Headlines

Moss Removing Tips: ಪಾಚಿಗಟ್ಟಿದ ನೆಲವನ್ನು ಸ್ವಚ್ಛಗೊಳಿಸಲು ಈ ಸುಲಭ ಟಿಪ್ಸ್‌ ಪಾಲಿಸಿ ಸಾಕು – Kannada News | Here are some simple tricks to get rid of moss on wall and floor

ಮಳೆಗಾಲದಲ್ಲಿ ಗೋಡೆ, ನೆಲದ ಮೇಲೆ ಪಾಚಿ (moss) ಬೆಳೆಯೋದು ಸಾಮಾನ್ಯ. ತೇವಾಂಶದ ಕಾರಣದಿಂದಾಗಿ ಮನೆಯಂಗಳದಲ್ಲಿ ಹಾಸಿರುವ ಇಂಟರ್‌ಲಾಕ್‌, ಟೆರೇಸ್‌, ಗೋಡೆಗಳ ಮೇಲೆ ಪಾಚಿಗಳು ಬೆಳೆಯುತ್ತವೆ. ನೆಲದ ಮೇಲಿರುವ ಈ ಪಾಚಿಯ ಮೇಲೆ ಕಾಲಿಟ್ಟರೆ ಜಾರಿ ಬೀಳೋದಂತೂ ಗ್ಯಾರಂಟಿ. ಅದರಲ್ಲೂ ಮನೆಯಲ್ಲಿ ಹಿರಿಯರು ಮಕ್ಕಳು ಇದ್ದರಂತೂ ತುಂಬಾನೇ ಕಷ್ಟ. ಅವರು ಅತ್ತಿತ್ತ ಓಡಾಡುವ ಕಾರಣ ನೆಲದ ಮೇಲೆ ಅಂಟಿರುವ ಪಾಚಿಯನ್ನು ಕ್ಲೀನ್‌ ಮಾಡುತ್ತಲೇ ಇರಬೇಕು. ಅಷ್ಟೇ ಅಲ್ಲದೆ ಗೋಡೆಗಳ ಮೇಲೆ ಅಂಟಿರುವ ಪಾಚಿಯನ್ನು ಸಹ ತೆಗೆದುಹಾಕಬೇಕು, ಇಲ್ಲದಿದ್ದರೆ ಅದು ಮನೆಯ ಅಂದವನ್ನೇ ಸಂಪೂರ್ಣವಅಗಿ ಹಾಳು ಮಾಡುತ್ತವೆ. ಈ ಪಾಚಿಯನ್ನು ತೆಗೆದು ಹಾಕುವುದು ಕಷ್ಟದ ಕೆಲಸವಲ್ಲ, ಮನೆಯಲ್ಲಿ ಲಭ್ಯವಿರುವ ಈ ಕೆಲವು ವಸ್ತುಗಳ ಸಹಾಯದಿಂದ ಸುಲಭವಾಗಿ ತೆಗೆದುಹಾಕಬಹುದು.

ನೆಲದ ಮೇಲೆ ಅಂಟಿರುವ ಪಾಚಿಯನ್ನು ತೆಗೆದುಹಾಕುವುದು ಹೇಗೆ?

ವಿನೆಗರ್: ವಿನೆಗರ್‌ನಲ್ಲಿರುವ ಆಮ್ಲೀಯ ಗುಣಗಳು ಪಾಚಿಯನ್ನು ತೆಗೆದುಹಾಕುವಲ್ಲಿ ಬಹಳ ಪರಿಣಾಮಕಾರಿ. ಸ್ಪ್ರೇ ಬಾಟಲಿಯಲ್ಲಿ ವಿನೆಗರ್ ಮತ್ತು ನೀರನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಈ ದ್ರಾವಣವನ್ನು ನೇರವಾಗಿ ಪಾಚಿ ಇರುವ ಪ್ರದೇಶದ ಮೇಲೆ ಸಿಂಪಡಿಸಿ ಮತ್ತು 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಗಟ್ಟಿಯಾದ ಬ್ರಷ್‌ನಿಂದ ಸ್ಕ್ರಬ್ ಮಾಡಿ ಮತ್ತು ನೀರಿನಿಂದ ತೊಳೆಯಿರಿ ಇದು ಗೋಡೆಯ ಮೇಲಿನ ಪಾಚಿಯನ್ನು ಸುಲಭವಾಗಿ ತೆಗೆದು ಹಾಕುತ್ತದೆ.

ಅಡಿಗೆ ಸೋಡಾ: ಪಾಚಿಯನ್ನು ತೆಗೆದುಹಾಕಲು ಅಡುಗೆ ಸೋಡಾವನ್ನು ಸಹ ಬಳಸಬಹುದು. ಇದಕ್ಕಾಗಿ ಅಡಿಗೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ ದಪ್ಪ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಪಾಚಿಗಟ್ಟಿದ ನೆಲಕ್ಕೆ ಹಚ್ಚಿ  ಕೆಲವು ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ, ಅದನ್ನು ಬ್ರಷ್‌ನಿಂದ ಸ್ಕ್ರಬ್ ಮಾಡಿ ಮತ್ತು ನೀರಿನಿಂದ ತೊಳೆಯಿರಿ. ಗೋಡೆಯಂತಹ  ಸಣ್ಣ ಪ್ರದೇಶಗಳಿಂದ ಪಾಚಿಯನ್ನು ತೆಗೆದುಹಾಕಲು ಈ ವಿಧಾನವು ವಿಶೇಷವಾಗಿ ಉಪಯುಕ್ತವಾಗಿದೆ.

ಬ್ಲೀಚಿಂಗ್ ಪೌಡರ್: ಮನೆಯಂಗಳದ ಇಂಟರ್‌ಲಾಕ್‌ ಮೇಲೆ ಪಾಚಿ ಅಂಟಿದ್ದರೆ, ಇದರ ಮೇಲೆ ನಡೆಯುವುದರಿಂದ ಜಾರಿ ಬೀಳುವ ಸಾಧ್ಯತೆ ಇರುತ್ತದೆ. ಇದನ್ನು ಸುಲಭವಾಗಿ ತೆಗೆದು ಹಾಕಲು ಬ್ಲೀಚಿಂಗ್‌ ಪೌಡರ್‌ ಬಳಸಬಹುದು.  ಪಾಚಿ ತುಂಬಿದ ಪ್ರದೇಶದ ಮೇಲೆ ಸ್ವಲ್ಪ ಪ್ರಮಾಣದ ಬ್ಲೀಚಿಂಗ್ ಪೌಡರ್ ಅನ್ನು ಸಿಂಪಡಿಸಿ, ಅದನ್ನು ನೀರಿನಿಂದ ತೇವಗೊಳಿಸಿ ಮತ್ತು ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದನ್ನು ಬಳಸುವಾಗ ಕೈಗವಸುಗಳನ್ನು ಧರಿಸಲು ಮರೆಯದಿರಿ. ನಂತರ, ಬ್ರಷ್‌ನಿಂದ ಸ್ಕ್ರಬ್ ಮಾಡಿ ಮತ್ತು ನೀರಿನಿಂದ ಚೆನ್ನಾಗಿ ತೊಳೆಯಿರಿ. ಈ ವಿಧಾನವು ಪಾಚಿಯನ್ನು ತೆಗೆದುಹಾಕಲು ತುಂಬಾ ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ: ನೀವು ಖರೀದಿಸುವ ಕೇಸರಿ ಅಸಲಿಯೋ, ನಕಲಿಯೋ ಎಂಬುದನ್ನು ತಿಳಿಯಲು ಟ್ರಿಕ್ಸ್‌ ಬಳಸಿ

ಬಿಸಿ ನೀರು ಮತ್ತು ಡಿಟೆರ್ಜಂಟ್‌: ಒಂದು ಬಕೆಟ್ ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಪ್ರಮಾಣದ ಡಿಟರ್ಜೆಂಟ್ ಪೌಡರ್ ಅಥವಾ ಡಿಶ್‌ವಾಶಗ ಲಿಕ್ವಿಡ್‌ ಅನ್ನು ಮಿಶ್ರಣ ಮಾಡಿ. ಈ ದ್ರಾವಣವನ್ನು ಪಾಚಿ ತುಂಬಿದ ಪ್ರದೇಶದ ಮೇಲೆ ಸುರಿಯಿರಿ ಮತ್ತು ತಕ್ಷಣ ಗಟ್ಟಿಯಾದ ಪೊರಕೆ ಅಥವಾ ಬ್ರಷ್‌ನಿಂದ ಸ್ಕ್ರಬ್ ಮಾಡಿ. ಇದು ಪಾಚಿಯನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ.

ಉಪ್ಪು ಮತ್ತು ನಿಂಬೆ ಪೇಸ್ಟ್: ನಿಂಬೆಹಣ್ಣಿನ ಆಮ್ಲೀಯತೆ ಮತ್ತು ಉಪ್ಪಿನ ಒರಟುತನ ಪಾಚಿಯನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ. ಒಂದು ಬೌಲ್‌ಗೆ ನಿಂಬೆ ರಸ ಮತ್ತು ಉಪ್ಪನ್ನು ಸೇರಿಸಿ ದಪ್ಪ ಪೇಸ್ಟ್ ಮಾಡಿ ಮತ್ತು ಗೋಡೆ ಮೇಲೆ ಅಂಟಿರುವ ಪಾಚಿಯ ಮೇಲೆ ಹಚ್ಚಿ 15 ರಿಂದ20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಬ್ರಷ್‌ನಿಂದ ಸ್ಕ್ರಬ್ ಮಾಡಿ ಮತ್ತು ನೀರಿನಿಂದ ತೊಳೆಯಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *