Headlines

ಚಾಮರಾಜನಗರ: ಕಹಿ ಬೇವಿನ ಮರದಲ್ಲಿ ಬರುತ್ತಿದೆ ಸಿಹಿಯಾದ ನೀರು! ಏನಿದು ವಿಸ್ಮಯ? – Kannada News | Neem Tree in Chamarajanagar Oozes Sugary White Liquid

ಚಾಮರಾಜನಗರ, ಫೆಬ್ರುವರಿ 03: ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಒಂದು ಬೇವಿನ ಮರದಿಂದ ಬಿಳಿ ಬಣ್ಣದ ಸಿಹಿ ದ್ರವ ಸ್ರವಿಸುತ್ತಿದ್ದು, ಇದು ಸ್ಥಳೀಯರಲ್ಲಿ ಆಶ್ಚರ್ಯ ಮತ್ತು ಕುತೂಹಲವನ್ನು ಮೂಡಿಸಿದೆ. ಕಹಿ ಗುಣದ ಬೇವಿನ ಮರದಿಂದ ಜೇನುತುಪ್ಪದಂತಹ ಸಿಹಿ ದ್ರವ ಬರುತ್ತಿರುವುದು ವಿಸ್ಮಯಕ್ಕೆ ಕಾರಣವಾಗಿದೆ. ಇದನ್ನು ಗಮನಿಸಿದ ಸ್ಥಳೀಯ ನಿವಾಸಿ ಮುನಿಸಿದ್ದ, ಮರದಿಂದ ಹೊರಬಂದ ಈ ದ್ರವ ಹಾಲಿನಂತೆ ಕಾಣುತ್ತದೆ ಮತ್ತು ರುಚಿಯಲ್ಲಿ ಸಕ್ಕರೆಯಂತೆ ಸಿಹಿಯಾಗಿರುತ್ತದೆ ಎಂದು ತಿಳಿಸಿದ್ದಾರೆ. ಗ್ರಾಮಸ್ಥರು ಈ ಅಸಾಮಾನ್ಯ ವಿದ್ಯಮಾನವನ್ನು ದೈವಿಕ ಸೂಚನೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಈ ಬೇವಿನ ಮರದಿಂದ ಸಿಹಿ ದ್ರವ ಯಾಕೆ ಬರುತ್ತಿದೆ ಎಂಬುದರ ಬಗ್ಗೆ ಯಾರಿಗೂ ಸ್ಪಷ್ಟ ಕಾರಣ ತಿಳಿದಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *