63,00,00,00,000 ರೂ.: ಅಬ್ಬಾಬ್ಬ ಸುಂದರ್ ಪಿಚೈ ವೇತನದಲ್ಲಿ ಮತ್ತೆ ಏರಿಕೆ

63,00,00,00,000 ರೂ.: ಅಬ್ಬಾಬ್ಬ ಸುಂದರ್ ಪಿಚೈ ವೇತನದಲ್ಲಿ ಮತ್ತೆ ಏರಿಕೆ

ಫೈನಾನ್ಷಿಯಲ್ ಟೈಮ್ಸ್ ವರದಿಯ ಪ್ರಕಾರ, ಗೂಗಲ್‌ನ ಮಾತೃಸಂಸ್ಥೆಯಾದ ಆಲ್ಫಾಬೆಟ್ ತನ್ನ ಸಿಇಒ ಸುಂದರ್ ಪಿಚೈ ಅವರಿಗೆ ಮುಂದಿನ ಮೂರು ವರ್ಷಗಳ ಕಾಲ ಒಟ್ಟು $692 ಮಿಲಿಯನ್ (ಸುಮಾರು 63,617 ಕೋಟಿ ರೂ) ಸಂಭಾವನೆಯನ್ನು ಘೋಷಿಸಿದೆ. ಕಂಪನಿಯ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಿದ ಮತ್ತು ಸ್ವಾಯತ್ತ ತಂತ್ರಜ್ಞಾನದಲ್ಲಿ (Autonomous Ventures) ಸಾಧಿಸಿದ ಪ್ರಗತಿಯನ್ನು ಪರಿಗಣಿಸಿ ಈ ಭಾರಿ ಮೊತ್ತವನ್ನು ನೀಡಲಾಗುತ್ತಿದೆ.

$126 ಮಿಲಿಯನ್ ಮೌಲ್ಯದ ಪರ್ಫಾರ್ಮೆನ್ಸ್ ಸ್ಟಾಕ್ ಯೂನಿಟ್‌ಗಳನ್ನು ನೀಡಲಾಗಿದ್ದು, ಗುರಿ ಮೀರಿದರೆ ಇದು $252 ಮಿಲಿಯನ್ ವರೆಗೆ ಏರಿಕೆಯಾಗಬಹುದು.ಪಿಚೈ ಅವರ ನೇತೃತ್ವದ ವೇಮೋ (Waymo) ಸ್ಟಾಕ್‌ನಲ್ಲಿ $130 ಮಿಲಿಯನ್ (11,951,628,000) ಮತ್ತು ವಿಂಗ್ ಏವಿಯೇಷನ್ (Wing) ಶೇರುಗಳಲ್ಲಿ $45 ಮಿಲಿಯನ್ (4,13,71,02,000.00) ಬೋನಸ್ ಸೇರಿದೆ. ಇವುಗಳ ಮೌಲ್ಯವೂ 200% ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ವಾರ್ಷಿಕ $2 ಮಿಲಿಯನ್ (18,38,71,200) ವೇತನದ ಜೊತೆಗೆ, ಪ್ರತಿ ತಿಂಗಳು ವೆಸ್ಟ್ ಆಗುವ $84 ಮಿಲಿಯನ್ (91,935.60) ಮೌಲ್ಯದ ರೆಸ್ಟ್ರಿಕ್ಟೆಡ್ ಸ್ಟಾಕ್ ಕೂಡ ಪ್ಯಾಕೇಜ್‌ನ ಭಾಗವಾಗಿದೆ. 2015ರಲ್ಲಿ ಪಿಚೈ ಸಿಇಒ ಆದಾಗ ಗೂಗಲ್ ಮೌಲ್ಯ $535 ಬಿಲಿಯನ್ ಇತ್ತು. ಇಂದು ಅದು ಸುಮಾರು $3.6 ಟ್ರಿಲಿಯನ್ (₹300 ಲಕ್ಷ ಕೋಟಿಗೂ ಅಧಿಕ) ತಲುಪಿದೆ.

ಇದನ್ನೂ ಓದಿ: ನಮ್ಮನ್ನು ಕ್ಷಮಿಸಿ: ಮುಂದೆ ಈ ತಪ್ಪು ನಡೆಯುವುದಿಲ್ಲ, ಆದರೆ ಈ ದೇಶಗಳನ್ನು ಬಿಡುವುದಿಲ್ಲ ಎಂದ ಇರಾನ್

ಸುಂದರ್ ಪಿಚೈ ಮತ್ತು ಅವರ ಪತ್ನಿ ಒಟ್ಟು 1.67 ಮಿಲಿಯನ್ ಗೂಗಲ್ ಶೇರುಗಳನ್ನು ಹೊಂದಿದ್ದು, ಅದರ ಮೌಲ್ಯ ಸರಿಸುಮಾರು $498 ಮಿಲಿಯನ್ (₹4,500 ಕೋಟಿಗೂ ಅಧಿಕ) ಆಗಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *