ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವುದು ಬಹಳ ಸುಲಭದ ಸಂಗತಿ. ಷೇರುಗಳನ್ನು ಅಧ್ಯಯನ ಮಾಡುವ ಅಗತ್ಯ ಇರುವುದಿಲ್ಲ. ಸರಿಯಾದ ಮ್ಯೂಚುವಲ್ ಫಂಡ್ಗಳನ್ನು ಆಯ್ಕೆ ಮಾಡಿಕೊಳ್ಳುವ ಸವಾಲು ಮಾತ್ರವೇ ಇರುತ್ತದೆ. ಮ್ಯೂಚುವಲ್ ಫಂಡ್ಗಳಲ್ಲಿ ಹಲವಾರು ವಿಧಗಳಿವೆ. ಈಕ್ವಿಟಿ ಫಂಡ್ಗಳು, ಡೆಟ್ ಫಂಡ್ಗಳು ಇತ್ಯಾದಿ ಇವೆ. ಈಕ್ವಿಟಿ ಮ್ಯೂಚುವಲ್ ಫಂಡ್ಗಳಲ್ಲೇ ನಾನಾ ವಿಧಗಳಿವೆ. ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್, ಫ್ಲೆಕ್ಸಿ ಕ್ಯಾಪ್ ಇತ್ಯಾದಿ ಇವೆ. ಈಗೀಗ ವ್ಯಾಲ್ಯೂ ಫಂಡ್ಗಳು (Value Mutual Funds) ಜನಪ್ರಿಯತೆ ಪಡೆಯುತ್ತಿವೆ.
ಏನಿದು ವ್ಯಾಲ್ಯೂ ಮ್ಯೂಚುವಲ್ ಫಂಡ್?
ಬಹಳ ಅಂಡರ್ವ್ಯಾಲ್ಯೂ ಹೊಂದಿರುವ ಷೇರುಗಳನ್ನು ಗುರುತಿಸಿ ಇದು ಹೂಡಿಕೆ ಮಾಡುತ್ತದೆ. ಮಲ್ಟಿಬ್ಯಾಗರ್ ಆಗಲ್ಲಂತಹ ಷೇರುಗಳನ್ನು ಈ ಫಂಡ್ ಮ್ಯಾನೇಜರ್ಗಳು ಹುಡುಕುತ್ತಾರೆ. ಕೆಲ ಕಂಪನಿಗಳು ಹಣಕಾಸು ಮತ್ತು ತಾಂತ್ರಿಕತೆಯಲ್ಲಿ ಬಲಿಷ್ಠವಾಗಿದ್ದರೂ ವಿವಿಧ ಕಾರಣಗಳಿಗೆ ಇವುಗಳ ಷೇರುಗಳು ಹಿನ್ನಡೆಯಲ್ಲಿರುತ್ತವೆ. ಮೂಲಭೂತ ಅಂಶಗಳು ಉತ್ತಮವಾಗಿರುವ ಇಂಥ ಸ್ಟಾಕುಗಳಲ್ಲಿ ವ್ಯಾಲ್ಯೂ ಈಕ್ವಿಟಿ ಫಂಡ್ಗಳು ಹೂಡಿಕೆ ಮಾಡುತ್ತವೆ.
ಇದನ್ನೂ ಓದಿ: ನಾಮಿನಿ ಹೆಸರಿಸದೆಯೇ ಹೂಡಿಕೆದಾರ ಮೃತಪಟ್ಟರೆ ಮ್ಯೂಚುವಲ್ ಫಂಡ್ ಹೂಡಿಕೆಗೆ ಏನಾಗುತ್ತದೆ?
ವ್ಯಾಲ್ಯೂ ಈಕ್ವಿಟಿ ಫಂಡ್ಗಳು ಯಾವ್ಯಾವ ಮಾನದಂಡ ಅನುಸರಿಸುತ್ತವೆ?
ಕಡಿಮೆ ಬೆಲೆಗೆ ಉತ್ತಮ ಷೇರುಗಳು ಲಭ್ಯ ಇದ್ದರೆ ಅದನ್ನು ಖರೀದಿಸುವುದು ಈ ಫಂಡ್ನ ಮೂಲಭೂತ ತಂತ್ರ. ಪಿಇ ರೇಶಿಯೋ, ಪಿಬಿ ರೇಶಿಯೋ, ಉತ್ತಮ ಬ್ಯಾಲನ್ಸ್ ಶೀಟ್, ಉತ್ತಮ ಕ್ಯಾಷ್ ಫ್ಲೋ, ಸತತ ಆದಾಯ ಗಳಿಕೆ ಅವಕಾಶ, ಮಾರುಕಟ್ಟೆ ಹಿನ್ನಡೆಯಿಂದ ಬೆಲೆ ಕುಸಿದಿರುವುದು, ದೀರ್ಘಾವಧಿಯಲ್ಲಿ ಹೆಚ್ಚು ಯಶಸ್ಸು ಸಾಧ್ಯತೆ ಇತ್ಯಾದಿ ಲೋ ವ್ಯಾಲ್ಯೂಯೇಶನ್ ರೇಶಿಯೋ ಹೊಂದಿರುವ ಮತ್ತು ವಾಸ್ತವಕ್ಕಿಂತ ಕಡಿಮೆ ಮೌಲ್ಯ ಹೊಂದಿರುವ ಷೇರುಗಳನ್ನು ಆಯ್ಕೆ ಮಾಡಲಾಗುತ್ತದೆ.
ಇಂಥ ಕಂಪನಿಗಳು ಯಾವಾಗ ಬೇಕಾದರೂ ಜಿಗಿತ ಕಾಣುವ ಸಾಮರ್ಥ್ಯ ಹೊಂದಿರುತ್ತವೆ. ಮಾರುಕಟ್ಟೆಯಲ್ಲಿ ಅದಕ್ಕೆ ಪೂರಕವಾದ ವಾತಾವರಣ ಸಿಕ್ಕಿಬಿಟ್ಟರೆ ಈ ಕಂಪನಿಗಳು ಓಡುವ ಕುದುರೆಗಳಾಗುತ್ತವೆ. ಷೇರು ಮಾರುಕಟ್ಟೆಯಲ್ಲಿ ಮಲ್ಟಿಬ್ಯಾಗರ್ ಎನಿಸುತ್ತವೆ.
ಇದನ್ನೂ ಓದಿ: ಆರೂವರೆ ವರ್ಷದಲ್ಲಿ 4 ಪಟ್ಟು ಲಾಭ ಕೊಟ್ಟ ಗೋಲ್ಡ್ ಬಾಂಡ್; ಒಂದು ಲಕ್ಷಕ್ಕೆ 4 ಲಕ್ಷ ರಿಟರ್ನ್ಸ್
ಈಗಿರುವ ವ್ಯಾಲ್ಯೂ ಫಂಡ್ಗಳು ಮತ್ತವುಗಳ 1 ವರ್ಷದ ಸಿಎಜಿಆರ್
- ಮಹೀಂದ್ರ ಮನುಲೈಫ್ ವ್ಯಾಲ್ಯೂ ಫಂಡ್: ಶೇ. 16.39
- ಎಲ್ಐಸಿ ಎಂಎಫ್ ವ್ಯಾಲ್ಯೂ ಫಂಡ್: ಶೇ. 15.29
- ಕ್ವಾಂಟ್ ವ್ಯಾಲ್ಯೂ ಫಂಡ್: ಶೇ. 14.53
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಈ ಫಂಡ್ಗಳ ಕೆಟಗರಿಯ ಸರಾಸರಿ ಶೇ. 9.35 ಮಾತ್ರವೇ ಇರುವುದು. ಹೆಚ್ಚೂಕಡಿಮೆ ಒಂದೂವರೆ ಪಟ್ಟು ಹೆಚ್ಚು ರಿಟರ್ನ್ ಕೊಡುತ್ತಿವೆ ವ್ಯಾಲ್ಯೂ ಫಂಡ್ಗಳು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ