ರಾಯಚೂರಿನಲ್ಲಿ ಘೋರ ದುರಂತ: ದಂಪತಿಯನ್ನು ಬಲಿಪಡೆದ ಕನಸಿನ ಮನೆ!

ರಾಯಚೂರಿನಲ್ಲಿ ಘೋರ ದುರಂತ: ದಂಪತಿಯನ್ನು ಬಲಿಪಡೆದ ಕನಸಿನ ಮನೆ!

ರಾಯಚೂರು, (ಮಾರ್ಚ್ 09): ಕನಸಿನ ಮನೆಯಲ್ಲೇ ದಂಪತಿ (Couple) ದುರಂತ ಸಾವು ಕಂಡಿರುವ ಘಟನೆ ರಾಯಚೂರಿನ (Raichur) ಲಿಂಗಸುಗೂರು ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ನಡೆದಿದೆ. ಹೌದು…ನಿರ್ಮಾಣ ಹಂತದ ಮನೆಯ ಮೆಟ್ಟಿಲು ಕುಸಿದು ಗಂಡ ಹೆಂಡತಿ ದುರಂತ ಸಾವುಕಂಡಿದ್ದಾರೆ. ದ್ಯಾವಪ್ಪ ಸುಗೂರು(35), ಶಿವಮ್ಮ(33) ಮೃತ ದಂಪತಿ. ತಮಗೊಂದು ಸೂರು ಬೇಕೆಂದು ಈ ದಂಪತಿ ಕನಸು ಕಂಡಿದ್ದು, ಅದರಂತೆ ಮನೆ ನಿರ್ಮಿಸಲು ಹಗಲಿರುಳು ಪರಿಶ್ರಮಿಸುತ್ತಿದ್ದ ಈ ಜೋಡಿ ಮೇಲೆ ಮೆಟ್ಟಿಲು ಕುಸಿದು ಬಿದ್ದಿದೆ. ಪರಿಣಾಮ ಅವಶೇಷಗಳಡಿ ಸಿಲುಕಿ ದಂಪತಿ ಸಾವನ್ನಪ್ಪಿದೆ.

ದ್ಯಾವಪ್ಪ ಹಾಗೂ ಶಿವಮ್ಮ ದಂಪತಿ ಮನೆ ಕಟ್ಟುವ ಕನಸು ಕಂಡಿದ್ದು, ಅದರಂತೆ ಹಣ ಹೊಂದಿಸಿ ಮನೆ ನಿರ್ಮಾಣ ಮಾಡಲು ಶುರು ಮಾಡಿದ್ದರು. ಸ್ವತಃ ತಾವೇ ಮನೆ ನಿರ್ಮಿಸಿಕೊಳ್ಳುತ್ತಿದ್ದು, ಅರ್ಧ ಮನೆ ಸಹ ಕಟ್ಟಲಾಗಿತ್ತು. ಆದರೆ, ಇಂದು (ಮಾರ್ಚ್ 09) ಮನೆ ಗೋಡೆ ಪ್ಲಾಸ್ಟರಿಂಗ್ ಮಾಡುತ್ತಿದ್ದ ವೇಳೆ ದಂಪತಿ ಮೇಲೆ ಏಕಾಏಕಿ ಮೆಟ್ಟಿಲುಗಳ ಪಿಲ್ಲರ್ ಕುಸಿದು ಬಿದ್ದಿದೆ. ಪರಿಣಾಮ ಅವಶೇಷಗಳಡಿ ಸಿಲುಕಿ ದಂಪತಿ ದ್ಯಾವಪ್ಪ, ಶಿವಮ್ಮ ಕನಸಿನ ಮನೆಯಲ್ಲೇ ದುರಂತ ಅಂತ್ಯಕಂಡಿದ್ದಾರೆ.

ಇದನ್ನೂ ಓದಿ: ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹತ್ಯೆ: ಪವಾಡಸದೃಶ ರೀತಿಯಲ್ಲಿ ಬದುಕುಳಿದ 2 ವರ್ಷ ಪಾಪು

ಮಾಹಿತಿ ತಿಳಿದು ಸ್ಥಳಕ್ಕೆ ಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ದಂಪತಿಯ ಮೃತದೇಹವನ್ನು ಲಿಂಗಸೂಗೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಬಗ್ಗೆ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *