Headlines

Chanakya Niti: ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ – Kannada News | Chanakya Niti: Follow these principles of Chanakya to easily face the difficulties in life

ಪ್ರತಿಯೊಬ್ಬರ ಜೀವನದಲ್ಲೂ ಕಷ್ಟಗಳು (difficulties) ಬರುತ್ತವೆ, ಸವಾಲುಗಳು ಎದುರಾಗುತ್ತವೆ. ಆ ಸವಾಲುಗಳನ್ನು ಎದುರಿಸಿ ನಿಂತಾಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. ಆದ್ರೆ ಹೆಚ್ಚಿನವರಿಗೆ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸುಲಭವಾಗಿ ಮೆಟ್ಟಿ ನಿಲ್ಲುವುದು ಹೇಗೆ ಎಂಬುವುದೇ ಗೊತ್ತಿರುವುದಿಲ್ಲ, ಈ ಕಾರಣದಿಂದಾಗಿ ಅವರು ಯಾವಾಗಲೂ ಯಶಸ್ಸನ್ನು ಸಾಧಿಸಲು ಸಾಧ್ಯವಾಗುದಿಲ್ಲ. ಆದರೆ ಕೆಲವೊಂದು ವಿಷಯಗಳನ್ನು ನಮ್ಮಲ್ಲಿ ನಾವು ಅಳವಡಿಸಿಕೊಳ್ಳುವ ಮೂಲಕ ಖಂಡಿತವಾಗಿ ಯಾವುದೇ ಕಠಿಣ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು, ಯಶಸ್ಸನ್ನು ಸಾಧಿಸಬಹುದು ಎಂದಿದ್ದಾರೆ ಆಚಾರ್ಯ ಚಾಣಕ್ಯ. ಹಾಗಿದ್ರೆ ಆತ್ಮವಿಶ್ವಾಸವನ್ನು ಹೆಚ್ಚಿಸಲು, ಸವಾಲುಗಳನ್ನು ಸುಲಭವಾಗಿ ಎದುರಿಸಲು ಯಾವ ಗುಣಗಳನ್ನು ಅಳವಡಿಸಿಕೊಳ್ಳಬೇಕು ಅನ್ನೋದನ್ನು ನೋಡೋಣ ಬನ್ನಿ.

ಸವಾಲುಗಳನ್ನು ಸುಲಭವಾಗಿ ಮೆಟ್ಟಿ ನಿಲ್ಲುವುದೇಗೆ?

 ನಿಮ್ಮನ್ನು ನಿಯಂತ್ರಿಸಲು ಕಲಿಯಿರಿ: ಆಚಾರ್ಯ ಚಾಣಕ್ಯರ ಪ್ರಕಾರ, ಸ್ವಯಂ ನಿಯಂತ್ರಣವು ನಮ್ಮ ದೊಡ್ಡ ಶಕ್ತಿ. ನಾವು ನಮ್ಮ ಭಾವನೆಗಳು, ಕೋಪ ಮತ್ತು ದುರಾಸೆಯನ್ನು ನಿಯಂತ್ರಿಸಲು ಕಲಿತಾಗ, ನಾವು ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹ ಕಲಿಯುತ್ತೇವೆ. ಅನೇಕ ಬಾರಿ, ಕೋಪ, ಅಸೂಯೆ ಅಥವಾ ದುರಾಸೆಯ ಕಾರಣದಿಂದಾಗಿ ನಾವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ, ಈ ತಪ್ಪು ನಿರ್ಧಾರಗಳೇ ನಮ್ಮ ಪ್ರಗತಿಗೆ ಅಡ್ಡಿಯಾಗುತ್ತೇವೆ. ಆದ್ದರಿಂದ ನಿಮ್ಮನ್ನು ನೀವು ನಿಯಂತ್ರಿಸಲು ಕಲಿಯಿರಿ. ದೈನಂದಿನ ಸಣ್ಣ ವಿಷಯಗಳ ಮೇಲೆಯೂ ನಿಯಂತ್ರಣವನ್ನು ಕಾಯ್ದುಕೊಳ್ಳಲು ಕಲಿಯಿರಿ. ಉದಾಹರಣೆಗೆ, ಯಾರಾದರೂ ನಿಮ್ಮೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರೆ, ನೀವು ತಕ್ಷಣ ಪ್ರತಿಕ್ರಿಯಿಸಬಾರದು. ನಿಮ್ಮ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಮೊದಲು ನೀವು ಎಚ್ಚರಿಕೆಯಿಂದ ಯೋಚಿಸಬೇಕು. ಈ ಸ್ವಯಂ ನಿಯಂತ್ರಣವು ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿಯೂ ಸಹ ನಿಮ್ಮನ್ನು ಬಲಶಾಲಿಯನ್ನಾಗಿ ಮಾಡುತ್ತದೆ.

ಜ್ಞಾನ ಮತ್ತು ಕಲಿಯುವ ಬಯಕೆ: ಹೊಸ ವಿಷಯಗಳನ್ನು ನಿರಂತರವಾಗಿ ಕಲಿಯುವವರು ಮಾತ್ರ ಜೀವನದಲ್ಲಿ ಪ್ರಗತಿ ಸಾಧಿಸಬಹುದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಪುಸ್ತಕ ಮಾತ್ರವಲ್ಲ  ನಿಮ್ಮ ಸ್ವಂತ ಅನುಭವಗಳಿಂದ, ತಪ್ಪುಗಳಿಂದ ಮತ್ತು ಇತರರಿಂದ ಹೊಸ ವಿಷಯಗಳನ್ನು ಕಲಿಯುವ ಬಯಕೆ ನಿಮ್ಮಲ್ಲಿರಬೇಕು. ನೀವು ಹಾಗೆ ಮಾಡಿದರೆ ಮಾತ್ರ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ನೀವು ಧೈರ್ಯದಿಂದ ಎದುರಿಸಲು ನಿಮಗೆ ಸಾಧ್ಯವಾಗುತ್ತದೆ. ಜ್ಞಾನವೆಂಬ ಅಸ್ತ್ರ  ಯಾವುದೇ ಪ್ರತಿಕೂಲ ಪರಿಸ್ಥಿತಿಯಿಂದಲೂ ಮನುಷ್ಯನನ್ನು ಸುಲಭವಾಗಿ ಪಾರು ಮಾಡುತ್ತದೆ.

ಇದನ್ನೂ ಓದಿ: ಕೆಲಸದ ಸ್ಥಳದಲ್ಲಿ ಗೌರವ, ಪ್ರಗತಿ ಸಾಧಿಸಬೇಕೆಂದರೆ ಚಾಣಕ್ಯರ ತತ್ವಗಳನ್ನು ಪಾಲಿಸಿ

ಉತ್ತಮ ಮನೋಭಾವ ಮತ್ತು ಸಕಾರಾತ್ಮಕ ಚಿಂತನೆ: ಆಚಾರ್ಯ ಚಾಣಕ್ಯರ ಪ್ರಕಾರ, ಉತ್ತಮ  ಮನೋಭಾವ ಮತ್ತು ಸಕಾರಾತ್ಮಕ ಚಿಂತನೆಯನ್ನು ಹೊಂದಿರುವುದು ಯಶಸ್ಸಿನ ಕೀಲಿ. ನೀವು ಪ್ರತಿಯೊಂದು ಸನ್ನಿವೇಶದಲ್ಲೂ ನಕಾರಾತ್ಮಕವಾಗಿ ಯೋಚಿಸಿದರೆ, ಸಣ್ಣ ಸಮಸ್ಯೆಗಳು ಸಹ  ನಿಮಗೆ ದೊಡ್ಡದಾಗಿಯೇ ಕಾಣುತ್ತದೆ. ನೀವು ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ, ಸಮಸ್ಯೆಗಳನ್ನು ಅವಕಾಶಗಳಾಗಿ ನೋಡಿ ಮತ್ತು ಪರಿಹಾರಗಳನ್ನು ಹುಡುಕಲು ಪ್ರಯತ್ನಿಸುತ್ತಿರಿ. ಈ ನಿಮ್ಮ ಸಕಾರಾತ್ಮಕ ಮನೋಭಾವವು ನಿಮ್ಮನ್ನು ಮಾನಸಿಕವಾಗಿ ಬಲಶಾಲಿಗಳನ್ನಾಗಿ ಮಾಡುವುದಲ್ಲದೆ, ಸವಾಲುಗಳನ್ನು ಧೈರ್ಯದಿಂದ ಎದುರಿಸಲು ನಿಮಗೆ ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *