Headlines

ಸೇನೆಗೆ ಡ್ರೋನ್ ಪೂರೈಸುವ ಸಂಸ್ಥೆಗೆ ಕರ್ನಾಟಕ ಪೊಲೀಸರ ಕಿರುಕುಳ; ಹೈಕೋರ್ಟ್​ ಗರಂ! – Kannada News | Karnataka HC Slams Police for Harassing Bengaluru Drone Firm; Seeks Explanation

ಸೇನೆಗೆ ಡ್ರೋನ್ ಪೂರೈಸುವ ಸಂಸ್ಥೆಗೆ ಕರ್ನಾಟಕ ಪೊಲೀಸರ ಕಿರುಕುಳ

ಬೆಂಗಳೂರು, ಫೆಬ್ರುವರಿ 06: ಸೇನೆಗೆ ಡ್ರೋನ್ ಪೂರೈಸುವ ಬೆಂಗಳೂರಿನ ನ್ಯೂ ಸ್ಪೇಸ್ ರಿಸರ್ಚ್ ಟೆಕ್ ಸಂಸ್ಥೆಗೆ ಪೊಲೀಸರಿಂದ ಕಿರುಕುಳ ನೀಡಲಾಗಿದೆ ಎಂದು ಆರೋಪದ ಸಂಬಂಧ ಪ್ರಕರಣ ಕೋರ್ಟ್​ ಮೆಟ್ಟಿಲೇರಿದ್ದು, ಇದಕ್ಕೆ ಹೈಕೋರ್ಟ್​, ಪೊಲೀಸರಿಂದ ವಿವರಣೆ ಕೇಳಿದೆ. ಡ್ರೋನ್ ಮಾದರಿಯ ಪರೀಕ್ಷಾ ಹಾರಾಟದ ವಿಷಯದಲ್ಲಿ ಸಂಸ್ಥೆಯನ್ನು ಸತಾಯಿಸಿದ್ದ  ಕಾರಣ ಸಂಸ್ಥೆ ಕರ್ನಾಟಕ ಹೈಕೋರ್ಟ್‌ನಲ್ಲಿ (High Court) ರಿಟ್ ಅರ್ಜಿ ಸಲ್ಲಿಸಿತ್ತು. ಈ ವಿಚಾರವಾಗಿ ನ್ಯಾ. ನಾಗಪ್ರಸನ್ನ ಅವರ ಪೀಠ,  ಸರಿಯಾದ ವಿವರಣೆ ನೀಡದೇ ಇದ್ದಲ್ಲಿ ಪೊಲೀಸರ ವಿರುದ್ಧ ಕ್ರಮ  ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದೆ.

ಎಫ್‌ಐಆರ್ ಪ್ರತಿಯನ್ನೂ ಸಂಸ್ಥೆಗೆ ನೀಡಿಲ್ಲ!

ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಡ್ರೋನ್ ಮಾದರಿಯ ಪರೀಕ್ಷಾ ಹಾರಾಟ ನಡೆಸುವ ವೇಳೆ, ಡ್ರೋನ್ ಕಂಪೌಂಡ್ ದಾಟಿ ಬೇರೆ ಸ್ಥಳಕ್ಕೆ ಇಳಿದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದರು. ಆದರೆ ಎಫ್‌ಐಆರ್ ಪ್ರತಿಯನ್ನು ನೀಡದೇ, ಅಕ್ರಮ ಪ್ರವೇಶ ಪ್ರಕರಣ ದಾಖಲಿಸಿ ಸಂಸ್ಥೆಯ ಎಂಡಿಯನ್ನು ಠಾಣೆಗೆ ಕರೆಸಿಕೊಂಡಿದ್ದರು. ಅದಲ್ಲದೆ ಎಂಡಿ ಬಳಿ ಲಾಭ–ನಷ್ಟ ಹಾಗೂ ವ್ಯವಹಾರದ ವಿವರಗಳ ಬಗ್ಗೆ ಪ್ರಶ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

6 ಗಂಟೆಗಳ ಕಾಲ ಸಂಸ್ಥೆಯ ಅಧಿಕಾರಿಗಳನ್ನು ಠಾಣೆಯಲ್ಲಿ ಕೂರಿಸಿದ್ದ ಪೊಲೀಸರು

ಪರೀಕ್ಷಾ ಹಾರಾಟಕ್ಕೆ ಡಿಜಿಸಿಎ ಅನುಮತಿ ತೋರಿಸಿದರೂ ಕಿರುಕುಳ ನೀಡಲಾಗಿದ್ದು, ಸುಮಾರು 6 ಗಂಟೆಗಳ ಕಾಲ ಸಂಸ್ಥೆಯ ಅಧಿಕಾರಿಗಳನ್ನು ಠಾಣೆಯಲ್ಲಿ ಕೂರಿಸಿಕೊಂಡಿದ್ದಾರೆ ಎಂದು ಡ್ರೋನ್ ಕಂಪೆನಿ ಪರ ವಕೀಲ ಅಂಗದ್ ಕಾಮತ್ ವಾದ ಮಂಡಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ, ಇನ್ಸ್‌ಪೆಕ್ಟರ್ ಸಾದಿಕ್ ಪಾಷಾ ಅವರಿಂದ ಪ್ರಮಾಣಪತ್ರದ ಮೂಲಕ ವಿವರಣೆ ನೀಡುವಂತೆ ಸೂಚಿಸಿದೆ. ವಿವರಣೆ ನೀಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *