ಮಾರ್ಚ್ ಈವೆಂಟ್ ಕ್ಯಾಲೆಂಡರ್Image Credit source: Pinterest
ಪ್ರತಿ ತಿಂಗಳಲ್ಲೂಸಹ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಒಂದಷ್ಟು ವಿಶೇಷ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಹೌದು ಒಂದೊಂದು ಉದ್ದೇಶ ಹಾಗೂ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಜಾಗೃತಿ ಮೂಡಿಸುವಂತಹ ಸಲುವಾಗಿ ಈ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಇನ್ನೇನೂ ಮಾರ್ಚ್ (March) ತಿಂಗಳು ಆರಂಭವಾಗುತ್ತಿದ್ದು, ವರ್ಷದ ಈ ಮೂರನೇ ತಿಂಗಳಲ್ಲಿ ನಿದ್ರಾ ದಿನದಿಂದ ಹಿಡಿದು ವಿಶ್ವ ಅರಣ್ಯ ದಿನದವರೆಗೆ ಯಾವೆಲ್ಲಾ ರಾಷ್ಟ್ರೀಯ, ಅಂತಾರಾಷ್ಟ್ರೀಯ ಜಾಗೃತಿ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತವೆ ಎಂಬುದರ ಸಂಪೂರ್ಣ ವಿವರವನ್ನು ತಿಳಿಯಿರಿ.
ಮಾರ್ಚ್ ತಿಂಗಳ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ:
- ಮಾರ್ಚ್ 1 – ವಿಶ್ವ ನಾಗರಿಕ ರಕ್ಷಣಾ ದಿನ
- ಮಾರ್ಚ್ 1 – ವಿಶ್ವ ಅಭಿನಂದನಾ ದಿನ
- ಮಾರ್ಚ್ 3 – ವಿಶ್ವ ವನ್ಯಜೀವಿ ದಿನ
- ಮಾರ್ಚ್ 3 – ವಿಶ್ವ ಶ್ರವಣ ದಿನ
- ಮಾರ್ಚ್ 4 – ಹೋಳಿ
- ಮಾರ್ಚ್ 4 -ರಾಷ್ಟ್ರೀಯ ಸುರಕ್ಷತಾ ದಿನ
- ಮಾರ್ಚ್ 8 – ಅಂತಾರಾಷ್ಟ್ರೀಯ ಮಹಿಳಾ ದಿನ
- ಮಾರ್ಚ್ 11 – ಧೂಮಪಾನ ನಿಷೇಧ ದಿನ
- ಮಾರ್ಚ್ 15 – ವಿಶ್ವ ಗ್ರಾಹಕರ ಹಕ್ಕುಗಳ ದಿನ
- ಮಾರ್ಚ್ 15 – ವಿಶ್ವ ನಿದ್ರಾ ದಿನ
- ಮಾರ್ಚ್ 16 – ರಾಷ್ಟ್ರೀಯ ಲಸಿಕೆ ದಿನ
- ಮಾರ್ಚ್ 20 – ಅಂತಾರಾಷ್ಟ್ರೀಯ ಸಂತೋಷ ದಿನ
- ಮಾರ್ಚ್ 20 – ವಿಶ್ವ ಗುಬ್ಬಚ್ಚಿ ದಿನ
- ಮಾರ್ಚ್ 20 – ವಿಶ್ವ ಮೌಖಿಕ ಆರೋಗ್ಯ ದಿನ
- ಮಾರ್ಚ್ 21 – ವಿಶ್ವ ಅರಣ್ಯ ದಿನ
- ಮಾರ್ಚ್ 21 – ವಿಶ್ವ ಡೌನ್ ಸಿಂಡ್ರೋಮ್ ದಿನ
- ಮಾರ್ಚ್ 22 – ವಿಶ್ವ ಜಲ ದಿನ
- ಮಾರ್ಚ್ 23 – ವಿಶ್ವ ಹವಾಮಾನ ದಿನ
- ಮಾರ್ಚ್ 23 – ಹುತಾತ್ಮರ ದಿನ
- ಮಾರ್ಚ್ 24 – ವಿಶ್ವ ಕ್ಷಯರೋಗ ದಿನ
- ಮಾರ್ಚ್ 26 – ನೇರಳೆ ದಿನ
- ಮಾರ್ಚ್ 27 – ವಿಶ್ವ ರಂಗಭೂಮಿ ದಿನ
- ಮಾರ್ಚ್ 28 – ವಿಶ್ವ ಪಿಯಾನೋ ದಿನ
- ಮಾರ್ಚ್ 31 – ಮಹಾವೀರ ಜಯಂತಿ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ