Headlines

ರಜನೀಕಾಂತ್ ಋಣ ತೀರಿಸಿದ ಶಾರುಖ್ ಖಾನ್, ಎಸ್​​ಆರ್​​ಕೆ ಜೊತೆ ಎಸ್​​ಆರ್​​ಕೆ – Kannada News | Shah Rukh Khan acting with Rajinikanth in Jailer 2

ಶಾರುಖ್ ಖಾನ್ (Shah Rukh Khan), ಕಮಲ್ ಹಾಸನ್ ಅವರ ಅತಿ ದೊಡ್ಡ ಅಭಿಮಾನಿ, ಆದರೆ ರಜನೀಕಾಂತ್ ಅವರ ಬಗ್ಗೆ ಅಷ್ಟೇ ಗೌರವ ಇರುವಂಥಹ ನಟ. ಕಮಲ್ ಹಾಸನ್ ಕರೆದರೆಂದು ಅವರ ನಿರ್ದೇಶನದ ‘ಹೇ ರಾಮ್’ ಸಿನಿಮಾನಲ್ಲಿ ಒಂದು ರೂಪಾಯಿ ಸಹ ಸಂಭಾವನೆ ಪಡೆಯದೆ ನಟಿಸಿದ್ದರು. ಆ ಬಳಿಕ ರಜನೀಕಾಂತ್ ಅವರು ಶಾರುಖ್ ಖಾನ್ ನಿರ್ಮಿಸಿ, ನಟಿಸಿದ್ದ ‘ರಾ ಒನ್’ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇದೀಗ ಆ ಋಣವನ್ನು ಶಾರುಖ್ ಖಾನ್ ತೀರಿಸಿದ್ದಾರೆ.

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ, ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ‘ಜೈಲರ್’ ಭಾರಿ ದೊಡ್ಡ ಹಿಟ್ ಆಗಿದ್ದು ಗೊತ್ತೇ ಇದೆ. ಆ ಸಿನಿಮಾನಲ್ಲಿ ಶಿವಣ್ಣ, ಮೋಹನ್​​ಲಾಲ್, ಜಾಕಿ ಶ್ರಾಫ್ ಇನ್ನೂ ಕೆಲವು ಕಲಾವಿದರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಇದೀಗ ‘ಜೈಲರ್ 2’ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಈ ಬಾರಿ ‘ಜೈಲರ್ 2’ ಸಿನಿಮಾನಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. 15 ವರ್ಷಗಳ ಬಳಿಕ ರಜನೀಕಾಂತ್ ಋಣ ತೀರಿಸಿದ್ದಾರೆ ಶಾರುಖ್ ಖಾನ್.

ಈ ಕುರಿತು ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ವೈಯಕ್ತಿಕ ಸ್ಟೈಲಿಸ್ಟ್ ಜಿಶಾದ್ ಶಂಸುದ್ದೀನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಎಐ ಫೋಟೋವೊಂದನ್ನು ಜಿಶಾದ್ ಹಂಚಿಕೊಂಡಿದ್ದು, ಅದರಲ್ಲಿ ಶಾರುಖ್ ಖಾನ್ ಕಾರು ಚಲಾಯಿಸುತ್ತಿದ್ದರೆ, ಅವರ ಪಕ್ಕದಲ್ಲಿ ಮೋಹನ್ ಲಾಲ್ ಹಾಗೂ ಹಿಂಬದಿಯ ಸೀಟಿನಲ್ಲಿ ರಜನಿಕಾಂತ್ ಮತ್ತು ಶಿವರಾಜ್‌ಕುಮಾರ್ ಕುಳಿತಿದ್ದಾರೆ. ಈ ಪೋಸ್ಟ್‌ಗೆ ‘ಖಂಡಿತವಾಗಿಯೂ ಇದು ಸಂಭವಿಸಲಿದೆ’ ಎಂದು ಬರೆಯುವ ಮೂಲಕ ಚಿತ್ರಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ.

ಇದನ್ನೂ ಓದಿ:ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ಶಾರುಖ್ ಖಾನ್, ಅಭಿಮಾನಿಗಳಿಗೆ ನಿರಾಸೆ

ಕಳೆದ ಡಿಸೆಂಬರ್‌ನಲ್ಲಿ ಹಿರಿಯ ನಟ ಮಿಥುನ್ ಚಕ್ರವರ್ತಿ ಕೂಡ ಈ ಬಗ್ಗೆ ಮಾತನಾಡುತ್ತಾ, ‘ಜೈಲರ್ 2’ ಚಿತ್ರದಲ್ಲಿ ತಾವು ವಿಲನ್ ಪಾತ್ರ ನಿರ್ವಹಿಸುತ್ತಿರುವುದಾಗಿ ಹಾಗೂ ರಜನಿಕಾಂತ್, ಮೋಹನ್ ಲಾಲ್, ಶಾರುಖ್ ಖಾನ್, ಶಿವರಾಜ್‌ಕುಮಾರ್ ಮತ್ತು ರಮ್ಯಾ ಕೃಷ್ಣ ಅವರ ಪಾತ್ರಗಳು ತಮ್ಮ ವಿರುದ್ಧ ಹೋರಾಡಲಿವೆ ಎಂದು ಸುಳಿವು ನೀಡಿದ್ದರು. ಈಗ ಮತ್ತೊಮ್ಮೆ ಈ ಸುದ್ದಿ ಖಾತ್ರಿ ಆಗಿದೆ.

ಶಾರುಖ್ ಖಾನ್ ಪಾತ್ರ ರಜನೀಕಾಂತ್ ಅವರೊಟ್ಟಿಗೆ ಮಾತ್ರವೇ ಇರಲಿದೆಯೇ ಅಥವಾ ಶಿವರಾಜ್ ಕುಮಾರ್ ಅವರೊಟ್ಟಿಗೂ ಇರಲಿದೆಯೇ ಎಂಬ ಕುತೂಹಲ ಇದೆ. ಇದೇ ರಜನೀಕಾಂತ್ ಅವರ ‘ಕೂಲಿ’ ಸಿನಿಮಾನಲ್ಲಿ ಆಮಿರ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾನಲ್ಲಿ ಉಪೇಂದ್ರ ಸಹ ಆಮಿರ್ ಖಾನ್ ಅವರೊಟ್ಟಿಗೆ ಕೆಲ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಈಗ ರಜನೀಕಾಂತ್ ಅವರದ್ದೇ ಸಿನಿಮಾನಲ್ಲಿ ಶಾರುಖ್ ಖಾನ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ಸಿನಿಮಾನಲ್ಲಿ ಶಿವರಾಜ್ ಕುಮಾರ್ ಸಹ ನಟಿಸುತ್ತಿದ್ದಾರೆ. ಶಾರುಖ್ ಖಾನ್ ಹಿಂದಿಯ ‘ಎಸ್​​ಆರ್ಕೆ’ ಆದರೆ ಶಿವರಾಜ್ ಕುಮಾರ್ ಕನ್ನಡದ ‘ಎಸ್​​ಆರ್​​ಕೆ’.

2023 ರಲ್ಲಿ ಬಿಡುಗಡೆ ಆಗಿದ್ದ ‘ಜೈಲರ್’ ಮೊದಲ ಭಾಗದಲ್ಲಿ ಶಿವಣ್ಣ ಅವರ ಅತಿಥಿ ಪಾತ್ರ ಸಖತ್ ಟ್ರೆಂಡ್ ಆಗಿತ್ತು. ಸಿನಿಮಾದ ನಾಯಕ ಪಾತ್ರಕ್ಕೆ ಸಿಕ್ಕಷ್ಟೆ ಜನಪ್ರೀತಿ ಶಿವಣ್ಣನ ನರಸಿಂಹ ಪಾತ್ರಕ್ಕೆ ಸಿಕ್ಕಿತ್ತು. ‘ಜೈಲರ್ 2’ ನಲ್ಲಿಯೂ ಶಿವಣ್ಣ, ನರಸಿಂಹ ಪಾತ್ರದಲ್ಲಿ ನಟಿಸಲಿದ್ದು, ಈ ಬಾರಿಯೂ ಅಷ್ಟೇ ಪವರ್​​ಫುಲ್ ಆಗಿ ಅವರ ಪಾತ್ರ ಮೂಡಿಬರಲಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *