Headlines

ಹಿಂದಿ ಗೊಂದಲ: SSLC ಫಲಿತಾಂಶ ವಿಳಂಬ, ಸಚಿವ ಮಧು ಬಂಗಾರಪ್ಪ ಹೇಳಿದ್ದೇನು? – Kannada News | SSLC Hindi Language Row: Madhu Bangarappa Reacts Over Karnataka High Court Halting Midway Grading Shift

ಬೆಂಗಳೂರು, (ಏಪ್ರಿಲ್ 21): ಎಸ್‌ಎಸ್‌ಎಲ್‌ಸಿ ಹಿಂದಿ (SSLC Hindi) ವಿಷಯಕ್ಕೆ ಗ್ರೇಡ್ ಬದಲಿಗೆ ಅಂಕ ನೀಡುವಂತೆ ಆದೇಶ ಸಂಬಂಧ ರಾಜ್ಯ ಸರ್ಕಾರದ ಮರುಪರಿಶೀಲನಾ ಅರ್ಜಿಯನ್ನು ಹೈಕೋರ್ಟ್​​ (Karnataka High Court) ಇತ್ಯರ್ಥಪಡಿಸಿದೆ. 2025-26ರಿಂದ ಹಿಂದಿ ವಿಷಯಕ್ಕೆ ಅಂಕ ನೀಡಬೇಕೆಂದು ಪೀಠ ಸ್ಪಷ್ಟಪಡಿಸಿದ್ದು, ನೀವು ಎಲ್ಲರನ್ನೂ ಪಾಸ್ ಮಾಡಬೇಕೆಂದಿದ್ದರೆ ಪರೀಕ್ಷೆಯನ್ನೇ ರದ್ದು ಮಾಡಿ. ನಿಯಮ ರೂಪಿಸುವ ಮುನ್ನ ಪರೀಕ್ಷಾ ಪದ್ಧತಿ ಬದಲಾವಣೆ ಸೂಕ್ತವಲ್ಲ ಎಂದು ತಿಳಿಸಿದೆ. ಇನ್ನು ಈ ಹೈಕೋರ್ಟ್ ಆದೇಶದ ಬಗ್ಗೆ ಸಿಎಂ ಜತೆ ಮಾತನಾಡುವುದಾಗಿ ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ. ಹೀಗಾಗಿ ಎಸ್​​ಎಸ್​ಎಲ್​​ಸಿ ಫಲಿತಾಂಶ ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.

ಇನ್ನು ಈ ಬಗ್ಗೆ ಟಿವಿ9ಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಪ್ರತಿಕ್ರಿಯಿಸಿದ್ದು, ಈ ಮೊದಲು ಹೈಕೋರ್ಟ್ ನಮ್ಮ ಪರವಾಗಿ ಹೇಳಿತ್ತು. ಯಾರು ಅರ್ಜಿ ಹಾಕಿದ್ದರು ಅವರಿಗೆ ದಂಡ ಹಾಕಿತ್ತು. ಈಗ ಯಾರೋ ಅರ್ಜಿ ಸಲ್ಲಿಸಿದ್ದು, ಅದರನ್ವಯ ಈ ವರ್ಷ ಬೇಡ, ಮುಂದಿನ ವರ್ಷ ನೀವು ಮಾಡಿ ಎಂದು ಆದೇಶ ನೀಡಿದೆ. ಈ ವರ್ಷ ಅಂಕ ನೀಡಿ ಎಂದಿದ್ದಾರೆ. ಆದ್ರೆ ನಾನು ಇನ್ನೂ ಆರ್ಡರ್ ನೋಡಿಲ್ಲ. ನನಗೆ ಎಜಿ ಮತ್ತು ಡಿಪಾರ್ಟ್ಮೆಂಟ್ ಅವರು ಹೇಳಿದ್ದರು. ನಾನು ಈ ಮಾಹಿತಿ ಯನ್ನ ಸಿಎಂ ಅವರಿಗೆ ಹೇಳಿದ್ದೇನೆ. ಅವರು ಈಗ ಮೈಸೂರಲ್ಲಿದ್ದಾರೆ, ಇಂದು (ಏಪ್ರಿಲ್ 21) ಸಂಜೆ ಬರ್ತಾರೆ. ನಾಳೆ (ಏಪ್ರಿಲ್ 22) ಅವರ ಬಳಿ ಮಾತಾಡಿ ಮುಂದೆ ಏನು ಮಾಡಬೇಕು ಎಂದು ಚರ್ಚೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: SSLC ಹಿಂದಿ ವಿಷಯಕ್ಕೆ ಗ್ರೇಡ್​​ ಬದಲಿಗೆ ಅಂಕ: ಹೈಕೋರ್ಟ್ ಆದೇಶ ಮರುಪರಿಶೀಲನಾ ಅರ್ಜಿ ಇತ್ಯರ್ಥ

Source link

Leave a Reply

Your email address will not be published. Required fields are marked *