ರಿಷಿಕೇಶ, ಡಿಸೆಂಬರ್ 23: ಉತ್ತರಾಖಂಡದ ರಿಷಿಕೇಶದಲ್ಲಿ ವಧು-ವರ ವಿವಾಹವಾಗುತ್ತಿದ್ದರು. ಮದುವೆ ಭರದಿಂದ ಸಾಗುತ್ತಿದ್ದಾಗ, ಇದ್ದಕ್ಕಿದ್ದಂತೆ ಒಂದು ಕೋತಿ ಮದುವೆಯ ಮಂಟಪಕ್ಕೆ ನುಗ್ಗಿ ಕೋಲಾಹಲ ಸೃಷ್ಟಿಸಿತು. ನದಿಯ ದಡದಲ್ಲಿ ನಡೆದ ಮದುವೆಯಲ್ಲಿ ಪುರೋಹಿತರು ವೇದ ಮಂತ್ರಗಳನ್ನು ಪಠಿಸುತ್ತಿದ್ದಾಗ ಕೋತಿಯೊಂದು ಸರ್ಪ್ರೈಸ್ ವಿಸಿಟ್ ನೀಡಿದೆ. ಕನ್ಯಾದಾನದ ವೇಳೆ ಕೋತಿಯೊಂದು ಮದುಮಗಳ ಮೇಲೆ ಹಾರಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ವೈರಲ್ ವಿಡಿಯೋವನ್ನು (Viral Video) ನೋಡಿದ ಜನರು ಇದು ಕೇವಲ ತಮಾಷೆಯಲ್ಲ, ಬದಲಾಗಿ ಹನುಮಂತನ ಆಶೀರ್ವಾದ ಎಂದು ಕಮೆಂಟ್ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ