
ಮೀನ ರಾಶಿಯಲ್ಲಿ ಮಂಗಳ ಮತ್ತು ಶನಿಯರ ಸಂಯೋಗವು ಜ್ಯೋತಿಷ್ಯ ಶಾಸ್ತ್ರದಲ್ಲಿ ದ್ವಂದ್ವ ಯುದ್ಧದಂತೆ ಭಾಸವಾಗುತ್ತದೆ. ಶನಿಯು ಶಿಸ್ತು, ನಿಧಾನಗತಿ ಮತ್ತು ಕರ್ಮದ ಸಂಕೇತವಾದರೆ, ಮಂಗಳನು ವೇಗ, ಆವೇಶ ಮತ್ತು ಶಕ್ತಿಯ ಪ್ರತೀಕ. ಈ ಎರಡು ಶಕ್ತಿಗಳು ಮೀನ ಎಂಬ ಜಲತತ್ವದ ರಾಶಿಯಲ್ಲಿ ಸಂಧಿಸಿದಾಗ ಉಂಟಾಗಲಿದೆ.
ಜಾಗತಿಕ ಮತ್ತು ಸಾಮಾಜಿಕ ಪ್ರಭಾವಗಳು
ಮೀನ ರಾಶಿಯು ಸಮುದ್ರ ಮತ್ತು ಜಲಮೂಲಗಳನ್ನು ಪ್ರತಿನಿಧಿಸುವುದರಿಂದ, ಈ ಯುತಿಯು ಜಗತ್ತಿನಾದ್ಯಂತ ಸಂಚಲನ ಮೂಡಿಸುತ್ತದೆ.
ನೈಸರ್ಗಿಕ ಬದಲಾವಣೆ: ಸಮುದ್ರದಲ್ಲಿ ಚಂಡಮಾರುತ, ಸುನಾಮಿ ಅಥವಾ ಅನಿರೀಕ್ಷಿತ ಮಳೆ ಹೆಚ್ಚಾಗಬಹುದು. ನೌಕಾಪಡೆ ಅಥವಾ ಜಲಸಾರಿಗೆ ಕ್ಷೇತ್ರದಲ್ಲಿ ತಾಂತ್ರಿಕ ಅಡಚಣೆಗಳು ಎದುರಾಗಬಹುದು.
ರಾಜಕೀಯ ಅಸ್ಥಿರತೆ: ಗಡಿ ವಿವಾದಗಳು ತಾರಕಕ್ಕೇರಬಹುದು. ವಿಶೇಷವಾಗಿ ದಕ್ಷಿಣ ಅಥವಾ ನೈಋತ್ಯ ದಿಕ್ಕಿನ ದೇಶಗಳಲ್ಲಿ ಆಂತರಿಕ ಕಲಹಗಳು ಉಂಟಾಗುವ ಸಾಧ್ಯತೆ ಇರುತ್ತದೆ.
ಔಷಧೀಯ ಕ್ಷೇತ್ರ: ಹೊಸ ರೋಗಗಳ ಉಗಮ ಅಥವಾ ಇರುವ ರೋಗಗಳಿಗೆ ಹೊಸ ಔಷಧಗಳ ಸಂಶೋಧನೆಯಲ್ಲಿ ಈ ಗ್ರಹಗತಿಗಳು ವೇಗ ನೀಡುತ್ತವೆ.
ಲಾಭದಾಯಕ ಸ್ಥಿತಿ
ಆರ್ಥಿಕ ಸ್ಥಿರತೆ: ಇವರಿಗೆ ಅನಿರೀಕ್ಷಿತವಾಗಿ ಸಿಗಬೇಕಾದ ಹಣಕಾಸು ಸೌಲಭ್ಯಗಳು ದೊರೆಯಲಿವೆ. ಹಳೆಯ ಆಸ್ತಿ ವಿವಾದಗಳು ಇವರ ಪರವಾಗಿ ತೀರ್ಪು ಬರಬಹುದು.
ಧೈರ್ಯ ಮತ್ತು ಸಾಹಸ: ಮಂಗಳನ ಪ್ರಭಾವದಿಂದ ಹೊಸ ಉದ್ಯಮ ಆರಂಭಿಸಲು ಬೇಕಾದ ಧೈರ್ಯ ಸಿಗುತ್ತದೆ, ಶನಿಯು ಅದಕ್ಕೆ ದೀರ್ಘಕಾಲದ ಭದ್ರತೆಯನ್ನು ನೀಡುತ್ತಾನೆ.
ಸವಾಲಿನ ಸ್ಥಿತಿ
ಮಾನಸಿಕ ದ್ವಂದ್ವ: ಮಾಡಬೇಕೋ ಬೇಡವೋ ಎಂಬ ಗೊಂದಲ ಇವರನ್ನು ಕಾಡಬಹುದು. ಶನಿಯು ತಡೆಹಿಡಿದರೆ ಮಂಗಳನು ತಳ್ಳುತ್ತಾನೆ, ಇದು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ.
ಅಪಘಾತದ ಭಯ: ವಾಹನ ಚಾಲನೆ ಮಾಡುವಾಗ ಅತೀವ ಜಾಗರೂಕತೆ ಇರಲಿ. ರಕ್ತದೊತ್ತಡ ಅಥವಾ ಉಷ್ಣ ಸಂಬಂಧಿ ಕಾಯಿಲೆಗಳು ಬಾಧಿಸಬಹುದು.
ಸಂಬಂಧಗಳಲ್ಲಿ ಬಿರುಕು: ಕುಟುಂಬದಲ್ಲಿ ಹಿರಿಯರೊಂದಿಗೆ ವಾಗ್ವಾದ ಉಂಟಾಗಬಹುದು. ಮಾತಿನ ಮೇಲೆ ನಿಗಾ ಇಡುವುದು ಅನಿವಾರ್ಯ.
ವೃತ್ತಿ ಮತ್ತು ಆರ್ಥಿಕತೆಯ ಮೇಲೆ ಪ್ರಭಾವ
ಕಬ್ಬಿಣ ಮತ್ತು ಯಂತ್ರೋಪಕರಣ: ಈ ಕ್ಷೇತ್ರದಲ್ಲಿ ಇರುವವರಿಗೆ ಲಾಭದ ಜೊತೆಗೆ ಹೆಚ್ಚಿನ ಕೆಲಸದ ಒತ್ತಡವಿರುತ್ತದೆ.
ರಿಯಲ್ ಎಸ್ಟೇಟ್: ಭೂಮಿ ಖರೀದಿ ಅಥವಾ ಮಾರಾಟ ಪ್ರಕ್ರಿಯೆಯಲ್ಲಿ ಕಾನೂನು ತೊಡಕುಗಳು ಎದುರಾಗಬಹುದು. ದಾಖಲೆಗಳನ್ನು ಸರಿಯಾಗಿ ಪರಿಶೀಲಿಸುವುದು ಉತ್ತಮ.
ಷೇರು ಮಾರುಕಟ್ಟೆ: ಪೆಟ್ರೋಲಿಯಂ, ರಾಸಾಯನಿಕ ಮತ್ತು ರಕ್ಷಣಾ ವಲಯದ ಷೇರುಗಳಲ್ಲಿ ಏರಿಳಿತ ಕಂಡುಬರಬಹುದು.
ಆಧ್ಯಾತ್ಮಿಕ ಮತ್ತು ಮಾನಸಿಕ ಪರಿಣಾಮ
ಮೀನ ರಾಶಿಯು ಆಧ್ಯಾತ್ಮದ ನೆಲೆ. ಇಲ್ಲಿ ಈ ಎರಡು ಪಾಪ ಗ್ರಹಗಳ ಭೇಟಿಯು ವ್ಯಕ್ತಿಯಲ್ಲಿ ವೈರಾಗ್ಯ ಅಥವಾ ತೀವ್ರ ಜಿಜ್ಞಾಸೆಯನ್ನು ಹುಟ್ಟಿಸುತ್ತದೆ. ಕೆಟ್ಟ ಹವ್ಯಾಸಗಳಿಂದ ದೂರವಿರಲು ಇದು ಸುಸಮಯ. ಧ್ಯಾನ ಮತ್ತು ಪ್ರಾಣಾಯಾಮದ ಮೂಲಕ ಮಂಗಳನ ಆವೇಶವನ್ನು ಶಾಂತಗೊಳಿಸಿ ಶನಿಯ ಸ್ಥಿರತೆಯನ್ನು ಪಡೆಯಬಹುದು.
ಪರಿಣಾಮಕಾರಿ ಪರಿಹಾರಗಳು ಸುಬ್ರಹ್ಮಣ್ಯ ಆರಾಧನೆ: ಮಂಗಳನ ದೋಷ ನಿವಾರಣೆಗೆ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಅಥವಾ ಷಷ್ಠಿ ಪಾರಾಯಣ ಮಾಡುವುದು ಶ್ರೇಯಸ್ಕರ. ಶನಿವಾರದಂದು ಅಶ್ವತ್ಥ ಮರದ ಕೆಳಗೆ ಎಳ್ಳೆಣ್ಣೆ ದೀಪ ಹಚ್ಚುವುದು ಮತ್ತು ಬಡವರಿಗೆ ಅನ್ನದಾನ ಮಾಡುವುದು ಶುಭ ತರುತ್ತದೆ.
– ಲೋಹಿತ ಹೆಬ್ಬಾರ್