ತಾವೇ ಆರಂಭಿಸಿದ ಟ್ರೆಂಡ್ ಬಗ್ಗೆ ರಾಜಮೌಳಿಗೆ ರೇಜಿಗೆ; ದೊಡ್ಡ ನಿರ್ಧಾರಕ್ಕೆ ಬಂದ ನಿರ್ದೇಶಕ – Kannada News | Rajamouli’s Big Call: No Two Part Film for Mahesh Babu’s ‘Varanasi’, Breaks Own Trend

ಒಂದು ಚಿತ್ರವನ್ನು ಎರಡು ಪಾರ್ಟ್​​ನಲ್ಲಿ ತರುವ ಟ್ರೆಂಡ್​​ನ ಭಾರತದಲ್ಲಿ ಹೆಚ್ಚು ಪ್ರಚಲಿತ ಮಾಡಿದ್ದು ನಿರ್ದೇಶಕ ರಾಜಮೌಳಿ (Rajamouli). ‘ಬಾಹುಬಲಿ’ ಬಳಿಕ ‘ಬಾಹುಬಲಿ 2’ ಚಿತ್ರಕ್ಕೆ ಕಾಯುವಂತೆ ಅವರು ಮಾಡಿದರು. ‘ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ’ ಎಂಬ ಪ್ರಶ್ನೆಯೊಂದಿಗೆ ಮೊದಲ ಭಾಗ ಪೂರ್ಣಗೊಳಿಸಿದ್ದರೆ, ಎರಡನೇ ಪಾರ್ಟ್ ಅಲ್ಲಿ ಅದಕ್ಕೆ ಉತ್ತರ ನೀಡಿದರು. ಆ ಬಳಿಕ ಬಂದ ‘ಆರ್​​ಆರ್​​ಆರ್​’ ಚಿತ್ರವನ್ನು ಒಂದೇ ಭಾಗದಲ್ಲಿ ಪೂರ್ಣಗೊಳಿಸಲಾಯಿತು. ಈಗ ‘ವಾರಣಾಸಿ’ ಸಿನಿಮಾನ ಎರಡು ಪಾರ್ಟ್​​​ ಅಲ್ಲಿ ತರಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಅವರ ಕಡೆಯಿಂದ ಉತ್ತರ ಸಿಕ್ಕಿದೆ.

‘ವಾರಣಾಸಿ’ ಸಿನಿಮಾನ ಎರಡು ಪಾರ್ಟ್​ ಅಲ್ಲಿ ಮಾಡಬೇಕು ಎಂಬುದು ತಂಡದ ಆಲೋಚನೆ ಆಗಿತ್ತು. ಆದರೆ, ಈಗ ಎಲ್ಲರೂ ಎರಡು ಪಾರ್ಟ್​ಗಳಲ್ಲಿ ಸಿನಿಮಾ ಮಾಡಿ, ಅದಕ್ಕೆ ಅರ್ಥವೇ ಇಲ್ಲದಂತೆ ಮಾಡಿಯಾಗಿದೆ. ಕೆಲವರು ಮೊದಲ ಪಾರ್ಟ್ ರಿಲೀಸ್ ಮಾಡುತ್ತಾರೆ. ಹಿಟ್ ಆಗಿಲ್ಲ ಎಂದರೆ ಎರಡನೇ ಪಾರ್ಟ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದೇ ಇಲ್ಲ. ಅದನ್ನು ಮಾಡುವ ಗೋಜಿಗೂ ಹೋಗೋದಿಲ್ಲ. ಈ ಎಲ್ಲಾ ಕಾರಣದಿಂದ ಎರಡು ಪಾರ್ಟ್​​​ಗಳಲ್ಲಿ ಸಿನಿಮಾನ ಮಾಡುವ ಬಗ್ಗೆ ಪ್ರೇಕ್ಷಕರಿಗೂ ಅಸಮಾಧಾನ ಇದೆ. ಸದಾ ಪ್ರೇಕ್ಷಕರ ನಾಡಿಮಿಡಿತ ಅರ್ಥಿಸಿಕೊಳ್ಳೋ ರಾಜಮೌಳಿ ಈ ಬಾರಿ ಆ ಸಾಹಸಕ್ಕೆ ಕೈ ಹಾಕುತ್ತಿಲ್ಲ.

‘ವಾರಣಾಸಿ’ ಸಿನಿಮಾನ ಒಂದೇ ಪಾರ್ಟ್​ ಅಲ್ಲಿ ತರುವ ಆಲೋಚನೆ ಅವರಿಗೆ ಇದೆ. ಈ ಸಿನಿಮಾದ ಅವಧಿ ಮೂರು ಗಂಟೆಗೂ ಅಧಿಕವಾಗಿರಲಿದೆಯಂತೆ. ಸಿನಿಮಾದ ಅವಧಿ ಹೆಚ್ಚಿದ್ದರೂ, ಎಲ್ಲವನ್ನೂ ಒಂದೇ ಪಾರ್ಟ್ ಅಲ್ಲಿ ಹೇಳುವ ನಿರ್ಧಾರಕ್ಕೆ ರಾಜಮೌಳಿ ಬಂದಿದ್ದಾರೆ. ಈ ನಿರ್ಧಾರ ಫ್ಯಾನ್ಸ್​​​ಗೆ ಖುಷಿ ಕೊಟ್ಟಿದೆ.

ಇದನ್ನೂ ಓದಿ: ಸಿನಿಮಾ ಪ್ರಚಾರ ಹೀಗೂ ಮಾಡ್ತಾರಾ? ರಾಜಮೌಳಿ ಬುದ್ಧಿವಂತಿಕೆ ಮೆಚ್ಚಲೇಬೇಕು

ಎರಡು ಪಾರ್ಟ್​​ಗಳಲ್ಲಿ ಸಿನಿಮಾ ಮಾಡುವ ಟ್ರೆಂಡ್​​ಗೆ ಈಗ ಅರ್ಥ ಉಳಿದುಕೊಂಡಿಲ್ಲ. ಪ್ರೇಕ್ಷಕರು ಇದನ್ನು ಹೇಟ್ ಮಾಡುತ್ತಿದ್ದಾರೆ. ಹೀಗಾಗಿ ತಾವೇ ಆರಂಭಿಸಿದ ಟ್ರೆಂಡ್​​ನ ರಾಜಮೌಳಿ ಅವರು ಬ್ರೇಕ್ ಮಾಡಿದ್ದಾರೆ. ಅವರಿಗೂ ಈ ಟ್ರೆಂಡ್ ರೇಜಿಗೆ ಮೂಡಿಸಿದೆ ಎನ್ನಲಾಗಿದೆ. ‘ವಾರಣಾಸಿ’ ಸಿನಿಮಾಗೆ ಮಹೇಶ್ ಬಾಬು ಹೀರೋ. ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಮುಂದಿನ ವರ್ಷ ಏಪ್ರಿಲ್ 7ಕ್ಕೆ ಸಿನಿಮಾ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *