
ಕೆಲವೇ ವರ್ಷಗಳಿಗೆ ಹಣವನ್ನು ಇರಿಸಬೇಕೆನ್ನುವವರಿಗೆ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ಗಳು (Fixed Deposit) ಉತ್ತಮ ಎನಿಸುತ್ತವೆ. ಆರ್ಬಿಐನ ರಿಪೋ ದರ ಬದಲಾವಣೆಗೆ ಅನುಗುಣವಾಗಿ ಎಫ್ಡಿ ದರಗಳೂ ಬದಲಾಗಬಹುದು. ಸಾಮಾನ್ಯವಾಗಿ 1 ವರ್ಷ ಮೇಲ್ಪಟ್ಟ ಅವಧಿಗಳ ಠೇವಣಿಗಳಿಗೆ ಶೇ. 6ಕ್ಕಿಂತಲೂ ಹೆಚ್ಚು ಬಡ್ಡಿ ಸಿಗುತ್ತದೆ. ಕೆಲ ಬ್ಯಾಂಕುಗಳು ಕೆಲ ಅವಧಿಗಳ ಠೇವಣಿಗಳಿಗೆ ಗರಿಷ್ಠ ಬಡ್ಡಿ ಆಫರ್ ಮಾಡುತ್ತವೆ. ಕಮರ್ಷಿಯಲ್ ಬ್ಯಾಂಕುಗಳು ಇಂದು ಶೇ. 7.75ರವರೆಗೆ ಎಫ್ಡಿ ದರಗಳನ್ನು ಹೊಂದಿವೆ. ಕೆಲ ಪ್ರಮುಖ ಬ್ಯಾಂಕುಗಳಲ್ಲಿನ ಡೆಪಾಸಿಟ್ ರೇಟ್ಗಳ ವಿವರ ಈ ಕೆಳಕಂಡಂತಿದೆ:
ಎಸ್ಬಿಐನಲ್ಲಿ ಎಫ್ಡಿ ದರಗಳು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಮಾನ್ಯ ಗ್ರಾಹಕರ 2-3 ವರ್ಷದ ಠೇವಣಿಗಳಿಗೆ ಶೇ. 6.45 ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇ. 6.95 ಬಡ್ಡಿ ಇರುತ್ತದೆ. 1 ವರ್ಷದ ಮೇಲ್ಪಟ್ಟ ಎಲ್ಲಾ ಅವಧಿ ಠೇವಣಿಗಳಿಗೂ ಶೇ. 6ಕ್ಕಿಂತಲೂ ಹೆಚ್ಚು ಬಡ್ಡಿಯನ್ನು ಎಸ್ಬಿಐ ನೀಡುತ್ತದೆ. ಹಿರಿಯ ನಾಗರಿಕರಿಗೆ 5ರಿಂದ 10 ವರ್ಷದ ಠೇವಣಿಗೆ ಶೇ. 7.05ರಷ್ಟು ಬಡ್ಡಿ ಸಿಗುತ್ತದೆ. ಇದು ವೃದ್ಧರಿಗೆ ಎಸ್ಬಿಐ ನೀಡುತ್ತಿರುವ ದೊಡ್ಡ ಗಿಫ್ಟ್.
ಇದನ್ನೂ ಓದಿ: ಇಪಿಎಫ್, ಎನ್ಪಿಎಸ್ ಮತ್ತು ಮ್ಯೂಚುವಲ್ ಫಂಡ್; ರಿಟೈರ್ಮೆಂಟ್ ಪ್ಲಾನಿಂಗ್ಗೆ ಯಾವುದು ಉತ್ತಮ?
ಕೋಟಕ್ ಮಹೀಂದ್ರ ಬ್ಯಾಂಕ್ ಎಫ್ಡಿ ದರಗಳು
ಕೋಟಕ್ ಮಹೀಂದ್ರ ಬ್ಯಾಂಕ್ನಲ್ಲಿ ಎಫ್ಡಿಗಳು 7 ದಿನದಿಂದ ಹಿಡಿದು 10 ವರ್ಷದವರೆಗೆ ಇವೆ. ಸಾಮಾನ್ಯ ಗ್ರಾಹಕರಿಗೆ 15 ತಿಂಗಳಿಂದ 3 ವರ್ಷದವರೆಗಿನ ಠೇವಣಿಗಳಿಗೆ ಶೇ 6.70 ಬಡ್ಡಿ ಸಿಗುತ್ತದೆ. ಇದು ಇವರಿಗೆ ಈ ಬ್ಯಾಂಕ್ ನೀಡುವ ಬೆಸ್ಟ್ ಪ್ರೈಸ್. ಹಿರಿಯ ನಾಗರಿಕರಿಗೆ ಶೇ. 7.20ರವರೆಗೂ ಬಡ್ಡಿ ಇದೆ.
ಎಚ್ಡಿಎಫ್ಸಿ ಬ್ಯಾಂಕ್ ಎಫ್ಡಿ ದರಗಳು
ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಎಫ್ಡಿ ದರಗಳು ಸಾಮಾನ್ಯ ಗ್ರಾಹಕರಿಗೆ ಶೇ. 2.75ರಿಂದ ಶೇ. 6.50ರವರೆಗೆ ಇವೆ. 1 ವರ್ಷ ಮೇಲ್ಪಟ್ಟ ಠೇವಣಿಗಳೆಲ್ಲವಕ್ಕೂ ಬಡ್ಡಿದರ ಶೇ. 6 ಹಾಗೂ ಹೆಚ್ಚು ಇದೆ. 3 ವರ್ಷದಿಂದ 4 ವರ್ಷ 7 ತಿಂಗಳವರೆಗಿನ ಠೇವಣಿಗೆ ಗರಿಷ್ಠ ಶೇ. 6.50 ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರ ಎಲ್ಲಾ ಠೇವಣಿಗಳಿಗೆ ರೆಗ್ಯುಲರ್ ಕಸ್ಟಮರ್ಗಳಿಗಿಂತ ಶೇ. 0.5ರಷ್ಟು ಹೆಚ್ಚು ಬಡ್ಡಿ ಸಿಗುತ್ತದೆ.
ಯೆಸ್ ಬ್ಯಾಂಕ್ನಲ್ಲಿ ಎಫ್ಡಿ ದರಗಳು
ಕಮರ್ಷಿಯಲ್ ಬ್ಯಾಂಕುಗಳ ಪೈಕಿ ಯೆಸ್ ಬ್ಯಾಂಕ್ ಅತಿಹೆಚ್ಚು ಎಫ್ಡಿ ದರಗಳನ್ನು ಆಫರ್ ಮಾಡುತ್ತಿದೆ. ಸಾಮಾನ್ಯ ಗ್ರಾಹಕರಿಗೆ ಶೇ. 7ರವರೆಗೆ ಬಡ್ಡಿ ಇದ್ದರೆ, ಹಿರಿಯ ನಾಗರಿಕರಿಗೆ ಬರೋಬ್ಬರಿ ಶೇ. 7.75 ಬಡ್ಡಿ ಆಫರ್ ಮಾಡಲಾಗಿದೆ. 36 ತಿಂಗಳಿಂದ 60 ತಿಂಗಳ (3-5 ವರ್ಷ) ಠೇವಣಿಗಳಿಗೆ ಹಿರಿಯ ನಾಗರಿಕರು ಶೇ. 7.75 ಬಡ್ಡಿ ಪಡೆಯುತ್ತಾರೆ. 12 ತಿಂಗಳ ಮೇಲ್ಪಟ್ಟ ಎಲ್ಲಾ ಠೇವಣಿಗಳಿಗೆ ಸಾಮಾನ್ಯ ಗ್ರಾಹಕರೂ ಕೂಡ ಶೇ. 6.75ಕ್ಕಿಂತ ಹೆಚ್ಚು ಬಡ್ಡಿ ಪಡೆಯಲು ಅವಕಾಶ ಇದೆ.
ಇದನ್ನೂ ಓದಿ: ಗೋಲ್ಡ್ ಒಡಿ, ಇದು ಒಡವೆ ಸಾಲಕ್ಕಿಂತ ಎಷ್ಟು ಭಿನ್ನ, ಎಷ್ಟು ಉಪಯುಕ್ತ? ಇಲ್ಲಿದೆ ಮಾಹಿತಿ
ಐಸಿಐಸಿಐ ಬ್ಯಾಂಕ್ ಎಫ್ಡಿ ದರಗಳು
ಎರಡನೇ ಅತಿದೊಡ್ಡ ಖಾಸಗಿ ಬ್ಯಾಂಕ್ ಎನಿಸಿದ ಐಸಿಐಸಿಐ ಬ್ಯಾಂಕ್ನಲ್ಲಿ ಸಾಮಾನ್ಯ ಗ್ರಾಹಕರು ಎಫ್ಡಿಗಳಲ್ಲಿ ಶೇ. 6.50ರವರೆಗೆ ಬಡ್ಡಿ ಪಡೆಯಬಹುದು. 3 ವರ್ಷ ಮೇಲ್ಪಟ್ಟ ಠೇವಣಿಗಳಿಗೆ ಗರಿಷ್ಠ ಬಡ್ಡಿ ಕೊಡಲಾಗುತ್ತದೆ. ಹಿರಿಯ ನಾಗರಿಕರಿಗೆ 3-5 ವರ್ಷದ ಠೇವಣಿಗೆ ಶೇ. 7.10ರಷ್ಟು ಬಡ್ಡಿ ಪಡೆಯಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ