ಬುಲಂದ್ಶಹರ್, ಫೆಬ್ರವರಿ 27: ಅಂಗಡಿಯೊಂದರೆ ಹೊರಗೆ ಟಿನ್ ಶೆಡ್ ಅಳವಡಿಸುತ್ತಿದ್ದ ಕೆಲಸಗಾರ ಆಕಸ್ಮಿಕವಾಗಿ ಹೈ-ಟೆನ್ಷನ್ ಲೈನ್ ಸ್ಪರ್ಶಿಸಿ ಕೆಳಗೆ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ನಡೆದಿದೆ. ಬಳಿಕ ಅಲ್ಲಿದ್ದ ಯುವಕನೊಬ್ಬ ಕೂಡಲೇ ಬಂದು ಸಿಪಿಆರ್ ಮಾಡುವ ಮೂಲಕ ಅವರ ಪ್ರಾಣ ಉಳಿಸಿದ್ದಾರೆ. ಖುರ್ಜಾ ನಗರ ಕೊತ್ವಾಲಿ ಪೊಲೀಸ್ ವ್ಯಾಪ್ತಿಯ ಖುರ್ಜಾ ತಹಸಿಲ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ವಿದ್ಯುತ್ ಸ್ಪರ್ಶಿಸಿ ಅವರು ಸ್ಥಳದಲ್ಲೇ ಕುಸಿದು ಬಿದ್ದರು, ಮೈತುಂಬಾ ಸುಟ್ಟ ಗಾಯಗಳಾಗಿದ್ದವು. ಅವರ ಕಿರುಚಾಟ ಕೇಳಿ ಹತ್ತಿರದಲ್ಲಿದ್ದ ಯುವಕ ಕೂಡಲೇ ಓಡಿಬಂದಿದ್ದರು. ನಂತರ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರ ಸ್ಥಿತಿ ಗಂಭೀರವಾಗಿದೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ