Headlines

13 ಓವರ್​ಗಳ ಲೆಕ್ಕಾಚಾರ ಪಾಕ್ ಪಾಲಿಗೆ ಕಷ್ಟಸಾಧ್ಯ! – Kannada News | Pakistan cannot chase a big score within 13 overs

T20 World Cup 2026: ಟಿ20 ವಿಶ್ವಕಪ್​ನ 50ನೇ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿದೆ. ಲಂಕಾದ ಪಲ್ಲೆಕೆಲೆಯಲ್ಲಿ ನಡೆಯಲಿರುವ ಈ ಪಂದ್ಯವು ಪಾಕಿಸ್ತಾನ್ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್​ನಲ್ಲಿ ಅಮೋಘ ಗೆಲುವು ದಾಖಲಿಸಿದರೆ ಮಾತ್ರ ಪಾಕ್ ತಂಡ ಸೆಮಿಫೈನಲ್​ಗೇರಲಿದೆ.

ಇಲ್ಲಿ ಅಮೋಘ ಗೆಲುವಂದರೆ ಶ್ರೀಲಂಕಾ ವಿರುದ್ಧ ಕನಿಷ್ಠ 64 ರನ್​ಗಳ ಜಯ ಸಾಧಿಸಲೇಬೇಕು. ಒಂದು ವೇಳೆ ಚೇಸಿಂಗ್ ಮಾಡಿದರೆ ಕನಿಷ್ಠ 40 ಎಸೆತಗಳು ಬಾಕಿಯಿರುವಂತೆ ಪಂದ್ಯ ಮುಗಿಸಬೇಕು. ಅಂದರೆ 13 ಓವರ್​ಗಳಲ್ಲಿ ಚೇಸ್ ಮಾಡುವುದು ಪಾಕಿಸ್ತಾನ್ ಪಾಲಿಗೆ ಅನಿವಾರ್ಯ.

ಒಂದು ವೇಳೆ ಶ್ರೀಲಂಕಾ ತಂಡವು 201 ರನ್​ಗಳ ಗುರಿ ನೀಡಿದರೆ ಪಾಕಿಸ್ತಾನ್ ತಂಡವು ಈ ಗುರಿಯನ್ನು ಕೇವಲ 13.5 ಓವರ್​ಗಳಲ್ಲಿ ಚೇಸ್ ಮಾಡಬೇಕಾಗುತ್ತದೆ. ಇನ್ನು 151 ರನ್​ಗಳ ಗುರಿ ನೀಡಿದರೆ ಪಾಕಿಸ್ತಾನ್ ತಂಡವು ಕೇವಲ 12.4 ಓವರ್​ಗಳಲ್ಲಿ ಪಂದ್ಯ ಮುಗಿಸಬೇಕು.

ಆದರೆ ಇಂತಹದೊಂದು ಚೇಸಿಂಗ್ ಪಾಕಿಸ್ತಾನ್ ತಂಡಕ್ಕೆ ಕಷ್ಟಸಾಧ್ಯ ಎಂದೇ ಹೇಳಬಹುದು. ಏಕೆಂದರೆ ಈ ಬಾರಿಯ ವಿಶ್ವಕಪ್​ನಲ್ಲಿ 5 ಪಂದ್ಯಗಳನ್ನಾಡಿರುವ ಪಾಕ್ ತಂಡವು ಒಮ್ಮೆಯೂ 10ರ ಸರಾಸರಿಯಲ್ಲಿ ರನ್​ ಗಳಿಸಿಲ್ಲ ಎಂಬುದು ಉಲ್ಲೇಖಾರ್ಹ.

  • ನೆದರ್​ಲೆಂಡ್ಸ್​ ನೀಡಿದ 147 ರನ್​ಗಳ ಗುರಿಯನ್ನು ಪಾಕಿಸ್ತಾನ್ ತಂಡ ಬೆನ್ನತ್ತಿರುವುದು 19.3 ಓವರ್​ಗಳಲ್ಲಿ. ಅಂದರೆ ಪ್ರತಿ ಓವರ್​ಗೆ 7.5 ರ ಸರಾಸರಿಯಲ್ಲಿ ಮಾತ್ರ ರನ್​ಗಳಿಸಿದ್ದರು.
  • ಯುಎಸ್​ಎ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ್ ತಂಡ 20 ಓವರ್​ಗಳಲ್ಲಿ ಕಲೆಹಾಕಿದ್ದು 190 ರನ್​ಗಳು. ಅಂದರೆ ಪ್ರತಿ ಓವರ್​ಗೆ 9.5 ರ ಸರಾಸರಿಯಲ್ಲಿ ರನ್​ ಗಳಿಸಿದ್ದರು.
  • ಭಾರತದ ವಿರುದ್ಧದ ಪಂದ್ಯದಲ್ಲಿ 18 ಓವರ್​ಗಳಲ್ಲಿ ಕೇವಲ 114 ರನ್​ಗಳಿಸಿ ಆಲೌಟ್ ಆಗಿದ್ದರು. ಅಂದರೆ ಟೀಮ್ ಇಂಡಿಯಾ ವಿರುದ್ಧ ಪ್ರತಿ ಓವರ್​ಗೆ ಕೇವಲ 6.3 ಸರಾಸರಿಯಲ್ಲಿ ಮಾತ್ರ ರನ್ ಕಲೆಹಾಕಿದ್ದರು.
  • ನಮೀಬಿಯ ವಿರುದ್ಧದ ಪಂದ್ಯದಲ್ಲಿ 20 ಓವರ್​ಗಳಲ್ಲಿ ಗಳಿಸಿದ್ದು 199 ರನ್​ಗಳು. ಅಂದರೆ ಪ್ರತಿ ಓವರ್​ಗೆ 9.95 ರ ಸರಾಸರಿಯಲ್ಲಿ ರನ್​ಗಳಿಸಿದ್ದರು.
  • ಇಂಗ್ಲೆಂಡ್ ವಿರುದ್ಧ 20 ಓವರ್​ಗಳಲ್ಲಿ ಕಲೆಹಾಕಿದ್ದು 164 ರನ್​ಗಳು ಮಾತ್ರ. ಅಂದರೆ ಪ್ರತಿ ಓವರ್​ಗೆ 8.2 ಸರಾಸರಿಯಲ್ಲಿ ರನ್​ಗಳಿಸಲಷ್ಟೇ ಶಕ್ತರಾಗಿದ್ದರು.

ಅಂದರೆ ಕಳೆದ ಐದು ಮ್ಯಾಚ್​ಗಳಲ್ಲಿ ಪಾಕಿಸ್ತಾನ್ ತಂಡವು 10ರ ಸರಾಸರಿಯಲ್ಲಿ ರನ್ ಗಳಿಸಿಯೇ ಇಲ್ಲ. ಹೀಗಾಗಿಯೇ ಒಮ್ಮೆಯೂ 200 ರನ್​ಗಳ ಗಡಿದಾಟಲು ಸಾಧ್ಯವಾಗಿಲ್ಲ.

ಇದೀಗ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ತಂಡ 200 ರನ್​ಗಳಿಸಿದರೆ, ಪಾಕಿಸ್ತಾನ್ ತಂಡವು 13.5 ಓವರ್​ಗಳಲ್ಲಿ ಚೇಸ್ ಮಾಡಬೇಕಾಗುತ್ತದೆ. ಅಂದರೆ ಪ್ರತಿ ಓವರ್​​ಗೆ 14 ರ ಸರಾಸರಿಯಲ್ಲಿ ರನ್​ಗಳಿಸಲೇಬೇಕು.

ಒಂದು ವೇಳೆ ಶ್ರೀಲಂಕಾ 181 ರನ್​ಗಳ ಗುರಿ ನೀಡಿದರೆ ಪಾಕಿಸ್ತಾನ್ ಪ್ರತಿ ಓವರ್​ಗೆ 13.50 ಸರಾಸರಿಯಲ್ಲಿ ರನ್​ಗಳಿಸಿ 13.4 ಓವರ್​ಗಳಲ್ಲಿ ಪಂದ್ಯ ಮುಗಿಸಬೇಕಾಗುತ್ತದೆ.

ಶ್ರೀಲಂಕಾ ತಂಡವು 150 ರನ್​ಗಳಿಸಿದರೆ, ಪಾಕಿಸ್ತಾನ್ ತಂಡವು 12.4 ಓವರ್​ಗಳಲ್ಲಿ 151 ರನ್​ಗಳಿಸಲೇಬೇಕು. ಅಂದರೆ ಪ್ರತಿ ಓವರ್​ಗಳಲ್ಲಿ 12 ರ ಸರಾಸರಿಯಲ್ಲಿ ರನ್​ ಕಲೆಹಾಕಲೇಬೇಕು.

ಆದರೆ ನೆದರ್​ಲೆಂಡ್ಸ್, ಯುಎಸ್​ಎ, ನಮೀಬಿಯ ವಿರುದ್ಧದವೇ ಪಾಕಿಸ್ತಾನ್ ತಂಡಕ್ಕೆ ಪ್ರತಿ ಓವರ್​ಗೆ 10ರ ಸರಾಸರಿಯಲ್ಲಿ ರನ್​ಗಳಿಸಲು ಸಾಧ್ಯವಾಗಿಲ್ಲ. ಹೀಗಾಗಿಯೇ ಶ್ರೀಲಂಕಾ ವಿರುದ್ಧ ಕಠಿಣ ಗುರಿಯನ್ನು 13 ಓವರ್​ಗಳಲ್ಲಿ ಬೆನ್ನತ್ತುವುದು ಪಾಕ್ ಪಾಲಿಗೆ ಕಷ್ಟಸಾಧ್ಯ ಎನ್ನಲಾಗುತ್ತಿದೆ.

ಇದಾಗ್ಯೂ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಕ್ ಬ್ಯಾಟರ್​ಗಳು ಅಬ್ಬರಿಸಿದರೆ ಮಾತ್ರ ನ್ಯೂಝಿಲೆಂಡ್ ತಂಡವನ್ನು ನೆಟ್ ರನ್ ರೇಟ್​ನಲ್ಲಿ ಹಿಂದಿಕ್ಕಿ ಸೆಮಿಫೈನಲ್​ಗೇರಬಹುದು.

ಇದನ್ನೂ ಓದಿ: ಒಳ್ಳೆ ಸ್ಪಿನ್ನರ್​ನಂತೆ ಬೌಲಿಂಗ್ ಮಾಡ್ತಿದ್ದೀಯ… ಆಟಗಾರರ ನಡುವೆ ಮಾತಿನ ಚಕಮಕಿ

ಸೂಪರ್-8 ಗ್ರೂಪ್ 2 ಅಂಕಪಟ್ಟಿ:

  • ಇಂಗ್ಲೆಂಡ್: 6 ಅಂಕಗಳು (ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ).
  • ನ್ಯೂಝಿಲೆಂಡ್: 3 ಅಂಕಗಳು (ನೆಟ್ ರನ್ ರೇಟ್ +1.390).
  • ಪಾಕಿಸ್ತಾನ್: 1 ಅಂಕಗಳು (ನೆಟ್ ರನ್ ರೇಟ್ -0.461).
  • ಶ್ರೀಲಂಕಾ: 0 ಅಂಕ (ಟೂರ್ನಿಯಿಂದ ಹೊರಬಿದ್ದಿದೆ).

Source link

Leave a Reply

Your email address will not be published. Required fields are marked *