ಮದುವೆಯ ಕುರಿತಾದ ವದಂತಿಗಳಿಂದ ಮೃಣಾಲ್ ಠಾಕೂರ್ ಸುದ್ದಿಯಲ್ಲಿದ್ದಾರೆ. ಅವರು ಧನುಶ್ ಜೊತೆ ವಿವಾಹ ಆಗುತ್ತಾರೆ ಎಂಬ ವದಂತಿ ಜೋರಾಗಿದೆ. ಇದನ್ನು ಅವರು ಅಲ್ಲಗಳೆಯುತ್ತಲೇ ಬರುತ್ತಿದ್ದಾರೆ. ಇದರ ಮಧ್ಯೆ, ಈ ಸುಳ್ಳು ಸುದ್ದಿಯಿಂದ ತಮಗೆ ಪ್ರಚಾರ ಸಿಕ್ಕಿತು ಎಂದು ಹೇಳಿದ್ದಾರೆ. ಅವರ ಸ್ಟೇಟ್ಮೆಂಟ್ ಗಮನ ಸೆಳೆದಿದೆ.
ಕಾಲಿವುಡ್ ಸ್ಟಾರ್ ಹೀರೋ ಧನುಷ್ ಅವರನ್ನು ಮೃಣಾಲ್ ಪ್ರೀತಿಸುತ್ತಿದ್ದಾರೆ ಮತ್ತು ಫೆಬ್ರವರಿ 14 ರಂದು ಇಬ್ಬರೂ ಮದುವೆಯಾಗಲಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳು ಸುದ್ದಿ ಹಬ್ಬಿಸಿದ್ದವು. ಈ ಸುದ್ದಿಗೆ ಪ್ರತಿಕ್ರಿಯಿಸಿದ ನಟಿ ಪ್ರಚಾರ ಸಿಕ್ಕಿದ್ದಾಗಿ ಖುಷಿಪಟ್ಟಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಪಿಆರ್ ತಂಡಕ್ಕೆ 3 ಕೋಟಿ, 6 ಕೋಟಿ ಅಥವಾ 10 ಕೋಟಿ ಖರ್ಚು ಮಾಡಿದ್ದರೂ ಸಹ, ನನಗೆ ಇಷ್ಟೊಂದು ಪ್ರಚಾರ ಸಿಗುತ್ತಿರಲಿಲ್ಲ. ಯಾರೋ ಉದ್ದೇಶಪೂರ್ವಕವಾಗಿ ನನ್ನ ಮತ್ತು ಧನುಷ್ ಬಗ್ಗೆ ವದಂತಿಗಳನ್ನು ಸೃಷ್ಟಿಸಿದರು. ಆದರೆ ಆ ವದಂತಿಗಳಿಂದಾಗಿ, ಇಡೀ ಭಾರತದಲ್ಲಿ ನನ್ನ ಹೆಸರು ಹರಿದಾಡಿತು. ಆ ವದಂತಿಗಳನ್ನು ಸೃಷ್ಟಿಸಿ, ನನಗೆ ಉಚಿತವಾಗಿ ಪ್ರಚಾರ ನೀಡಿದ್ದಕ್ಕಾಗಿ ನಾನು ಯಾವಾಗಲೂ ಋಣಿಯಾಗಿರುತ್ತೇನೆ’ ಎಂದು ಮೃಣಾಲ್ ಹೇಳಿದರು.
ಮೃಣಾಲ್ ಮತ್ತು ಧನುಷ್ ಅನೇಕ ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡರು. ಇಬ್ಬರೂ ಆಳವಾಗಿ ಪ್ರೀತಿಸುತ್ತಿದ್ದಾರೆ ಮತ್ತು ಪ್ರೇಮಿಗಳ ದಿನದಂದು ಮದುವೆಯಾಗಲಿದ್ದಾರೆ ಎಂಬ ಕಥೆಗಳನ್ನು ಸೃಷ್ಟಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಮೃಣಾಲ್, ‘ಅವರ ಲೆಕ್ಕಾಚಾರದ ಪ್ರಕಾರ, ನಮ್ಮ ಮದುವೆ ಇಷ್ಟೊತ್ತಿಗಾಗಲೇ ಮುಗಿದಿರಬೇಕಿತ್ತು’ ಎಂದಿದ್ದರು.
ಇದನ್ನೂ ಓದಿ: ‘ನನ್ನ ಮದುವೆ ಏಪ್ರಿಲ್ 1ಕ್ಕೆ’; ದಿನಾಂಕ ರಿವೀಲ್ ಮಾಡಿದ ಮೃಣಾಲ್ ಠಾಕೂರ್
ಮೃಣಾಲ್ ಅವರು ಪ್ರಸ್ತುತ ತಮ್ಮದೇ ಆದ ಪಿಆರ್ ತಂಡವನ್ನು ಹೊಂದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಅವರ ಮನೆಯ ವಿಳಾಸವೂ ಈಗ ಸಾರ್ವಜನಿಕವಾಗಿದೆ. ಈ ರೀತಿಯ ಸಮಸ್ಯೆಗಳನ್ನು ಪರಿಹರಿಸಲು ಒಂದು ಪಿಆರ್ ತಂಡವನ್ನು ನೇಮಕ ಮಾಡದಾಗಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 8:08 am, Wed, 18 February 26