2nd PUC District Wise Result 2026: ಯಾವ ಜಿಲ್ಲೆ ಫಸ್ಟ್, ಯಾವುದು ಲಾಸ್ಟ್? ಇಲ್ಲಿದೆ ಜಿಲ್ಲಾವಾರು ಲಿಸ್ಟ್

2nd PUC District Wise Result 2026: ಯಾವ ಜಿಲ್ಲೆ ಫಸ್ಟ್, ಯಾವುದು ಲಾಸ್ಟ್? ಇಲ್ಲಿದೆ ಜಿಲ್ಲಾವಾರು ಲಿಸ್ಟ್

ಬೆಂಗಳೂರು, (ಏಪ್ರಿಲ್ 09): ಪ್ರಸಕ್ತ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ- 1 ರ ಫಲಿತಾಂಶ (Karnataka 2nd PUC Results 2026) ಏಪ್ರಿಲ್‌ 9ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಆನ್​​ಲೈನ್​​ನಲ್ಲಿ ಪ್ರಕಟಗೊಂಡಿದ್ದು, ಬಳಿಕ ಇದೀಗ ಶಿಕ್ಷಣ ಸಚಿವ ಮಧುಬಂಗಾರಪ್ಪ (Madhu Bangarappa) ಅವರು ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಿದ್ದು, ಈ ಬಾರಿ ದಾಖಲೆಯ ರಿಸಲ್ಟ್​ ಬಂದಿದೆ. ಹೌದು…2025-26ನೇ ಸಾಲಿನ ಸೆಕೆಂಡ್ ಪಿಯುಸಿ ಪರೀಕ್ಷೆಯಲ್ಲಿ ಶೇ.86.48ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ. ಅಂದರೆ 7,10,363 ವಿದ್ಯಾರ್ಥಿಗಳ ಪೈಕಿ 6.10 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ.73.45ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಇದರೊಂದಿಗೆ ಈ ಬಾರಿ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಇನ್ನು ಈ ಬಾರಿಯ ಫಲಿತಾಂಶದಲ್ಲಿ ಉಡುಪಿ ಪ್ರಥಮ ಸ್ಥಾನದಲ್ಲಿದ್ದರೆ, ಯಾದಗಿರಿಗೆ ಮತ್ತೆ ಕೊನೆ ಸ್ಥಾನ.

ದ್ವಿತೀಯ ಪಿಯು  ಫಲಿತಾಂಶದ ವಿವರ

ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮತ್ತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ.88.07ರಷ್ಟು ವಿದ್ಯಾರ್ಥಿನಿಯರು ಪಾಸಾಗಿದ್ದರೆ, ಶೇಕಡಾ 83.65 ವಿದ್ಯಾರ್ಥಿಗಳು ಪಾಸಾಗಿದ್ದಾರೆ.ಇನ್ನು ಕಲಾ ವಿಭಾಗದಲ್ಲಿ ಶೇಕಡಾ 72.86ರಷ್ಟು ಫಲಿತಾಂಶ ಬಂದಿದ್ದರೆ, ವಾಣಿಜ್ಯ ವಿಭಾಗದಲ್ಲಿ ಶೇಕಡಾ 88.04ರಷ್ಟು ಫಲಿತಾಂಶ ಹಾಗೂ ವಿಜ್ಞಾನ ವಿಭಾಗದಲ್ಲಿ ಶೇಕಡಾ 91.69ರಷ್ಟು ಫಲಿತಾಂಶ ಬಂದಿದೆ ಎಂದು ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದರು.

ಯಾವ ಜಿಲ್ಲೆ ಎಷ್ಟನೇ ಸ್ಥಾನ?

ಕಳೆದ ಬಾರಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಯಾದಗಿರಿ ಕೊನೆ ಸ್ಥಾನದಲ್ಲಿತ್ತು. ಈ ಬಾರಿಯೂ ಸಹ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಪ್ರಥಮ, ಯಾದಗಿರಿ ಕೊನೇ ಸ್ಥಾನದಲ್ಲಿದೆ. ಶೇಕಡಾ  9639 ಫಲಿತಾಂಶ ಪಡೆದು ಉಡುಪಿ ಜಿಲ್ಲೆ ರಾಜ್ಯಕ್ಕೆ ಮತ್ತೆ ಪ್ರಥಮ ಸ್ಥಾನ ಪಡೆದುಕೊಂಡರೆ, ಉತ್ತರ ಕನ್ನಡ ಜಿಲ್ಲೆ ಶೇಕಡಾ 96.35 ಫಲಿತಾಂಶದ ಮೂಲಕ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿದೆ. ಇನ್ನು ಹಾಸನ  ಯಾದಗಿರಿ ಜಿಲ್ಲೆ ಶೇಕಡಾ 71.21 ಫಲಿತಾಂಶದ ಮೂಲಕ ರಾಜ್ಯಕ್ಕೆ ಕೊನೆಯ ಸ್ಥಾನದಲ್ಲಿದೆ.

ಇದನ್ನೂ ನೋಡಿ: ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರು ವಿದ್ಯಾರ್ಥಿನಿ ರಾಜ್ಯಕ್ಕೆ ಟಾಪ್

ಜಿಲ್ಲಾವಾರು ಫಲಿತಾಂಶ ಹೀಗಿದೆ

  1. ಉಡುಪಿ – ಶೇಕಡ 96.39
  2. ದಕ್ಷಿಣ ಕನ್ನಡ – ಶೇಕಡ 96.35
  3. ಬೆಂಗಳೂರು ದಕ್ಷಿಣ – ಶೇಕಡ 90.55
  4. ಕೊಡಗು – ಶೇಕಡ 92.34
  5. ಬೆಂಗಳೂರು ಉತ್ತರ – ಶೇಕಡ 90.05
  6. ಉತ್ತರ ಕನ್ನಡ – ಶೇಕಡ 91.78
  7. ಶಿವಮೊಗ್ಗ – ಶೇಕಡ 87.62
  8. ಬೆಂಗಳೂರು ಗ್ರಾಮಾಂತರ – ಶೇಕಡ 91.00
  9. ಚಿಕ್ಕಮಗಳೂರು – ಶೇಕಡ 90.80
  10. ಹಾಸನ – ಶೇಕಡ 89.71
  11. ಚಿಕ್ಕಬಳ್ಳಾಪುರ – ಶೇಕಡ 90.24
  12. ಮೈಸೂರು – ಶೇಕಡ 84.80
  13. ಚಾಮರಾಜನಗರ – ಶೇಕಡ 84.68
  14. ಮಂಡ್ಯ – ಶೇಕಡ 88.85
  15. ಬಾಗಲಕೋಟೆ – ಶೇಕಡ 84.12
  16. ಕೋಲಾರ – ಶೇಕಡ 87.38
  17. ಧಾರವಾಡ – ಶೇಕಡ 83.31
  18. ತುಮಕೂರು – ಶೇಕಡ 86.89
  19. ರಾಮನಗರ – ಶೇಕಡ 87.90
  20. ದಾವಣಗೆರೆ – ಶೇಕಡ 81.99
  21. ಹಾವೇರಿ – ಶೇಕಡ 84.11
  22. ಬೀದರ್ – ಶೇಕಡ 84.61
  23. ಕೊಪ್ಪಳ – ಶೇಕಡ 88.80
  24. ಚಿಕ್ಕೋಡಿ – ಶೇಕಡ 83.10
  25. ಗದಗ – ಶೇಕಡ 76.65 .
  26. ಬೆಳಗಾವಿ – ಶೇಕಡ 80.32
  27. ಬಳ್ಳಾರಿ – ಶೇಕಡ 78.69
  28. ಚಿತ್ರದುರ್ಗ – ಶೇಕಡ 79.12
  29. ವಿಜಯಪುರ – ಶೇಕಡ 92.00
  30. ರಾಯಚೂರು – ಶೇಕಡ 74.09
  31. ಕಲಬುರಗಿ – ಶೇಕಡ 76.97
  32. ಯಾದಗಿರಿ – ಶೇಕಡ 71.21

Source link

Leave a Reply

Your email address will not be published. Required fields are marked *