ಹಾಲಿವುಡ್ ಸಿನಿಮಾ ಅನ್ನು ಅಡ್ಡಗಟ್ಟಿ ನಿಲ್ಲಿಸಿದ ‘ಧುರಂಧರ್ 2’

ಹಾಲಿವುಡ್ ಸಿನಿಮಾ ಅನ್ನು ಅಡ್ಡಗಟ್ಟಿ ನಿಲ್ಲಿಸಿದ ‘ಧುರಂಧರ್ 2’

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಮಾತ್ರವಲ್ಲದೆ ವಿಶ್ವ ಬಾಕ್ಸ್ ಆಫೀಸ್​​ನಲ್ಲಿಯೂ ಸಹ ನೂರಾರು ಕೋಟಿ ಬಾಚುತ್ತಿದೆ. ಸಿನಿಮಾ ಬಿಡುಗಡೆ ಆಗಿ ವಾರ ಆಗುವಷ್ಟರಲ್ಲಿ ಸಿನಿಮಾದ ಗಳಿಕೆ 1000 ಕೋಟಿ ರೂಪಾಯಿ ದಾಟಿದೆ ಎನ್ನಲಾಗುತ್ತಿದೆ. ಸಿಂಗಲ್ ಥಿಯೇಟರ್, ಮಲ್ಟಿಪ್ಲೆಕ್ಸ್ ಎಲ್ಲೆಡೆ ‘ಧುರಂಧರ್ 2’ ಹವಾ ಜೋರಾಗಿದೆ. ‘ಧುರಂಧರ್ 2’ ಎದುರು ಬಿಡುಗಡೆ ಆದ ಸಿನಿಮಾಗಳು ‘ಧುರಂಧರ್ 2’ ನೆರಳಲ್ಲಿ ಬಳಲುತ್ತಿವೆ. ಇದೀಗ ‘ಧುರಂಧರ್ 2’ ಸಿನಿಮಾ ಹಾಲಿವುಡ್ ಸಿನಿಮಾ ಒಂದಕ್ಕೆ ಭಾರಿ ಸ್ಪರ್ಧೆ ನೀಡುತ್ತಿರುವುದು ಮಾತ್ರವಲ್ಲ, ಭಾರತಕ್ಕೆ ಎಂಟ್ರಿ ಕೊಡಲು ಸಹ ಕಷ್ಟಪಡುವಂತೆ ಮಾಡಿದೆ.

ರ್ಯಾನ್ ಗೋಸ್ಲಿಂಗ್ ನಟನೆಯ ಭಾರಿ ಬಜೆಟ್ ಸಿನಿಮಾ ‘ಪ್ರಾಜೆಕ್ಟ್ ಹೇಲ್ ಮೇರಿ’ ಸಿನಿಮಾ ಭಾರತದಲ್ಲಿ ಬಿಡುಗಡೆ ಆಗಿದೆ. ಸಾಮಾನ್ಯವಾಗಿ ಹಾಲಿವುಡ್ ಸಿನಿಮಾಗಳು ಭಾರತದಲ್ಲಿ ಬಿಡುಗಡೆ ಆದಾಗ ಮಲ್ಟಿಪ್ಲೆಕ್ಸ್​​ಗಳಲ್ಲಿ ಮಾತ್ರವೇ ಬಿಡುಗಡೆ ಆಗುತ್ತದೆ. ಹಾಲಿವುಡ್ ಸಿನಿಮಾಗಳ ಮುಖ್ಯ ಗ್ರಾಹಕರೇ ಮಲ್ಟಿಪ್ಲೆಕ್ಸ್ ಗ್ರಾಹಕರು. ಹಾಲಿವುಡ್ ಸಿನಿಮಾಗಳು ಹೆಚ್ಚು ವಿಎಫ್​​ಎಕ್ಸ್ ಮತ್ತು ದೃಶ್ಯದ ಗುಣಮಟ್ಟ ಹೊಂದಿರುತ್ತವೆಯಾದ್ದರಿಂದ ಐನಾಕ್ಸ್, ಪಿವಿಆರ್ ನ ಅತ್ಯುತ್ತಮ ಸೌಂಡ್ ಮತ್ತು ಗುಣಮಟ್ಟದ ಸ್ಕ್ರೀನ್​​ಗಳಲ್ಲಿ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತದೆ.

ಆದರೆ ಇದೀಗ ‘ಪ್ರಾಜೆಕ್ಟ್ ಹೇಲ್ ಮೇರಿ’ ಸಿನಿಮಾಕ್ಕೆ ಭಾರತದಲ್ಲಿ ಮಲ್ಟಿಪ್ಲೆಕ್ಸ್​​ಗಳಲ್ಲಿ ಸ್ಕ್ರೀನ್​​ಗಳು ಸಿಗುತ್ತಿಲ್ಲ. ಭಾರಿ ಬಜೆಟ್​​ನಲ್ಲಿ ನಿರ್ಮಿಸಲಾಗಿರುವ ಅತ್ಯಂತ ಅದ್ಧೂರಿ ದೃಶ್ಯ ವೈಭವ ಇರುವ ಸಿನಿಮಾ ಇದಾಗಿದ್ದು, ಸಿನಿಮಾದ ಅತ್ಯುತ್ತಮ ಅನುಭವವನ್ನು ಪಡೆಯಲು ಐಮ್ಯಾಕ್ಸ್ ಅಥವಾ ಇನ್ಯಾವುದೇ ಅತ್ಯುತ್ತಮ ಗುಣಮಟ್ಟದ ಸ್ಕ್ರೀನ್​​ನಲ್ಲಿಯೇ ಸಿನಿಮಾ ವೀಕ್ಷಿಸಬೇಕಿದೆ. ಆದರೆ ‘ಧುರಂಧರ್ 2’ ಸಿನಿಮಾ ಭಾರತದಲ್ಲಿ ಬಹುತೇಕ ಎಲ್ಲ ಮಲ್ಟಿಪ್ಲೆಕ್ಸ್​​ಗಳನ್ನು ಆಕ್ರಮಿಸಿಕೊಂಡಿದ್ದು, ‘ಪ್ರಾಜೆಕ್ಟ್ ಹೇಲ್ ಮೇರಿ’ಗೆ ಸ್ಕ್ರೀನ್​​ಗಳ ಕೊರತೆ ಎದುರಾಗಿದೆ.

ಇದನ್ನೂ ಓದಿ:‘ಧುರಂಧರ್ 2’ ಅಬ್ಬರಕ್ಕೆ ಹೆದರಿದ ಅಕ್ಷಯ್ ಕುಮಾರ್? ‘ಭೂತ್ ಬಂಗ್ಲ’ ಬಿಡುಗಡೆ ಮುಂದೂಡಿಕೆ ಸಾಧ್ಯತೆ

ಅದರಲ್ಲೂ ‘ಪ್ರಾಜೆಕ್ಟ್ ಹೇಮ್ ಮೇರಿ’ ಸಿನಿಮಾಕ್ಕೆ ಇಡೀ ದೇಶದಲ್ಲಿ ಕೇವಲ ನಾಲ್ಕು ಐಮ್ಯಾಕ್ಸ್ ಸ್ಕ್ರೀನ್​​ಗಳು ದೊರೆತಿವೆ ಎನ್ನಲಾಗುತ್ತಿದೆ. ಹಾಲಿವುಡ್ ಸಿನಿಮಾಗಳು ಬಿಡುಗಡೆ ಆದರೆ, ಪ್ರದರ್ಶನವಾಗುತ್ತಿದ್ದ ಭಾರತೀಯ ಭಾಷೆಯ ಸಿನಿಮಾಗಳನ್ನು ಪಕ್ಕಕ್ಕೆ ಸರಿಸುತ್ತಿದ್ದವು ಮಲ್ಟಿಪ್ಲೆಕ್ಸ್​​ಗಳು ಆದರೆ ಈಗ ಅತಿ ದೊಡ್ಡ ಹಾಲಿವುಡ್​ ಸಿನಿಮಾಕ್ಕೆ ಮಲ್ಟಿಪ್ಲೆಕ್ಸ್​​ನಲ್ಲಿ ಸ್ಕ್ರೀನ್​​ಗಳು ಸಿಗದಂತೆ ಮಾಡಿದೆ ‘ಧುರಂಧರ್ 2’.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *