ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರು ‘ಪ್ರೈಮ್ ವೀಡಿಯೋ’ ಒಟಿಟಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಅಲೈಯನ್ಸ್’ (Alliance) ಸಂಚಿಕೆಯಲ್ಲಿ ಅತಿಥಿಯಾಗಿ ಆಗಮಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ತಮ್ಮ ಸಹೋದರ ಸೊಹೈಲ್ ಖಾನ್ ಅವರನ್ನು ಬೆಂಬಲಿಸಲು ವೇದಿಕೆಗೆ ಬಂದ ಸಲ್ಲು, ತಾವೇ ಖುದ್ದಾಗಿ ಜೈಲಿನಲ್ಲಿ ಅನುಭವಿಸಿದ ಕಠಿಣ ದಿನಗಳ ಬಗ್ಗೆ ತೆರೆದ ಮನಸ್ಸಿನಿಂದ ಮಾತನಾಡಿದ್ದಾರೆ. ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಅವರು ಜೈಲಿಗೆ (Jail) ಹೋಗಿದ್ದರು. ಆ ಕಷ್ಟದ ಸಮಯವನ್ನು ನೆನಪು ಮಾಡಿಕೊಂಡರು.
ಇತ್ತೀಚಿನ ಎಪಿಸೋಡ್ ಕೊನೆಯಲ್ಲಿ ‘ಅಲೈಯನ್ಸ್’ ಹೆಡ್‌ಕ್ವಾರ್ಟರ್ಸ್‌ಗೆ ಎಂಟ್ರಿ ಕೊಟ್ಟ ಸಲ್ಮಾನ್ ಖಾನ್, ‘ಚಿಂತಿಸಬೇಡಿ, ನಾನು ಇಲ್ಲಿ ನಿರೂಪಣೆ ಮಾಡಲು ಬಂದಿಲ್ಲ’ ಎಂದು ತಮಾಷೆ ಮಾಡುತ್ತಾ ಸ್ಪರ್ಧಿಗಳಲ್ಲಿ ನಗು ಮೂಡಿಸಿದರು. ನಂತರ ಹಿರಿಯ ಸ್ಪರ್ಧಿಗಳ ವಯಸ್ಸಿನ ಬಗ್ಗೆ ಕಾಮೆಂಟ್ ಮಾಡಿದ್ದಕ್ಕೆ ಓರ್ವ ಸ್ಪರ್ಧಿಗೆ ಅವರು ಕ್ಲಾಸ್ ತಗೆದುಕೊಂಡರು. ಮಿನಿ ಮಾಥುರ್ ಅವರ ಬಳಿ ‘ಕಬೀರ್ ಖಾನ್ ನಿನ್ನನ್ನು ಕಂಡು ಏಕೆ ಅಷ್ಟೊಂದು ಹೆದರುತ್ತಾರೆ ಎಂಬುದು ನನಗೀಗ ಅರ್ಥವಾಯಿತು’ ಎಂದು ಸಲ್ಮಾನ್ ಹಾಸ್ಯ ಮಾಡಿದರು.
ಜೈಲಿನ ದಿನ ನೆನಪು ಮಾಡಿಕೊಂಡ ಸಲ್ಮಾನ್ ಖಾನ್:
ಶೋನ ಇತ್ತೀಚಿನ ಪ್ರೋಮೋ ಒಂದರಲ್ಲಿ ಸಲ್ಮಾನ್ ಖಾನ್ ಅವರು ತಮ್ಮ ಜೈಲುವಾಸದ ಅನುಭವವನ್ನು ಹಂಚಿಕೊಂಡಿದ್ದಾರೆ. ‘ವರ್ಷಗಳ ಹಿಂದೆ ನಾನು ಜೈಲಿಗೆ ಹೋದಾಗ, ನಮ್ಮ ಮುಂದೆ ಗ್ರಿಲ್ ಕಂಬಿಗಳಿದ್ದವು. ಅದು ತುಂಬಾ ಸಣ್ಣ ಜಾಗವಾಗಿತ್ತು. ಸುಮಾರು 50ರಿಂದ 70 ಜನರು ಒಂದೇ ಶೌಚಾಲಯ ಬಳಸಬೇಕಿತ್ತು. ಅದು ಇಂಡಿಯನ್ ಶೈಲಿಯ ಶೌಚಾಲಯವಾಗಿದ್ದು, ಕೆಲವೊಮ್ಮೆ ಅಲ್ಲಿ ಪಲ್ಲಿಗಳಿರುತ್ತಿದ್ದವು. ಯಾವಾಗಲೂ ಗಲೀಜು ತುಂಬಿರುತ್ತಿತ್ತು’ ಎಂದು ಜೈಲಿನ ಪರಿಸ್ಥಿತಿಯನ್ನು ಸಲ್ಮಾನ್ ವಿವರಿಸಿದ್ದಾರೆ.
ಸಲ್ಮಾನ್ ಖಾನ್ ಜೈಲುವಾಸದ ವರ್ಷ:
1998ರ ಕೃಷ್ಣಮೃಗ ಮತ್ತು ಚಿಂಕಾರ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ವಿವಿಧ ಹಂತಗಳಲ್ಲಿ ಬಂಧನಕ್ಕೊಳಗಾಗಿದ್ದರು. ಅವರು 1998ರಲ್ಲಿ 3 ದಿನ, 2006ರಲ್ಲಿ 6 ದಿನ, 2007ರಲ್ಲಿ 6 ದಿನ ಹಾಗೂ 2018ರಲ್ಲಿ 2 ದಿನಗಳ ಕಾಲ ಕಸ್ಟಡಿಯಲ್ಲಿದ್ದರು. ಸದ್ಯಕ್ಕೆ ಪ್ರೋಮೋದಲ್ಲಿ ಅವರು ಮಾತನಾಡಿರುವುದು ಸ್ವಲ್ಪ ಮಾತ್ರ ಇದೆ. ಪೂರ್ತಿ ಸಂಚಿಕೆಯಲ್ಲಿ ಹೆಚ್ಚಿನ ವಿವರ ಇರಲಿದೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಸಂಭಾವನೆಯಲ್ಲಿ ಭಾರಿ ಇಳಿಕೆ; 120 ಕೋಟಿ ರೂಪಾಯಿ ಬದಲು 70 ಕೋಟಿ ರೂ.?
ಅಲೈಯನ್ಸ್ ರಿಯಾಲಿಟಿ ಶೋ ಫಿನಾಲೆ:
ಮುಂದಿನ ಸಂಚಿಕೆಯಲ್ಲಿ ಸಲ್ಮಾನ್ ಖಾನ್, ಸೊಹೈಲ್ ಖಾನ್ ಹಾಗೂ ಅವರ ಮಾಜಿ ಪತ್ನಿ ಸೀಮಾ ಸಜ್ದೇ ಅವರ ಸಂಬಂಧದ ಕುರಿತಾಗಿಯೂ ಮಾತನಾಡಲಿದ್ದಾರೆ ಎನ್ನಲಾಗಿದೆ. ಕುನಾಲ್ ಖೇಮು ನಿರೂಪಣೆ ಮಾಡುತ್ತಿರುವ ‘ಅಲೈಯನ್ಸ್’ ರಿಯಾಲಿಟಿ ಶೋನ ಗ್ರಾಂಡ್ ಫಿನಾಲೆ ಆಗಸ್ಟ್ 7ರಂದು ನಡೆಯಲಿದೆ. ಈಗಾಗಲೇ ಆಲಿ ಗೋನಿ ಮೊದಲ ಫೈನಲಿಸ್ಟ್ ಆಗಿ ಹೊರಹೊಮ್ಮಿದ್ದಾರೆ. ಮಿನಿ ಮಾಥುರ್ ಮತ್ತು ನೀತಿ ಅವರು ಫಿನಾಲೆ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.