ಬಿ. ಉತ್ತರಾಕುಮಾರಿ ,ತನುಜಾ ನಾಯಕ್,ಡಾ. ಭುವನೇಶ್ವರಿ ಕಾಂಬಳೆ
ಬೆಂಗಳೂರು, (ಜೂನ್ 26): ಕರ್ನಾಟಕ ಪತ್ರಕರ್ತೆಯರ ಸಂಘದ (Karnataka women journalists association) 2025-2026ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ (annual awards) ಮೂವರನ್ನು ಆಯ್ಕೆ ಮಾಡಲಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಇಬ್ಬರು ಪತ್ರಕರ್ತೆಯರು ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಒಬ್ಬರು ಸೇರಿದಂತೆ ಮೂವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಬಿ. ಉತ್ತರಾಕುಮಾರಿ, ತನುಜಾ ನಾಯಕ್ ಹಾಗೂ ಡಾ. ಭುವನೇಶ್ವರಿ ಕಾಂಬಳೆ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹಿರಿಯ ಪತ್ರಕರ್ತೆ, ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಟೈಮ್ಸ್ ಆಫ್ ಇಂಡಿಯಾ ನಿವೃತ್ತ ಸುದ್ದಿ ಸಂಪಾದಕಿ ಬಿ. ಉತ್ತರಾಕುಮಾರಿ ಹಾಗೂ ಸಂಯಕ್ತ ಕರ್ನಾಟಕ, ಹುಬ್ಬಳ್ಳಿ ಬ್ಯುರೋದಲ್ಲಿ ಹಿರಿಯ ಉಪಸಂಪಾದಕಿ ಆಗಿರುವ ತನುಜಾ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಎಂದು ಕರ್ನಾಟಕ ಪತ್ರಕರ್ತೆಯರ ಸಂಘವು ಪ್ರಕಟಣೆ ಮೂಲಕ ತಿಳಿಸಿದೆ.
ಪತ್ರಿಕೋದ್ಯಮ ಕ್ಷೇತ್ರದ ಹೊರತಾಗಿ ವಿಶಿಷ್ಟ ಸಾಧಕಿಯರಿಗೆ ನೀಡುವ ಪ್ರಶಸ್ತಿಗಾಗಿ ಮಹಿಳಾ ವಲಸೆ ಕಾರ್ಮಿಕರ ಹಕ್ಕು ಮತ್ತು ಸಂಘಟನೆಗಾಗಿ ದುಡಿಯುತ್ತಿರುವ ಇಂಡಿ ಮೂಲದ ಡಾ. ಭುವನೇಶ್ವರಿ ಕಾಂಬಳೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. ಇನ್ನು ಜುಲೈ ಎರಡನೇ ವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷೆ ಆರ್. ಪೂರ್ಣಿಮಾ ಅವರು ತಿಳಿಸಿದ್ದಾರೆ.