Headlines

ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಪೈಕಿ ಯಾರು ಶ್ರೀಮಂತರು? ಇಲ್ಲಿದೆ ವಿವರ – Kannada News | Vijay Deverakonda and Rashmika Mandanna Wedding: Net Worth, Assets and Udaipur Ceremony Details

ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ಫೆಬ್ರವರಿ 26ರಂದು ಮದುವೆ ಆಗೋದು ಬಹುತೇಕ ಖಚಿತ ಆಗಿದೆ. ಅವರ ಆಮಂತ್ರಣಪತ್ರ ವೈರಲ್ ಆಗಿ ಗಮನ ಸೆಳೆದಿದೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಉದಯಪುರದಲ್ಲಿ ಮದುವೆ ನಡೆಯಲಿದೆಯಂತೆ. ಆದರೆ, ಯಾವ ಜಾಗದಲ್ಲಿ ವಿವಾಹ ನಡೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಿರುವಾಗಲೇ ದಂಪತಿಗಳ ಒಟ್ಟೂ ಆಸ್ತಿ ಎಷ್ಟು ಎಂಬ ವಿಷಯದ ಬಗ್ಗೆ ಚರ್ಚೆ ನಡೆದಿದೆ.

ವಿಜಯ್ ದೇವರಕೊಂಡ ಅವರು ಕಷ್ಟದಿಂದ ಸಿನಿಮಾ ರಂಗಕ್ಕೆ ಬಂದವರು. ಈಗ ಅವರು ತಮ್ಮದೇ ಸಾಮ್ರಾಜ್ಯ ಸ್ಥಾಪಿಸಿದ್ದಾರೆ. ಜುಬ್ಲಿ ಹಿಲ್ಸ್​​ನಲ್ಲಿ ವಿಜಯ್ 15 ಕೋಟಿ ರೂಪಾಯಿ ಬೆಲೆಯ ಮನೆ ಹೊಂದಿದ್ದಾರೆ. ಬಿಎಂಡ್ಬ್ಲ್ಯೂ 5 ಸೀರಿಸ್, ವೋಲ್ವೋ ಎಕ್ಸ್​​ಸಿ90, ರೇಂಜ್ ರೋವರ್ ರೀತಿಯ ಕಾರನ್ನು ಹೊಂದಿದ್ದಾರೆ. ವಿಜಯ್ ದೇವರಕೊಂಡ ಅವರು ತಮ್ಮದೇ ಆದ ಮಲ್ಟಿಪ್ಲೆಕ್ಸ್ ಚೈನ್ ಹೊಂದಿದ್ದಾರೆ. ಇದಕ್ಕೆ ‘ಏಷ್ಯನ್ ವಿಜಯ್ ದೇವರಕೊಂಡ’ ಅಥವಾ ಎವಿಡಿ ಎಂದು ಹೆಸರು ಇಡಲಾಗಿದೆ.

ವಿಜಯ್ ದೇವರಕೊಂಡ ಅವರು ತಮ್ಮದೇ ಬಟ್ಟೆ ಬ್ರ್ಯಾಂಡ್ ಹೊಂದಿದ್ದಾರೆ. ಅವರು ‘ಹೈದರಾಬಾದ್ ಬ್ಲ್ಯಾಕ್ ಹಾಕ್’ ಹೆಸರಿನ ವಾಲಿಬಾಲ್ ತಂಡ ಹೊಂದಿದ್ದಾರೆ. ವಿಜಯ್ ಅವರು ಸಿನಿಮಾಗೆ ದೊಡ್ಡ ಮೊತ್ತ ಪಡೆದುಕೊಳ್ಳುತ್ತಾರೆ. ಅವರು ಇನ್ಸ್​ಟಾಗ್ರಾಮ್​​ನಲ್ಲಿ ಕೊಲ್ಯಾಬ್ ಆಗಲು ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಅವರ ಒಟ್ಟೂ ಆಸ್ತಿ 70 ಕೋಟಿ ರೂಪಾಯಿ ಎನ್ನಲಾಗಿದೆ.

ಇದನ್ನೂ ಓದಿ: ಮದುವೆಗೂ ಮುನ್ನ ಗುಡ್ ನ್ಯೂಸ್ ನೀಡಿದ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ

ರಶ್ಮಿಕಾ ಮಂದಣ್ಣ ಕೂಡ ಶ್ರೀಮಂತ ನಟಿ. ಅವರ ಒಟ್ಟೂ ಆಸ್ತಿ 60 ಕೋಟಿ ರೂಪಾಯಿ ಆಸುಪಾಸಿನಲ್ಲಿ ಇದೆ ಎನ್ನಲಾಗಿದೆ. ಅವರು ಬೆಂಗಳೂರು, ಮುಂಬೈ ಹಾಗೂ ಗೋವಾದಲ್ಲಿ ಮನೆ ಹೊಂದಿದ್ದಾರೆ. ಅವರು ಪ್ರತಿ ಸಿನಿಮಾಗೆ 4 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ ಎನ್ನಲಾಗಿದೆ. ವಿಜಯ್ ಹಾಗೂ ರಶ್ಮಿಕಾ ಮದುವೆಗೆ ಎಲ್ಲ ರೀತಿಯ ತಯಾರಿ ನಡೆದಿದೆ. ಉದಯಪುರದಲ್ಲಿ ನಡೆಯೋ ಈ ಮದುವೆಗೆ ಆಪ್ತರು ಮಾತ್ರ ಆಗಮಿಸೋ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 1:08 pm, Thu, 19 February 26

Source link

Leave a Reply

Your email address will not be published. Required fields are marked *