ಕೊಡಗು, (ಆಗಸ್ಟ್ 16): ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ನಡೆದ ಶೂಟೌಟ್‌ನಲ್ಲಿ ಮೂವರು ಹತ್ಯೆಯಾಗಿದ್ದಾರೆ. ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದಾರೆ. ಮೃತರು ಪ್ರಾಣಿಗಳ ಬೇಟೆಗೆ ಬಂದಿದ್ದು, ಈ ದಾಳಿ ನಡೆಸಿದ್ದಕ್ಕೆ ಆತ್ಮ ರಕ್ಷಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ಸಹ ಪ್ರತಿ ದಾಳಿ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇನ್ನೊಂದೆಡೆ ಘಟನೆಯಿಂದ ಎಸ್ಕೇಪ್ ಆಗಿ ಬಂದಿರುವ ಮತ್ತೋರ್ವ, ಇದನ್ನು ಅಲ್ಲಗಳೆದಿದ್ದು, ಹೀಗಾಗಿ ಅಸಲಿಗೆ ಆಗಿದ್ದೇನು ಎನ್ನುವುದೇ ನಿಗೂಢವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ನೀಡಲಾಗಿದೆ.
ಇನ್ನು ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಡಿಕೆ ಶಿವಕುಮಾರ್,ಘಟನಾ ಸ್ಥಳದಲ್ಲಿ ಕೋವಿಗಳು ದೊರೆತ್ತಿವೆ. ಹಾಗೇ ಮಾಂಸ ಸಿಕ್ಕಿದೆ. ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಇನ್ನು ಮೃತರ ಕುಟುಂಬದವರಿಗೆ ಎಷ್ಟು ಪರಿಹಾರ ಕೊಡಬಹುದು ಎಂದು ಚಿಂತಿಸಲಾಗುತ್ತಿದೆ ಎಂದು ತಿಳಿಸಿದರು.