Chanakya Niti: ಬೇಗನೆ ವಯಸ್ಸಾದವರಂತೆ ಕಾಣಲು ಈ ಅಭ್ಯಾಸಗಳೇ ಬಹು ಮುಖ್ಯ ಕಾರಣ ಎನ್ನುತ್ತಾರೆ ಚಾಣಕ್ಯ

Chanakya Niti: ಬೇಗನೆ ವಯಸ್ಸಾದವರಂತೆ ಕಾಣಲು ಈ ಅಭ್ಯಾಸಗಳೇ ಬಹು ಮುಖ್ಯ ಕಾರಣ ಎನ್ನುತ್ತಾರೆ ಚಾಣಕ್ಯ

ಪ್ರತಿಯೊಬ್ಬರಿಗೂ ಸಹ ವಯಸ್ಸಾಗುತ್ತದೆ ನಿಜ, ಆದ್ರೆ ಕೆಲವೊಬ್ಬರೂ ಮಾತ್ರ ತಮ್ಮ ಸಣ್ಣ ವಯಸ್ಸಿನಲ್ಲಿಯೇ ವಯಸ್ಸಾದ ವ್ಯಕ್ತಿಗಳಂತೆ ಕಾಣುತ್ತಾರೆ. ಹೌದು 25, 30 ವರ್ಷ ಆಗಿದ್ರೂ ಅವರು ಮಾತ್ರ 40 ರ ಹರೆಯದವರಂತೆ ಕಾಣಿಸುತ್ತಾರೆ. ಈ ಅಕಾಲಿಕ ವಯಸ್ಸಾಗುವಿಕೆಗೆ (premature aging) ವ್ಯಕ್ತಿಯ ಕೆಲವೊಂದು ಕೆಟ್ಟ ಅಭ್ಯಾಸಗಳೇ ಮುಖ್ಯ ಕಾರಣ ಎಂದು ಎಚ್ಚರಿಸಿದ್ದಾರೆ ಆಚಾರ್ಯ ಚಾಣಕ್ಯ. ಈ ಅಭ್ಯಾಸಗಳನ್ನು ತ್ಯಜಿಸುವ ಮೂಲಕ ಖಂಡಿತವಾಗಿಯೂ ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಯಬಹುದು ಎಂದಿದ್ದಾರೆ. ಚಾಣಕ್ಯರು ಹೇಳಿರುವಂತೆ ಯಾವ ಅಭ್ಯಾಸಗಳಿಂದ ವ್ಯಕ್ತಿ ಬಹು ಬೇಗನೆ ವಯಸ್ಸಾದವನಂತೆ ಕಾಣಿಸುತ್ತಾನೆ ಎಂಬುದನ್ನು ನೋಡೋಣ ಬನ್ನಿ.

ಈ ಅಭ್ಯಾಸಗಳೇ ಅಕಾಲಿಕ ವಯಸ್ಸಾಗುವಿಕೆಗೆ ಕಾರಣ:

ಅತಿಯಾದ ಪ್ರಯಾಣ: ಚಾಣಕ್ಯ ನೀತಿಯ ಪ್ರಕಾರ, ಹೆಚ್ಚು ಪ್ರಯಾಣಿಸುವ ವ್ಯಕ್ತಿಯು ಬೇಗನೆ ವಯಸ್ಸಾದವನಂತೆ ಕಾಣಿಸುತ್ತಾನೆ. ಸರಿಯಾದ ದಿನಚರಿಯ ಕೊರತೆಯೇ ಇದಕ್ಕೆ ಮುಖ್ಯ ಕಾರಣ ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಪ್ರಯಾಣದ ಸಮಯದಲ್ಲಿ, ವ್ಯಕ್ತಿಯ ಜೀವನಶೈಲ್ಲಿ ಏರುಪೇರುಗಳಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ದೇಹವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಇದರಿಂದಾಗಿ ಆ ವ್ಯಕ್ತಿಯು ವಯಸ್ಸಾದವನಂತೆ ಕಾಣಿಸುತ್ತಾನೆ.

 ಬಂಧನ ಅಥವಾ ಯಾವಾಗಲೂ ಕೋಣೆಯೊಳಗೆಯೇ ಇರುವುದು: ಜೈಲಿನಲ್ಲಿ ವಾಸಿಸುವ ವ್ಯಕ್ತಿ ಬೇಗನೆ ವಯಸ್ಸಾದವನಂತೆ ಕಾಣಿಸುತ್ತಾನೆ. ಬಂಧನದಲ್ಲಿ ವಾಸಿಸುವುದರಿಂದ ಅಥವಾ ಒಬ್ಬ ವ್ಯಕ್ತಿ ಯಾವಾಗಲೂ ಬಂಧನದಲ್ಲಿರುವಂತೆ  ಮನೆಯೊಳಗೆಯೇ ಇರುವುದರಿಂದ ಆತನಿಗೆ ತನ್ನ ಆಲೋಚನೆಗಳು ಮತ್ತು ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಇದು ಕೂಡ ಅಕಾಲಿಕ ವಯಸ್ಸಾಗುವಿಕೆಗೆ ಕಾರಣ ಎಂದಿದ್ದಾರೆ ಚಾಣಕ್ಯ.

ನಕಾರಾತ್ಮಕತೆ: ಚಾಣಕ್ಯ ನೀತಿಯ ಪ್ರಕಾರ, ಯಾವಾಗಲೂ ನಕಾರಾತ್ಮಕವಾಗಿ ಯೋಚಿಸುವ ಜನರು ಬೇಗನೆ ವಯಸ್ಸಾದವರಂತೆ ಕಾಣಿಸುತ್ತಾರೆ. ಏಕೆಂದರೆ ಅಂತಹ ಜನರು ಜೀವನವನ್ನು ಪೂರ್ಣವಾಗಿ ಬದುಕುವ ಬದಲು ಎಲ್ಲದರಲ್ಲೂ ನಕಾರಾತ್ಮಕತೆಯನ್ನು ಹುಡುಕುತ್ತಾರೆ. ಇದರಿಂದಾಗಿ ಅವರು ಸಂತೋಷವಾಗಿ ಜೀವನ ನಡೆಸಲೂ ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ:  ಜೀವನದಲ್ಲಿ ವಿಚಾರಗಳು ಎಂದಿಗೂ ಅತಿಯಾಗಬಾರದು ಎನ್ನುತ್ತಾರೆ ಚಾಣಕ್ಯ

ವ್ಯಸನಗಳು: ವ್ಯಸನಗಳು ನಿಮ್ಮ ಜೀವನವನ್ನು ಹಾಳುಮಾಡುತ್ತವೆ. ಮಾದಕ ದ್ರವ್ಯ ಸೇವನೆ, ಜೂಜಾಟ ಮತ್ತು ಅನೈತಿಕ ಸಂಬಂಧಗಳು ನಮ್ಮನ್ನು ಹಾಳುಮಾಡುತ್ತವೆ. ಇವು ನಿಮ್ಮಲ್ಲಿದ್ದರೆ, ಅವುಗಳನ್ನು ಬಿಟ್ಟುಬಿಡಿ. ಇಲ್ಲದಿದ್ದರೆ, ನಿಮ್ಮ ಎಲ್ಲಾ ಗೌರವವು ಒಂದು ಕ್ಷಣದಲ್ಲಿ ಕಳೆದುಹೋಗುತ್ತದೆ. ಪರಿಣಾಮವಾಗಿ ಉಂಟಾಗುವ ಖಿನ್ನತೆಯು ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗುತ್ತದೆ.

ಚಿಂತೆ:  ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎನ್ನುವಂತೆ ಹಿಂದೆ ನಡೆದ ಘಟನೆಗಳಿಗೆ  ನಾವು ಎಂದಿಗೂ ವಿಷಾದಿಸಬಾರದು ಮತ್ತು ಭವಿಷ್ಯದ ಬಗ್ಗೆ ಚಿಂತಿಸಬಾರದು. ಯಾವಾಗಲೂ ವರ್ತಮಾನದಲ್ಲಿ ಬದುಕಬೇಕು. ನೀವು ನಿಮ್ಮ ಜೀವನವನ್ನು ಸಂತೋಷದಿಂದ ಬದುಕಲು ಬಯಸಿದರೆ, ಯಾವಾಗಲೂ ವರ್ತಮಾನದಲ್ಲಿ ಜೀವಿಸಬೇಕು. ಹಿಂದೆ ಆದ ಘಟನೆಗಳ ಬಗ್ಗೆ ಚಿಂತಿಸುತ್ತಾ ಕುಳಿತರೆ ಜೀವನದಲ್ಲಿ ನೆಮ್ಮದಿಯೂ ಇರೋದಿಲ್ಲ, ಇದು ಅಕಾಲಿಕ ವಯಸ್ಸಾಗುವಿಕೆಗೂ ಕಾರಣವಾಗುತ್ತದೆ ಎನ್ನುತ್ತಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *