ಕ್ರಿಕೆಟ್ ಎಂಬುದು ಅನಿಶ್ಚಿತತೆಗಳ ಆಟ ಎಂಬುದಕ್ಕೆ ನ್ಯೂಝಿಲೆಂಡ್ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ತಾಜಾ ಉದಾಹರಣೆ. ಏಕೆಂದರೆ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡಕ್ಕೆ ಟಾಮ್ ಲ್ಯಾಥಮ್ ಹಾಗೂ ಡೆವೊನ್ ಕಾನ್ವೆ ಅದ್ಭುತ ಆರಂಭ ಒದಗಿಸಿದ್ದರು. ಈ ಆರಂಭದೊಂದಿಗೆ ಈ ಜೋಡಿಯು ಮೊದಲ ವಿಕೆಟ್‌ಗೆ ಕಲೆಹಾಕಿದ್ದು ಬರೋಬ್ಬರಿ 317 ರನ್ಗಳು.
- ಡೆವೊನ್ ಕಾನ್ವೆ 224 ಎಸೆತಗಳಲ್ಲಿ 22 ಫೋರ್ ಹಾಗೂ 3 ಸಿಕ್ಸರ್ಗಳೊಂದಿಗೆ 157 ರನ್ ಬಾರಿಸಿದ್ದರು
- ಟಾಮ್ ಲ್ಯಾಥಮ್ 214 ಎಸೆತಗಳಲ್ಲಿ 15 ಫೋರ್ ನೆರವಿನೊಂದಿಗೆ 151 ರನ್ ಗಳಿಸಿದ್ದರು.
ಮೊದಲ ವಿಕೆಟ್‌ಗೆ 317 ರನ್‌ಗಳ ಜೊತೆಯಾಟವಾಡಿದ ಕಿವೀಸ್ ಪಡೆ, ಆನಂತರ ಕೇವಲ 121 ರನ್‌ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ. ಈ ಮೂಲಕ 438 ರನ್‌ಗಳಿಗೆ ಆಲೌಟ್ ಆಗಿ ಮೊದಲ ಇನಿಂಗ್ಸ್ ಅಂತ್ಯಗೊಳಿಸಿದೆ. ಈ ದಿಢೀರ್ ಕುಸಿತದೊಂದಿಗೆ ನ್ಯೂಝಿಲೆಂಡ್ ತಂಡವು ಟೆಸ್ಟ್ ಕ್ರಿಕೆಟ್ನಲ್ಲಿ ಅನಪೇಕ್ಷಿತ ದಾಖಲೆಯೊಂದನ್ನು ನಿರ್ಮಿಸಿದೆ.
ಕಿವೀಸ್ ಪಡೆಯ ಅನಪೇಕ್ಷಿತ ದಾಖಲೆ:
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 300 ಕ್ಕೂ ಹೆಚ್ಚು ರನ್‌ಗಳ ಆರಂಭಿಕ ಜೊತೆಯಾಟದ ಬಳಿಕ ತಂಡವೊಂದು ಇಷ್ಟು ಕಡಿಮೆ ಮೊತ್ತಕ್ಕೆ ಆಲ್-ಔಟ್ ಆಗಿರುವುದು ಇದೇ ಮೊದಲು. ಇದಕ್ಕೂ ಮುನ್ನ 1912 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತಂಡ 323 ರನ್‌ಗಳ ಓಪನಿಂಗ್ ಪಾರ್ಟ್‌ನರ್‌ಶಿಪ್ ಬಳಿಕ 589 ರನ್‌ಗಳಿಗೆ ಆಲ್-ಔಟ್ ಆಗಿದ್ದು ಇದುವರೆಗಿನ ಕನಿಷ್ಠ ಮೊತ್ತವಾಗಿತ್ತು.
ಆದರೆ ಈ ಬಾರಿ ನ್ಯೂಝಿಲೆಂಡ್ ಮೊದಲ ವಿಕೆಟ್‌ಗೆ ತ್ರಿಶತಕದ ಜೊತೆಯಾಟವಾಡಿ ಐನೂರು ರನ್ಗಳಿಸಲು ವಿಫಲವಾಗಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ವಿಕೆಟ್‌ಗೆ 300 ಕ್ಕೂ ಹೆಚ್ಚು ರನ್ಗಳಿಸಿ 500 ರನ್ಗಳಿಸಲಾಗದೇ ಆಲೌಟ್ ಆದ ತಂಡವೆಂಬ ಅಪಕೀರ್ತಿಯೊಂದು ಕಿವೀಸ್ ಪಾಲಾಗಿದೆ.
ಹಾಗೆಯೇ ಟೆಸ್ಟ್ ಇತಿಹಾಸದಲ್ಲೇ ಆರಂಭಿಕ ದಾಂಡಿಗರು 300+ ರನ್ ಗಳಿಸಿದ ಬಳಿಕ ತಂಡವೊಂದು ಕನಿಷ್ಠ ಮೊತ್ತಕ್ಕೆ ಆಲೌಟ್ ಆದ ಅನಪೇಕ್ಷಿತ ದಾಖಲೆಗೂ ನ್ಯೂಝಿಲೆಂಡ್ ತಂಡ ಕೊರೊಳೊಡ್ಡಿದೆ.
- ನ್ಯೂಝಿಲೆಂಡ್ – 438/10 (vs ಇಂಗ್ಲೆಂಡ್, 2026)
- ಇಂಗ್ಲೆಂಡ್ – 589/10 (vs ಆಸ್ಟ್ರೇಲಿಯಾ, 1912)
- ಇಂಗ್ಲೆಂಡ್ – 608/10 (vs ದಕ್ಷಿಣ ಆಫ್ರಿಕಾ, 1948)
## 📊 114 ವರ್ಷಗಳ ಕ್ರಿಕೆಟ್ ಇತಿಹಾಸ ಬ್ರೇಕ್!
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 300 ಕ್ಕೂ ಹೆಚ್ಚು ರನ್‌ಗಳ ಆರಂಭಿಕ ಜೊತೆಯಾಟ ಸಿಕ್ಕ ನಂತರ ತಂಡವೊಂದು ಇಷ್ಟು ಕಡಿಮೆ ಮೊತ್ತಕ್ಕೆ ಆಲ್-ಔಟ್ ಆಗಿರುವುದು ಇದೇ ಮೊದಲು. ಈ ಮುಂಚೆ 1912 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತಂಡ 323 ರನ್‌ಗಳ ಓಪನಿಂಗ್ ಪಾರ್ಟ್‌ನರ್‌ಶಿಪ್ ಬಳಿಕ 589 ರನ್‌ಗಳಿಗೆ ಆಲ್-ಔಟ್ ಆಗಿದ್ದು ಇದುವರೆಗಿನ ಕನಿಷ್ಠ ಮೊತ್ತವಾಗಿತ್ತು.
* ನ್ಯೂಝಿಲೆಂಡ್ 🇳🇿 — 438/10 (vs ಇಂಗ್ಲೆಂಡ್, 2026)
* ಇಂಗ್ಲೆಂಡ್ 🏴 — 589/10 (vs ಆಸ್ಟ್ರೇಲಿಯಾ, 1912)
* ಇಂಗ್ಲೆಂಡ್ 🏴 — 608/10 (vs ದಕ್ಷಿಣ ಆಫ್ರಿಕಾ, 1948)
ಇದನ್ನೂ ಓದಿ: ಒಂದೇ ಪಂದ್ಯ, ಮೂರು ತಂಡಗಳ ಸೆಮಿಫೈನಲ್ ಭವಿಷ್ಯ ನಿರ್ಧಾರ!
ಒಟ್ಟಾರೆಯಾಗಿ, ಒಂದೇ ದಿನದಲ್ಲಿ ದಾಖಲೆಯ ಶಿಖರವೇರಿ, ಅಷ್ಟೇ ವೇಗವಾಗಿ ಪ್ರಪಾತಕ್ಕೆ ಕುಸಿದ ನ್ಯೂಝಿಲೆಂಡ್ ತಂಡದ ಪಾಲಿಗೆ ಟ್ರೆಂಟ್ ಬ್ರಿಡ್ಜ್ ಟೆಸ್ಟ್ ಮರೆಯಲಾಗದ ಕಹಿ ನೆನಪಾಗಿ ಉಳಿಯಲಿದೆಯಾ? ಅಥವಾ ಈ ಕುಸಿತದ ಹೊರತಾಗಿಯೂ ದ್ವಿತೀಯ ಇನಿಂಗ್ಸ್ ಮೂಲಕ ಇಂಗ್ಲೆಂಡ್ ವಿರುದ್ಧ ಪಾರುಪತ್ಯ ಮೆರೆದು ಗೆದ್ದು ಬೀಗಲಿದೆಯಾ ಕಾದು ನೋಡಬೇಕಿದೆ.