‘ಧುರಂಧರ್ 2’ ಎಫೆಕ್ಟ್​​: ಪಾಕ್​​ನಲ್ಲಿ ಭಾರತೀಯ ಸ್ಪೈಗಾಗಿ ಹುಡುಕಾಟ? ವಿಡಿಯೋ ವೈರಲ್

‘ಧುರಂಧರ್ 2’ ಎಫೆಕ್ಟ್​​: ಪಾಕ್​​ನಲ್ಲಿ ಭಾರತೀಯ ಸ್ಪೈಗಾಗಿ ಹುಡುಕಾಟ? ವಿಡಿಯೋ ವೈರಲ್

ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ (Dhurandhar 2) ಬಾಕ್ಸ್ ಆಫೀಸ್​​ನಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿದೆ. ಈ ಚಿತ್ರ ಐದು ದಿನಕ್ಕೆ ಭಾರತದಲ್ಲಿ 500 ಕೋಟಿ ರೂಪಾಯಿ ಗಳಿಸಿ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಭಾರತದವರು ಪಾಕಿಸ್ತಾನಕ್ಕೆ ತೆರಳಿ, ಸ್ಪೈ ಮಾಡಿ ಅಲ್ಲಿನ ಭಯೋತ್ಪಾದನಾ ಲೋಕವನ್ನು ನಾಶ ಮಾಡುವ ರೀತಿಯಲ್ಲಿ ‘ಧುರಂಧರ್ 2’ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಭಾರತದ ಗೂಢಚಾರಿಗಳಿಗಾಗಿ ಹುಡುಕಾಟ ನಡೆದಿದೆ.

ಜಸ್ಕಿರತ್ ಸಿಂಗ್ ರಂಗಿ ಅಮೆರಿಕಕ್ಕೆ ತೆರಳಿ ಹಮ್ಜಾ ಅಲಿ ಆಗುತ್ತಾನೆ. ಅಲ್ಲಿ ಪಾಕ್​​ನೇ ಆಳುತ್ತಾನೆ. ಪಾಕ್​​ ದೇಶವನ್ನೇ ನಡುಗಿಸುತ್ತಾನೆ. ಆತ ಭಾರತದ ಸ್ಪೈ ಅನ್ನೋ ವಿಷಯ ಕೊನೆಯಲ್ಲಿ ತಿಳಿಯುತ್ತದೆ. ಇದರ ಜೊತೆಗೆ ಇನ್ನೂ ಕೆಲವು ಸ್ಪೈಗಳು ಪಾಕಿಸ್ತಾನದಲ್ಲಿ ಇರುತ್ತಾರೆ. ಈ ರೀತಿಯಲ್ಲಿ ‘ಧುರಂಧರ್ 2’ ಸಿನಿಮಾ ಮೂಡಿ ಬಂದಿದೆ. ಈ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಪಾಕ್​​ನಲ್ಲಿ ಭಾರತೀಯ ಸ್ಪೈಗಳಿಗಾಗಿ ಹುಡುಕಾಟ ನಡೆದಿದೆ ಎಂಬ ವಿಡಿಯೋ ವೈರಲ್ ಆಗಿದೆ.

ಭದ್ರತಾ ಸಿಬ್ಬಂದಿಗಳು ರಸ್ತೆ ಅಂಚಲ್ಲಿ ಮಲಗಿರೋ ಭಿಕ್ಷುಕರ ಹಾಗೂ ಇತರರನ್ನು ನಿಲ್ಲಿಸಿ ಪರೀಕ್ಷೆ ಮಾಡುವ ವಿಡಿಯೋ ಇದಾಗಿದೆ. ಭದ್ರತಾ ಸಿಬ್ಬಂದಿ ರಸ್ತೆ ಬದಿಯಲ್ಲಿ ಮಲಗಿದವರ ಬ್ಲ್ಯಾಂಕೆಟ್​ ತೆಗೆದು ಪರೀಕ್ಷೆ ಮಾಡಿ, ಪ್ರಶ್ನೆ ಮಾಡುತ್ತಿರುವುದು ವಿಡಿಯೋದಲ್ಲಿದೆ. ‘ಧುರಂಧರ್ 2’ ಚಿತ್ರದ ಎಫೆಕ್ಟ್ ಎಂದು ಇದನ್ನು ಕರೆಯಲಾಗುತ್ತಾ ಇದೆ. ಇದನ್ನು ಅನೇಕರು ನಂಬಿದ್ದಾರೆ.

ಇದನ್ನೂ ಓದಿ: ರಣವೀರ್ ಸಿಂಗ್ ಮುಂದೆ ಬೇರೆ ಹೀರೋಗಳೆಲ್ಲ ಜೋಕರ್​ಗಳು; ಆರ್​ಜಿವಿ ಟೀಕೆ

ಆದರೆ, ಇದರ ಅಸಲಿಯತ್ತು ಬೇರೆ ಇದೆ. ಇದು ಹೊಸ ವಿಡಿಯೋ ಅಲ್ಲ. ಇದು ಕರಾಚಿ, ಅದರಲ್ಲೂ ಲಿಯಾರಿ ಭಾಗದಲ್ಲಿ ನಡೆದ ಹಳೆಯ ಪೊಲೀಸ್ ಕಾರ್ಯಾಚರಣೆಯ ಭಾಗವಾಗಿರಬಹುದು ಎಂದು ಹೇಳಲಾಗುತ್ತಾ ಇದೆ. ಇದೇ ರೀತಿಯ ಕ್ಲಿಪ್‌ಗಳು 2025ರ ಮಧ್ಯಭಾಗದಿಂದಲೂ ಹರಿದಾಡುತ್ತಿವೆ. ಆಗಿನ್ನೂ ‘ಧುರಂಧರ್’ ರಿಲೀಸ್ ಕೂಡ ಆಗಿರಲಿಲ್ಲ. ಈಗ ಸಿನಿಮಾ ರಿಲೀಸ್ ಬಳಿಕ ವಿಡಿಯೋ ಈ ರೀತಿಯಲ್ಲಿ ವೈರಲ್ ಆಗುತ್ತಿದೆ.

ಪಾಕಿಸ್ತಾನದಲ್ಲಿ ‘ಧುರಂಧರ್ 2’ ಸಿನಿಮಾ ರಿಲೀಸ್ ಆಗಿಲ್ಲ. ಆದರೆ, ಪೈರಸಿ ಕಾಪಿಗಳು ಈಗಾಗಲೇ ಪಾಕ್​​ನಲ್ಲಿ ಜೋರಾಗಿ ಹರಿದಾಡುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *