯೋ ಮಾಡಿಕೊಂಡಿದ್ದ ಚಂದ್ರೇಗೌಡ ಅದನ್ನು ಇಟ್ಟುಕೊಂಡು ಮಹಿಳೆಗೆ ಹೆದರಿಸಿ ಆಕೆಯಿಂದ 5 ಲಕ್ಷ ಹಣ ಪಡೆದಿದ್ದ ಎಂದು ದೂರಲಾಗಿದೆ. ಸಂತ್ರಸ್ತ ಮಹಿಳೆ ಒಮ್ಮೆ ಚಂದ್ರೇಗೌಡನ ಮೊಬೈಲ್ ಪರಿಶೀಲಿಸಿದ್ದ ವೇಳೇ ಆಕೆಗೆ ಶಾಕ್ ಆಗಿದ್ದು, ಮೊಬೈಲ್ನಲ್ಲಿ ಹಲವು ಮಹಿಳೆಯರ ವಿಡಿಯೋ, ಚಾಟಿಂಗ್ ಪತ್ತೆಯಾಗಿತ್ತು. ಹೀಗಾಗಿ ಆರೋಪಿ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಪೂಜಾ ದತ್ತಾ ಬೆತ್ತಲೆ ಶವ ಪತ್ತೆ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಸಿಕ್ತು ಹಲವು ಆಘಾತಕಾರಿ ಮಾಹಿತಿ!
ಮದುವೆ ಡ್ರಾಮಾ
ಇನ್ನು ದೂರುದಾರ ಮಹಿಳೆಯನ್ನು ಮದುವೆಯಾಗಿ ನಂಬಿಸಿದ್ದ ಆರೋಪಿ ವಿವಾಹವಾಗಿದ್ದೇನೆ ಎಂದು ನಂಬಿಸಲು ಆಕೆಯ ಕೊರಳಿಗೆ ಅರಿಶಿನದ ಕೊಂಬನ್ನೂ ಕಟ್ಟಿದ್ದ. ಸಂತ್ರಸ್ತೆಯ ಆಧಾರ್ ಕಾರ್ಡ್ ಕೂಡ ಪಡೆದಿದ್ದ ಈತ ತಾನು ಆಕೆಯ ಗಂಡನೆಂದು ಬಿಂಬಿಸಿ ಮಾಡಿಗೆ ಮನೆಯೊಂದಕ್ಕೆ ಕರಾರು ಪತ್ರವನ್ನೂ ಮಾಡಿಸಿದ್ದ. ತನ್ನ ತಾಯಿಯನ್ನೂ ಸಂತ್ರಸ್ತೆಯ ಮನೆಯಲ್ಲೇ ಆತ ಬಿಟ್ಟಿದ್ದು, ವರ್ಷಾನುಗಟ್ಟಲೆ ಆಕೆಯ ಆರೈಕೆಯನ್ನು ದೂರುದಾರ ಮಹಿಳೆ ಮಾಡಿದ್ದಾಳೆ ಎನ್ನಲಾಗಿದೆ. ಸಾಲದ್ದಕ್ಕೆ ಸಂತ್ರಸ್ತೆಯ ಮಗಳ ವ್ಯಾಸಂಗ ಸಂಬಂಧಿತ ದಾಖಲಾತಿಗಳನ್ನೂ ಬದಲಾಯಿಸಿ, ತಾನೇ ಮಹಿಳೆಯ ಗಂಡ ಎಂದು ಬಿಂಬಿಸಲು ಹೊರಟಿದ್ದ ಎಂದು ಆರೋಪಿಸಲಾಗಿದೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.