2 ವರ್ಷದಿಂದ ಮದುವೆಗೆ ದುಂಬಾಲು: ಯುವಕ ಕೊನೆಗೆ ಪೇಯಸಿಗೆ ಮಾಡಿದ್ದೇನು ಗೊತ್ತಾ?

2 ವರ್ಷದಿಂದ ಮದುವೆಗೆ ದುಂಬಾಲು: ಯುವಕ ಕೊನೆಗೆ ಪೇಯಸಿಗೆ ಮಾಡಿದ್ದೇನು ಗೊತ್ತಾ?

ಬೆಳಗಾವಿ, ಮಾರ್ಚ್​ 18: ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವಕನೋರ್ವ ಯುವತಿಯ ತಲೆಗೆ ಕಬ್ಬಿಣದ ರಾಡ್​ನಿಂದ ಹೊಡೆದಿದ್ದು (Assault), ಅಷ್ಟೇ ಅಲ್ಲದೆ ಆಕೆಯ ತಂದೆ, ತಾಯಿ ಮೇಲೂ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ  ಜೋಡಕುರಳಿಯಲ್ಲಿ ನಡೆದಿದೆ. ವಿದ್ಯಾಶ್ರೀ ಕಿಲಾರಿ ಮೇಲೆ ಬೀರಪ್ಪ ರಾಮಪ್ಪ ಕಜ್ಜನ್ನವರ ಎಂಬಾತನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಎರಡು ವರ್ಷಗಳಿಂದ ವಿದ್ಯಾಶ್ರೀ ಮದುವೆ ಮಾಡಿಕೊಡುವಂತೆ ಬೀರಪ್ಪ ರಾಮಪ್ಪ ಕಜ್ಜನ್ನವರ ದುಂಬಾಲು ಬಿದ್ದಿದ್ದ. ಆದರೆ ಬೀರಪ್ಪನಿಗೆ ಮಗಳನ್ನ ಕೊಡಲು ಮಹದೇವ ಕಿಲಾರಿ ಹಿಂದೇಟು ಹಾಕಿದ್ದಾರೆ. ಇದೇ ಕಾರಣಕ್ಕೆ ನಿನ್ನೆ ರಾತ್ರಿ ಏಕಾಏಕಿ ಮನೆಗೆ ನುಗ್ಗಿ ಖಾರದಪುಡಿ ಎರಚಿ ರಾಡ್​ನಿಂದ ಹಲ್ಲೆ ಮಾಡಿದ್ದಾರೆ. ಸುಮಾರು 10 ಜನರು ವಿದ್ಯಾಶ್ರೀ ಸೇರಿದಂತೆ ತಂದೆ, ತಾಯಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಸದ್ಯ ಗಾಯಾಳುಗಳನ್ನು ಚಿಕ್ಕೋಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ದಾವಣಗೆರೆಯಲ್ಲಿ ಪುಂಡರ ಹಾವಳಿ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ 

ದಾವಣಗೆರೆಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಯುವಕನೊಬ್ಬನನ್ನು ಹಿಡಿದು ಹತ್ತಾರು ಯುವಕರಿಂದ ಹಲ್ಲೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಪುಂಡರ ಗ್ಯಾಂಗ್​​ ರಾಡ್, ಕಲ್ಲುಗಳಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದೆ. ಹಲ್ಲೆಯ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.

ಇದನ್ನೂ ಓದಿ: ಮದುವೆ ಮನೆಗಳೇ ಈತನ ಟಾರ್ಗೆಟ್: ಕುಖ್ಯಾತ ಕಳ್ಳ ಪಲ್ಸರ್ ಬಾಬು ಅರೆಸ್ಟ್; 42 ಲಕ್ಷ ರೂ.ಗೂ ಅಧಿಕ ಮೌಲ್ಯದ ಸ್ವತ್ತು ವಶ!

ಇನ್ನು ಪುಂಡರ ಹಾವಳಿ ಒಂದು ತಿಂಗಳಲ್ಲಿ ಮೂರನೇ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರ ಭಯವಿಲ್ಲದೆ ರಸ್ತೆ ನಡುವೆ ಹೊಡೆದಾಡಿಕೊಂಡಿರುವುದು ಸಾರ್ವಜನಿಕರು ಭಯಭೀತರಾಗಿದ್ದಾರೆ. ಕೂಡಲೇ ಪುಂಡರ ಹಾವಳಿ ತಪ್ಪಿಸುವಂತೆ ಆಗ್ರಹಿಸಿದ ಸಾರ್ವಜನಿಕರು ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಟ್ರ್ಯಾಕ್ಟರ್ ಇಂಜಿನ್ ಮೈಮೇಲೆ ಬಿದ್ದು ಚಾಲಕ ಸಾವು

ಇಟ್ಟಿಗೆ ತುಂಬಿದ ಟ್ರ್ಯಾಕ್ಟರ್ ಇಂಜಿನ್ ಮೈಮೇಲೆ ಬಿದ್ದು ಚಾಲಕ ಸಾವನ್ನಪ್ಪಿರುವಂತಹ ಘಟನೆಯೊಂದು ಹಾವೇರಿ ತಾಲ್ಲೂಕಿನ ಮರೋಳ ಗ್ರಾಮದಲ್ಲಿ ಘಟನೆ ನಡೆದಿದೆ. ಹಾವೇರಿ ತಾಲ್ಲೂಕಿನ ಗುತ್ತಲ ತಾಂಡಾದ ನಿವಾಸಿ ದೇವರಾಜ್ ಲಮಾಣಿ ಮೃತ ವ್ಯಕ್ತಿ.

ಇದನ್ನೂ ಓದಿ: 15 ದಿನ ಮಗು ಅನುಮಾಸ್ಪದ ಸಾವು:ತಂದೆಯೇ ಮಗುವಿಗೆ ವಿಷ ಪ್ರಾಶನ ಶಂಕೆ

ಬೆಳಗ್ಗೆ ಎರಡುವರೆ ಸಾವಿರ ಇಟ್ಟಿಗೆ ತುಂಬಿಕೊಂಡು ಮರೋಳ ಗ್ರಾಮಕ್ಕೆ ಬಂದಿದ್ದರು. ಆದರೆ ಏಕಾಏಕಿ ಟ್ರ್ಯಾಕ್ಟರ್ ಇಂಜಿನ್ ಮೇಲೆ ಎದ್ದು ಸಿಲುಕಿ ಚಾಲಕ ಸಾವನ್ನಪ್ಪಿದ್ದಾರೆ. ಇನ್ನು ಸ್ಥಳಕ್ಕೆ ಗುತ್ತಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಾಗಿದೆ.

Source link

Leave a Reply

Your email address will not be published. Required fields are marked *