Headlines

52 ಲಕ್ಷಕ್ಕೆ ಆಫೀಸ್​ ಖರೀದಿಸಿ 5 ಕೋಟಿ ರೂಪಾಯಿಗೆ ಮಾರಿದ ಮಾಧುರಿ ದೀಕ್ಷಿತ್ – Kannada News | Madhuri Dixit Sells Mumbai Office for Rs 4 Crore 85 lakh, Gains 824 Percent Profit

ಬಾಲಿವುಡ್‌ನ ಧಕ್ ಧಕ್ ಗರ್ಲ್ ಮಾಧುರಿ ದೀಕ್ಷಿತ್ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಭಾರಿ ಲಾಭ ಗಳಿಸಿದ್ದಾರೆ. ಮುಂಬೈನ ಅಂಧೇರಿಯಲ್ಲಿರುವ ತಮ್ಮ ಕಮರ್ಷಿಯಲ್ ಆಫೀಸ್ ಒಂದನ್ನು ಅವರು ಬರೋಬ್ಬರಿ 4.85 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಸುಮಾರು 18 ವರ್ಷಗಳ ಹಿಂದೆ ಕಡಿಮೆ ಬೆಲೆಗೆ ಖರೀದಿಸಿದ್ದ ಆಸ್ತಿ ಇದೀಗ ಶೇಕಡಾ 824 ರಷ್ಟು ಭಾರಿ ಪ್ರಮಾಣದ ರಿಟರ್ನ್ಸ್ ತಂದುಕೊಟ್ಟಿದೆ.

18 ವರ್ಷಗಳ ಹಿಂದೆ ಮಾಡಿದ್ದ ಹೂಡಿಕೆ

ಮಾಧುರಿ ದೀಕ್ಷಿತ್ ಅವರು ಈ ಆಫೀಸ್ ಅನ್ನು ಮೇ 2008 ರಲ್ಲಿ ಖರೀದಿಸಿದ್ದರು. ಆಗ ಇದರ ಬೆಲೆ ಕೇವಲ 52.5 ಲಕ್ಷ ರೂಪಾಯಿ ಆಗಿತ್ತು. ಓಶಿವಾರಾದ ಮೊರ್ಯಾ ಲ್ಯಾಂಡ್‌ಮಾರ್ಕ್-II ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಈ ಆಫೀಸ್ ಇದೆ. ಇದು 1,594 ಚದರ ಅಡಿ ವಿಸ್ತೀರ್ಣ ಹೊಂದಿದ್ದು ಮೂರು ಕಾರ್ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ.

ಆಫೀಸ್ ಖರೀದಿಸಿದ ಫ್ರೇಮ್ಸ್ ಪ್ರೊಡಕ್ಷನ್

ಈ ಪ್ರಾಪರ್ಟಿಯನ್ನು ‘ಫ್ರೇಮ್ಸ್ ಪ್ರೊಡಕ್ಷನ್ ಕಂಪನಿ ಪ್ರೈವೇಟ್ ಲಿಮಿಟೆಡ್’ ಖರೀದಿಸಿದೆ. ಈ ವ್ಯವಹಾರಕ್ಕಾಗಿ 29.10 ಲಕ್ಷ ರೂಪಾಯಿ ಸ್ಟಾಂಪ್ ಡ್ಯೂಟಿ ಪಾವತಿಸಲಾಗಿದೆ. ಮುಂಬೈನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ವಾಣಿಜ್ಯ ಆಸ್ತಿಗಳ ಮೌಲ್ಯ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂಬುದಕ್ಕೆ ಈ ವ್ಯವಹಾರ ಸಾಕ್ಷಿಯಾಗಿದೆ.

ಇದನ್ನೂ ಓದಿ: ಸೀರಿಯಲ್ ಕಿಲ್ಲರ್ ಆದ ಮಾಧುರಿ ದೀಕ್ಷಿತ್; ಹೊಸ ಅವತಾರದಲ್ಲಿ ಧಕ್ ಧಕ್ ಗರ್ಲ್ 

ಮಾಸಿಕ ಲಕ್ಷ ಲಕ್ಷ ಬಾಡಿಗೆ ಗಳಿಕೆ

ಕೆಲವು ತಿಂಗಳುಗಳ ಹಿಂದಷ್ಟೇ ಮಾಧುರಿ ಮತ್ತೊಂದು ಆಸ್ತಿಯನ್ನು ಬಾಡಿಗೆಗೆ ನೀಡಿದ್ದರು. ಮಾರ್ಚ್ 2026 ರಲ್ಲಿ ಮುಂಬೈನ ಲೋವರ್ ಪರೇಲ್‌ನಲ್ಲಿರುವ ಆಫೀಸ್ ಅನ್ನು ಐದು ವರ್ಷಗಳ ಅವಧಿಗೆ ಲೀಸ್‌ಗೆ ಕೊಟ್ಟಿದ್ದಾರೆ. ಇದರಿಂದ ಅವರಿಗೆ ಪ್ರತಿ ತಿಂಗಳು 4.25 ಲಕ್ಷ ರೂಪಾಯಿ ಬಾಡಿಗೆ ಸಿಗಲಿದ್ದು, ಐದು ವರ್ಷಗಳಲ್ಲಿ ಒಟ್ಟು 2.81 ಕೋಟಿ ರೂಪಾಯಿ ಆದಾಯ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *