ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ (Ranveer Singh) ಇತ್ತೀಚೆಗಷ್ಟೇ ತೆರೆಕಂಡ ‘ಧುರಂಧರ್’ ಚಿತ್ರದ ಭರ್ಜರಿ ಯಶಸ್ಸಿನ ಖುಷಿಯಲ್ಲಿದ್ದಾರೆ. ಆದರೆ, ಮತ್ತೊಂದೆಡೆ ಬಹುನಿರೀಕ್ಷಿತ ‘ಡಾನ್ 3’ ಚಿತ್ರದಿಂದ ಹೊರಬಂದ ವಿಚಾರವಾಗಿ ನಿರ್ದೇಶಕ ಫರ್ಹಾನ್ ಅಖ್ತರ್ ಹಾಗೂ ರಣವೀರ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿ ಬಿ-ಟೌನ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಈ ಎಲ್ಲಾ ವಿವಾದ ಹಾಗೂ ಗಾಸಿಪ್‌ಗಳ ನಡುವೆಯೇ ರಣವೀರ್ ಸಿಂಗ್ ಮುಂಬೈ ರಸ್ತೆಗಳಲ್ಲಿ ತಮ್ಮ ಹೊಚ್ಚಹೊಸ ಐಷಾರಾಮಿ ಕಾರಿನಲ್ಲಿ ರೌಂಡ್ಸ್ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ರಣವೀರ್ ಸಿಂಗ್ ತಮ್ಮ ದುಬಾರಿ ಕಲೆಕ್ಷನ್‌ಗೆ ಸೇರ್ಪಡೆ ಮಾಡಿಕೊಂಡಿರುವ ಕಡುಗಪ್ಪು ಬಣ್ಣದ ‘ಫೆರಾರಿ 296 ಜಿಟಿಬಿ’ ಸೂಪರ್ ಕಾರ್ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಭಾರತದಲ್ಲಿ ಈ ರೇಸಿಂಗ್ ಕಾರಿನ ಬೆಲೆ ಬರೋಬ್ಬರಿ 6.36 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ‘ಬಾಲಿವುಡ್‌ನಲ್ಲಿ ಪಾಕಿಸ್ತಾನ ಪ್ರೇಮ ಹೆಚ್ಚಿದೆ’: ರಣವೀರ್ ಸಿಂಗ್ ಪರ ಬ್ಯಾಟ್ ಬೀಸಿದ ಕಂಗನಾ ರಣಾವತ್
ರಣವೀರ್ ಗ್ಯಾರೇಜ್‌ನಲ್ಲಿರುವ ಇತರ ದುಬಾರಿ ಕಾರುಗಳು:
ಬಾಲಿವುಡ್‌ನಲ್ಲಿ ಸಖತ್ ಕಾಸ್ಟ್‌ಲಿ ಲೈಫ್‌ಸ್ಟೈಲ್ ಹೊಂದಿರುವ ರಣವೀರ್ ಸಿಂಗ್‌ಗೆ ಕಾರುಗಳೆಂದರೆ ಅಪಾರ ಕ್ರೇಜ್. ಹೊಸ ಫೆರಾರಿ ಮಾತ್ರವಲ್ಲದೆ ಅವರ ಗ್ಯಾರೇಜ್‌ನಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಇನ್ನು ಹಲವು ಕಾರುಗಳಿವೆ.
ಮರ್ಸಿಡಿಸ್-ಮೇಬ್ಯಾಕ್ GLS 600: ಇದರ ಬೆಲೆ ಸುಮಾರು 3.11 ಕೋಟಿಯಿಂದ 3.35 ಕೋಟಿ ರೂ.
ಆಸ್ಟನ್ ಮಾರ್ಟಿನ್ ರೇಪಿಡ್ S: ಇದರ ಬೆಲೆ ಅಂದಾಜು 3.29 ಕೋಟಿ ರೂ.
ಲಂಬೋರ್ಗಿನಿ ಉರುಸ್ ಪರ್ಲ್ ಕ್ಯಾಪ್ಸುಲ್: ಇದರ ಬೆಲೆ ಬರೋಬ್ಬರಿ 3.98 ಕೋಟಿಯಿಂದ 4.71 ಕೋಟಿ ರೂ.
ರಣವೀರ್ ಸಿಂಗ್ ಮುಂದಿನ ಸಿನಿಮಾಗಳು:
ಸದ್ಯ ‘ಧುರಂಧರ್’ ಸಕ್ಸಸ್ ಬೆನ್ನಲ್ಲೇ ರಣವೀರ್ ಸಿಂಗ್ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಮುಂದಿನ ದಿನಗಳಲ್ಲಿ ಅವರು ಖ್ಯಾತ ಚಿತ್ರನಿರ್ಮಾಪಕ ಹನ್ಸಲ್ ಮೆಹ್ತಾ ಅವರ ಪುತ್ರ ಜೈ ಮೆಹ್ತಾ ನಿರ್ದೇಶಿಸಲಿರುವ ‘ಪ್ರಳಯ್’ ಎಂಬ ಜಾಂಬಿ ಥ್ರಿಲ್ಲರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ವಿವಾದ ಏನೇ ಇದ್ದರೂ ರಣವೀರ್ ಮಾತ್ರ ತಮ್ಮದೇ ಸ್ಟೈಲ್‌ನಲ್ಲಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.